26 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ: ಸಂಘದ ಸದಸ್ಯರಿಗೆ ಶೇ. 13 ಡಿವಿಡೆಂಟ್ ಘೋಷಣೆ

ನಾಳ : ನಾಳ ಕ್ಷೀರ ಗಂಗಾ ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.14 ರಂದು ಸಂಘದ ವಠರಾದಲ್ಲಿ ನಡೆಯಿತು.

ಸಂಘವು ವರ್ಷ ವರ್ಷ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಕಳೆದ ಬಾರಿಗಿಂತ ಈ ಸಲ ಹಾಲು 23% ಜಾಸ್ತಿಯಾಗಿದೆ. ಹಾಲು ಉತ್ಪಾದನೆಯಲ್ಲಿ ದ. ಕ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ವ್ಯವಸ್ಥೆಯಲ್ಲಿ ಈಗ ತುಂಬಾ ಬದಲಾವಣೆಯಾಗಿದೆ. ಪಶು ವೈದ್ಯಕೀಯ ಸೇವೆಗೆ ಬೆಳ್ತಂಗಡಿಯಲ್ಲಿ ಎರಡು ಆಂಬುಲೆನ್ಸ್ ಕಾರ್ಯಾಚರಿಸುತ್ತಿದೆ. ಸುಮಾರು 23 ಯೋಜನೆಗಳು ನಮ್ಮಲ್ಲಿ ಇದೆ ಎಂದು ದ.ಕ.ಒಕ್ಕೂಟದ ವಿಸ್ತಾರಣಾಧಿಕಾರಿ ರಾಜೇಶ್ ಪಿ.ಕಾಮತ್ ಸಂಘದ ಸದಸ್ಯರಿಗೆ ಮಾಹಿತಿ ನೀಡಿ, ಸಂಘದ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಕೇಶವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹೊಸ ಯೋಜನೆಯಾದ ಅಂಗಣಕ್ಕೆ ಇಂಟರ್ಲಾಕ್ ಮತ್ತು ಮಂಗಗಳ ಹಾವಳಿಗೆ ನೆಟ್ ನ್ನು ಈ ಸಲ ಮಾಡಲಾಗುವುದು. ಕಳೆದ ಬಾರಿಗಿಂತ ಈ ಸಲ ಹಾಲಿನ ವ್ಯವಹಾರ ಹೆಚ್ಚಳವಾಗಿದೆ ನಮ್ಮ ಸಂಘದ ಸದಸ್ಯರು ಗುಣಮಟ್ಟದ ಹಾಲು ಪೂರೈಕೆ ಹಾಗೂ ಸಂಘದ ಪಶು ಆಹಾರವನ್ನು ಸಂಘದ ಮೂಲಕ ಸದಸ್ಯರು ಖರೀದಿ ಮಾಡುವ ಮೂಲಕ ಸಂಘವೂ ಲಾಭ ಗಳಿಸಲು ಸಾಧ್ಯವಾಯಿತು. ಸದಸ್ಯರ ಮತ್ತು ಸಿಬ್ಬಂದಿಗಳ ಸಂಪೂರ್ಣವಾದ ಸಹಕಾರದ ಅಗತ್ಯವಿದೆ ಎಂದು ಹೇಳಿದರು.

ಸಂಘದಲ್ಲಿ ಒಟ್ಟು 16,26658 ವ್ಯವಹಾರ ಹಾಗೂ 389911 ನಿವ್ವಳ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಶೇ. 13 ಡಿವಿಡೆಂಟ್ ಸಭೆಯಲ್ಲಿ ಘೋಷಿಸಿದರು.

ಪಶುವೈದ್ಯರು ಡಾ. ಗಣಪತಿ ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ಸುಧಾಕರ ನ್ಯಾಕ್, ಬಾಲಕೃಷ್ಣ ಶೆಟ್ಟಿ, ವಿಠಲ ಗೌಡ., ಬೊಮ್ಮನ ಗೌಡ, ಶ್ರೀಧರ್ ಪೂಜಾರಿ, ರಮೇಶ್ ಶೆಟ್ಟಿ, ಜಗದೀಶ್, ರೇಖಾ, ರೀತಾ, ವಿಜಯ, ಲೀಲಾವತಿ ಉಪಸ್ಥಿತರಿದ್ದರು.


ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡುವ ಸದಸ್ಯರಾದ ರೊನಾಲ್ಡ್ ಮೋನೀಸ್ (ಪ್ರಥಮ), ಸಂಘದ ನಿರ್ದೇಶಕರ ರೀತಾ (ದ್ವೀತಿಯ), ನಿರ್ದೇಶಕರಾದ ಜಗದೀಶ್ ಪೂಜಾರಿ (ತೃತೀಯ) ಇವರನ್ನು ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ : ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ಹತ್ತನೇ ತರಗತಿ ಮತ್ತು ಪಿಯುಸಿ ಯಲ್ಲಿ ಅಧಿಕ ಆಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಂಘದ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಎಂ. ವಾರ್ಷಿಕ ವರದಿಯನ್ನು ಓದಿದರು. ಸಂಘದ ಹಾಲು ಪರೀಕ್ಷಕ ಪ್ರಮೋದ್. ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಸೋಮಪ್ಪ ಗೌಡ ವಂದಿಸಿದರು.

Related posts

ಎಸ್‌ಡಿಎಂ ನ್ಯಾಚುರೋಪತಿ & ಯೋಗ ಸಂಸ್ಥೆಗಳ ನಿರ್ದೇಶಕರಾಗಿ ನೇಮಕಗೊಂಡ ಡಾ. ಪ್ರಶಾಂತ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಕಾರ್ಯನಿರ್ವಹಣಾ ತಂಡದ ಸಭೆ

Suddi Udaya

ಸುದ್ದಿ ಉದಯ ಫಲಶ್ರುತಿ: ಮದ್ದಡ್ಕ ಪೇಟೆಯಲ್ಲಿ ಸರ್ವಿಸ್ ವಯಾರು ತೆರವುಗೊಳಿಸಿದ ಮೆಸ್ಕಾಂ ಇಲಾಖೆ

Suddi Udaya

ಪೆರ್ಲ ಕ್ಲಸ್ಟರ್ ನ ಪ್ರತಿಭಾ ಕಾರಂಜಿ: ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಗೆ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

Suddi Udaya

ಉಜಿರೆ ರುಡ್‌ಸೆಟ್ ನಲ್ಲಿ ಇಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿಯ ಸಮಾರೋಪ ಸಮಾರಂಭ

Suddi Udaya

ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಶ್ರಮದಾನ

Suddi Udaya
error: Content is protected !!