23.7 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡಂಗಡಿ ಸರಕಾರಿ ‌ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪಡಂಗಡಿ: ಸರಕಾರಿ ‌ಪ್ರೌಢಶಾಲೆ ಪಡಂಗಡಿ ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಪಡಂಗಡಿಯ ನಿಕಟ ಪೂರ್ವ ಉಪಾಧ್ಯಕ್ಷೆ ಶ್ರೀಮತಿ ವಸಂತಿ ಪಿ. ಎನ್ ಧ್ವಜಾರೋಹಣವನ್ನು ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾ ಬ್ಯಾಂಕ್ ಗುರುವಾಯನಕೆರೆ ಇಲ್ಲಿನ ವ್ಯವಸ್ಥಾಪಕ ರಾಜಶೇಖರ್ ಅವರು ಡಿಜಿಟಲ್ ಭಾರತದ ಅಭಿವೃದ್ಧಿಯ ಕುರಿತು ತಿಳಿಸಿದರು.

ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಪೀಟರ್ ಮೋನಿಸ್ ಅವರು ಶುಭ ಹಾರೈಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಅನ್ನಮ್ಮ ವಿ.ಎಂ. ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೆನರಾ ಬ್ಯಾಂಕ್ ವತಿಯಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ಬಹುಮಾನಗಳ ಪಟ್ಟಿಯನ್ನು ಹಾಸಿರ್ ಓದಿದರು. ಮಹಮ್ಮದ್ ಶಾನಿಫ್ ಸ್ವಾಗತಿಸಿದರು. ಶೈನಿತ್ ವಂದಿಸಿದರು. ಫಾತಿಮಾ ಶನಾ , ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಪಡಂಗಡಿ ಹಾಗೂ ಸ್ಥಳೀಯ ವಿದ್ಯಾಭಿಮಾನಿಗಳು ಆಗಿರುವ ಉಸ್ಮಾನ್ ಅವರು ನೀಡಿದ ಸಿಹಿ ತಿಂಡಿಗಳನ್ನು ವಿತರಿಸಲಾಯಿತು. ಶಾಲಾ ಎಸ್‌ಡಿಎಂಸಿ ಸದಸ್ಯರು, ಶಾಲಾ ನಾಯಕ ಸಂಪ್ರೀತ್ ಹಾಗೂ ಪೋಷಕರು ಶಿಕ್ಷಕರು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಲಾಯಿಲ ಕರ್ನೋಡಿ ಸ.ಹಿ.ಪ್ರಾ. ಶಾಲೆಯ ನವೀಕರಿಸಿದ ಶಾಲಾ ಕಟ್ಟಡ ಹಸ್ತಾಂತರ

Suddi Udaya

ದೆಹಲಿಯಿಂದ ಬೆಂಗಳೂರಿಗೆ ನಿರಂತರ ಕಾರು ಪ್ರಯಾಣ: ಕೇಶವ ಪ್ರಸಾದ್ ಮುಳಿಯ ಮತ್ತು ಡಾ. ಅನಿಲ್ ಎಸ್. ಬೈಪಾಡಿತ್ತಾಯ ಅವರಿಂದ ವಿಶ್ವದಾಖಲೆ

Suddi Udaya

ಪಟ್ರಮೆ ವ್ಯಾಪ್ತಿಯಲ್ಲಿ ಶಾಸಕ ಹರೀಶ್ ಪೂಂಜರಿಂದ ಮನೆ ಮನೆಗೆ ಭೇಟಿ ನೀಡಿ ಚುನಾವಣಾ ಪ್ರಚಾರ

Suddi Udaya

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸಮ್ಮರ್ ಸ್ಪಾರ್ಕ್ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರದರ್ಶನ-ಮಾರಾಟ ಮೇಳ

Suddi Udaya

ಬಿ.ಸಿ ರೋಡ್‌ನಲ್ಲಿ ಯುವತಿಯ ಬರ್ಬರ ಹತ್ಯೆ ಪ್ರಕರಣ; ಆರೋಪಿಗೆ ಕಠಿಣ ಕಾನೂನು ಕ್ರಮ ಜರುಗಿಸಲು ಸಂಸದ ಕ್ಯಾ. ಚೌಟರಿಂದ ಪೊಲೀಸ್ ಇಲಾಖೆಗೆ ಆಗ್ರಹ

Suddi Udaya

ಯುವ ಕಾಂಗ್ರೆಸ್ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಪವನ್ ಸಾಲ್ಯಾನ್ ಆಯ್ಕೆ

Suddi Udaya
error: Content is protected !!