23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ತುಡಿತ ಭಾಗ ಆರು

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಧರ್ಮಸ್ಥಳ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಯಲ್ಲಿ ಬಿತ್ತುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಆಗಾಗ ಆಯೋಜಿಸುತ್ತಿದ್ದು ಇದರಲ್ಲಿ ತುಡಿತ ಕಾರ್ಯಕ್ರಮವು ಒಂದು. ತನು ಸ್ಪಂದಿಸದವರ ಮನ ಸ್ಪಂದಿಸುವ ಈ ಕಾರ್ಯಕ್ರಮವು ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆದುಬಂದಿದೆ.

ಹಾಸಿಗೆ ಬಿಟ್ಟು ಮೇಲೆ ಹೇಳಲಾಗದ ವ್ಯಕ್ತಿಗಳ ಮನೆಗಳಿಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳು ಅವರ ಜೊತೆಗೆ ಮಾತನಾಡುತ್ತಾ ಹಾಡು ಹಾಡುತ್ತಾ, ಹರಟುತ್ತ ಕುಣಿಯುತ್ತ ಜಿಗಿಯುತ್ತ ಅವರ ಅಂತರಂಗವನ್ನು ಹಾಗೂ ಅವರಲ್ಲಿರುವ ಚೈತನ್ಯಕ್ಕೆ ಮತ್ತಷ್ಟು ಸ್ಪೂರ್ತಿ ತುಂಬುವ ಕಾರ್ಯವನ್ನು ಮಾಡುತ್ತಾರೆ. ಇಷ್ಟು ಮಾತ್ರವಲ್ಲದೆ ಅವರಿಗೆ ಹಣ್ಣು ಹಂಪಲು ಸಿಹಿ ತಿಂಡಿ ಹಾಗೂ ತನ್ನ ಕೈಲಾದಷ್ಟು ಧನ ಸಹಾಯವನ್ನು ಮಾಡುತ್ತಾ ಸ್ವಾತಂತ್ರ್ಯ ದಿನಾಚರಣೆಯ ಸವಿಯನ್ನು ಅವರ ಮನೆ ಹಾಗೂ ಮನಗಳಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಹಾಗೂ ಸುಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ನಿವೃತ್ತ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಯಾಗಿ ಬಿ ಸೋಮಶೇಖರ ಶೆಟ್ಟಿ ಇವರು ತುಡಿತ ಕಿಟ್ಟನ್ನು ತುಡಿತ ತಂಡಕ್ಕೆ ವಿತರಿಸುವ ಮುಖಾಂತರ ಈ ಬಾರಿಯ ಆರನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳ ಹಾಗೂ ಶಾಲೆಯ ಈ ಕಾರ್ಯಕ್ರಮದ ಕುರಿತು ಶ್ಲಾಘಿಸುತ್ತಾ ಮಾನವೀಯ ಮೌಲ್ಯಗಳ ಮಹತ್ವ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಅದರ ಅಗತ್ಯ ಅದನ್ನು ಮುಂದುವರಿಸುವ ರೀತಿ ಇತ್ಯಾದಿಗಳನ್ನು ಉದಾಹರಣೆಯೊಂದಿಗೆ ಕಥೆಗಳೊಂದಿಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯನ ಶ್ರೀಮತಿ ಪರಿಮಳ ಎಂ ವಿ ತುಡಿತದ ಹಿಂದಿನ ಉದ್ದೇಶ ಹಾಗೂ ವಿದ್ಯಾರ್ಥಿಗಳಿಗೆ ಅವುಗಳ ಅಗತ್ಯ ಇತ್ಯಾದಿಗಳನ್ನು ವಿವರಿಸಿದರು. ತುಡಿತದ ಪ್ರಾರಂಭ ಹಾಗೂ ನಡೆದು ಬಂದ ದಾರಿ ಹಾಗೂ ಮುಂದೆ ನಡೆಯುವಂತಹ ಕಾರ್ಯ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಇದಾದ ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಂಡವಾಗಿ ಧರ್ಮಸ್ಥಳದ ಬೇರೆ ಬೇರೆ ಮನೆಗಳಿಗೆ ತೆರಳಿ ಸಾಂತ್ವನ ನೀಡುವುದರ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ತನು ಸ್ಪಂದಿಸದವರ ಮನ ಸ್ಪಂದಿಸುವವರಿಗೆ ಹಣ್ಣು ಹಂಪಲು ಇತ್ಯಾದಿಗಳನ್ನು ಹಂಚಿ ಅವರ ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಮುಂದೆ ನಡೆಯುವ ಎಲ್ಲ ರಾಷ್ಟ್ರೀಯ ಹಬ್ಬಗಳು ಹಾಗೂ ಇನ್ನಿತರ ದಿನಗಳಂದು ಇಂತಹ ಮನೆಗಳಿಗೆ ಭೇಟಿ ನೀಡುವ ಸದುದ್ದೇಶದೊಂದಿಗೆ ತುಡಿತ ಆರನೆಯ ಆವೃತ್ತಿ ಸ್ವಾತಂತ್ರ್ಯೋತ್ಸವದ ನೆಪದೊಂದಿಗೆ ಪ್ರಾರಂಭಗೊಂಡಿತು. ಈ ಕಾರ್ಯಕ್ರಮ ಜೂನಿಯರ್ ರೆಡ್ ಕ್ರಾಸ್ ಹಾಗೂ ಭಾರತ್ ಸ್ಕೌಟ್ ಅಂಡ್ ಗೈಡ್ ಇದರ ಸಂಯೋಜನೆಯೊಂದಿಗೆ ಶಾಲಾ ಮುಖ್ಯೋಪಾಧ್ಯಾಯ ಪರಿಮಳ ಮಾರ್ಗದರ್ಶನದೊಂದಿಗೆ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ, ಧ್ವಜಾರೋಹಣಗೈದ ಮುಖ್ಯ ಅತಿಥಿಗಳಾದ ,ಭಾರತೀಯ ಸೇನೆಯ ಮಾಜಿ ಸೈನಿಕರು,ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿ ಜಯಕುಮಾರ್ ಉಪಸ್ಥಿತರಿದ್ದರು.

Related posts

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಫೌಂಡೇಶನ್‌ ತರಗತಿ ಆರಂಭ

Suddi Udaya

ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿಗೆ ಅರ್ಜಿ ಆಹ್ವಾನ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹಾಗೂ ಒಕ್ಕೂಟದ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ

Suddi Udaya

ವೇಣೂರು ಗ್ರಾಮ ಸಭೆ: ವೇಣೂರು ಪೇಟೆಯಲ್ಲಿ ಎಲ್ಲ ಅಂಗಡಿಗಳಿಗೆ ಗ್ರಾಮಸಭೆಯ ನೋಟೀಸ್ ನೀಡುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ರಾಜ್ಯಮಟ್ಟದ ಪುರುಷರ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್ – ಮಾದಪ್ಪ ಸ್ಮಾರಕ ಟ್ರೋಫಿ

Suddi Udaya

ಎಸ್.ಡಿ.ಎಂ. ಬಿ.ಎಡ್ , ಡಿ.ಇಎಲ್.ಇಡಿ ಹಾಗೂ ಶ್ರೀ ಧ.ಮಂ. ಮಹಿಳಾ ಐಟಿಐ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಕ್ರೀಡಾಕೂಟ

Suddi Udaya
error: Content is protected !!