31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಯೋಗ ಶಾಖೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: ಯೋಗ ಶಾಖೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಯೋಗಾಭ್ಯಾಸ, ರಾಷ್ಟ್ರಭಕ್ತಿ ಹಾಗೂ ದೇಶಪ್ರೇಮದ ಭಾವನೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಿತ್ಯದ ಯೋಗಾಭ್ಯಾಸದ ಬಳಿಕ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ, ಎಲ್ಲರೂ ಭಕ್ತಿಭಾವದಿಂದ ‘ವಂದೇ ಮಾತರಂ’ ಗೀತೆಯನ್ನು ಹಾಡುವ ಮೂಲಕ ಮಾತೃಭೂಮಿಗೆ ಗೌರವ ಸಮರ್ಪಿಸಿದರು.

ನಂತರ ನಡೆದ ಬೌದ್ಧಿಕ ಕಾರ್ಯಕ್ರಮವನ್ನು ಅಶ್ವತ್ ನಡೆಸಿಕೊಟ್ಟರು. ಸ್ವಾತಂತ್ರ್ಯವೆಂದರೆ ಕೇವಲ ಬಂಧನಗಳಿಂದ ಮುಕ್ತಿ ಪಡೆಯುವುದಲ್ಲ; ನಮ್ಮ ಸಂಸ್ಕೃತಿ, ಪರಂಪರೆ, ಮೌಲ್ಯಗಳು ಹಾಗೂ ರಾಷ್ಟ್ರದ ಬಗ್ಗೆ ಜವಾಬ್ದಾರಿಯುತವಾಗಿ ಬದುಕುವುದೇ ನಿಜವಾದ ಸ್ವಾತಂತ್ರ್ಯ ಎಂಬ ಸಂದೇಶವನ್ನು ಸಾರಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳ್ತಂಗಡಿ ಮಹಿಳಾ ಮಂಡಲದ ಅಧ್ಯಕ್ಷೆ ಉಮಾ ರಾವ್ ಅವರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ, ದೇಶದ ಏಕತೆ, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಮಹತ್ವವನ್ನು ನೆನಪಿಸಿದರು.

ಕಾರ್ಯಕ್ರಮದ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಗಣಪತಿ ನೆರವೇರಿಸಿದರು. ರಾಷ್ಟ್ರಭಕ್ತಿಯೊಂದಿಗೆ ನಡೆದ ಈ ಆಚರಣೆಯನ್ನು ಶಾಖೆಯ ಶಿಕ್ಷಕರಾದ ಕೋಮಲ ನಡಸಿಕೊಟ್ಟರು. ಶಾಖೆಯ ಸಂಚಾಲಕ ವಸಂತ ಹಾಗೂ ಯೋಗಬಂಧುಗಳು ಉಪಸ್ಥಿತರಿದ್ದರು.

Related posts

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಉದ್ಯಮಿ ರವೀಂದ್ರ ಪೂಜಾರಿ ಆರ್ಲರಿಂದ 6 ಛತ್ರ ಛಾಮರ ಸಮರ್ಪಣೆ

Suddi Udaya

ಗುಂಡೂರಿ: ಸಮೃದ್ದಿ ಗೃಹಪ್ರವೇಶ ಮುಂದೂಡಿಕೆ

Suddi Udaya

ಬೆಳ್ತಂಗಡಿ: ನವೋದಯ ವಿದ್ಯಾಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆಯ ತರಬೇತಿ ಪ್ರಾರಂಭ

Suddi Udaya

ಮಡಂತ್ಯಾರು ಜೇಸಿ ಸಪ್ತಾಹ ವಿಜಯ ಎಸ್.ಸಾಲಿಯಾನ್‌ರಿಗೆ ಉದ್ಯಮರತ್ನ ಪುರಸ್ಕಾರ”

Suddi Udaya

ಹೊಸಂಗಡಿ ಬಲ್ಲಂಗೇರಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.2ಲಕ್ಷ ಡಿಡಿ ವಿತರಣೆ

Suddi Udaya

ಬೈಂದೂರಿನಲ್ಲಿ ಶ್ರೀ ಬ್ರಹ್ಮಾನಂದಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ: ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಭೇಟಿ

Suddi Udaya
error: Content is protected !!