August 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಾಷ್ಟ್ರೀಯ ಐಸ್ ಹಾಕಿ ಪದಕ ವಿಜೇತ ನಿಶ್ಕ್ ಹರೀಶ್ ಸಾಲ್ಯಾನ್‌ಗೆ ಶಾಸಕ ಹರೀಶ್ ಪೂಂಜರಿಂದ ಸನ್ಮಾನ

ಕುತ್ಲೂರು: ಶಿವಶಕ್ತಿ ಫ್ರೆಂಡ್ಸ್ ಕ್ಲಬ್, ಕುತ್ಲೂರು ವತಿಯಿಂದ ಪೊಯ್ಯಲಡ್ಡ ಗದ್ದೆಯಲ್ಲಿ ಆಯೋಜಿಸಲಾದ “ಕೆಸರ್ದ ಗೊಬ್ಬು” ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಐಸ್ ಹಾಕಿ ಪದಕ ವಿಜೇತ ನಿಶ್ಕ್ ಹರೀಶ್ ಸಾಲ್ಯಾನ್ ಅವರನ್ನು ಶಾಸಕ ಹರೀಶ್ ಪೂಂಜ ಅವರು ಸನ್ಮಾನಿಸಿದರು.

2026ರ ಜೂನ್‌ನಲ್ಲಿ ಡೆಹ್ರಾಡೂನ್‌ನಲ್ಲಿ ನಡೆದ ರಾಷ್ಟ್ರೀಯ ಐಸ್ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು 12 ವರ್ಷದೊಳಗಿನವರ ವಿಭಾಗದಲ್ಲಿ ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದ ಸಾಧನೆಗಾಗಿ ನಿಶ್ಕ್ ಅವರನ್ನು ಗೌರವಿಸಲಾಯಿತು.

ಕುತ್ಲೂರಿನ ಸಮೃದ್ಧಿ ನಿವಾಸಿ ಹರೀಶ್ ಡಾಕಯ್ಯ ಮತ್ತು ಬಿನಾಕ ಹರೀಶ್ ದಂಪತಿಯ ಪುತ್ರನಾದ ನಿಶ್ಕ್, ಪ್ರಸ್ತುತ ಬೆಂಗಳೂರಿನ ಅಕ್ಷಯನಗರದಲ್ಲಿ ವಾಸವಾಗಿದ್ದು, ಡೆಲ್ಲಿ ಪಬ್ಲಿಕ್ ಸ್ಕೂಲ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇದಕ್ಕೂ ಮೊದಲು 2026ರ ಏಪ್ರಿಲ್‌ನಲ್ಲಿ ಡೆಹ್ರಾಡೂನ್‌ನಲ್ಲಿ ನಡೆದ 10 ದಿನಗಳ ರಾಜ್ಯ ತರಬೇತಿ ಶಿಬಿರದಲ್ಲಿ ಭಾಗವಹಿಸಿ ರಾಜ್ಯ ಮಟ್ಟದ ಚಿನ್ನದ ಪದಕ ಗಳಿಸಿದ್ದರು.

ಅವರು ಹಾಕಿ ತರಬೇತುದಾರರಾದ ಅರುಣ್, ಆರ್ಯನ್ ಮತ್ತು ಅಶ್ವಿನ್ ಅವರಿಂದ ತರಬೇತಿ ಪಡೆದಿದ್ದು, ಪ್ರಸ್ತುತ ಫಾಲ್ಕನ್ ಸ್ಕೇಟಿಂಗ್ ಅಕಾಡೆಮಿಯ ಶೇಖ್ ಅಬ್ದುಲ್ಲಾ ಅವರ ಮಾರ್ಗದರ್ಶನದಲ್ಲಿ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ.

ವಿವಿಧ ಶಾಲಾ, ಅಂತರಶಾಲಾ ಸ್ಪರ್ಧೆಗಳಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವ ನಿಶ್ಕ್, ತಮ್ಮ ಸಾಧನೆಯ ಮೂಲಕ ಕುತ್ತ್ಲೂರು ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಲಿ ಎಂದು ಗ್ರಾಮಸ್ಥರು ಶುಭ ಹಾರೈಸಿದ್ದಾರೆ.

Related posts

ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಮತ್ತು ದಿ.ಮಾಚಾರು ಗೋಪಾಲ ನಾಯ್ಕರ ಸಂಸ್ಮರಣೆ

Suddi Udaya

ಬಳಂಜ ಬದಿನಡೆ ಕ್ಷೇತ್ರದಲ್ಲಿಪ್ರಶ್ನಾ ಚಿಂತನೆ

Suddi Udaya

ಡಾ.ಸುಬ್ರಹ್ಮಣ್ಯ ಭಟ್ಟರ ಮೊದಲ ಕಾದಂಬರಿ ” ಶಂಭು” ಬಿಡುಗಡೆ

Suddi Udaya

ಮಂಜೊಟ್ಟಿ ಸ್ಟಾರ್ ಲೈನ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಉಜಿರೆ ರತ್ನಮಾನಸದಲ್ಲಿ “ಆಟಿದ ಅಟಿಲ್ ” ಕಾರ್ಯಕ್ರಮ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಮುಂಡಾಜೆ ವಲಯದ ಕೊಂಬಿನಡ್ಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!