25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಐದು ದಶಕಗಳ ವಿಶ್ವಾಸ, ಬೆಳ್ತಂಗಡಿ ನಗರದ ಮೊಟ್ಟ ಮೊದಲ ಚಿನ್ನಾಭರಣ ಗೀತಾ ಜ್ಯುವೆಲ್ಲರ್ಸ್‌ ನವೀಕೃತ ಮಳಿಗೆ ಸ್ಥಳಾಂತರಗೊಂಡು ಉದ್ಘಾಟನೆ

ಬೆಳ್ತಂಗಡಿ: ಐದು ದಶಕಗಳಿಂದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಮೂಲಕ ಗ್ರಾಹಕರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯನ್ನು ಗಳಿಸಿರುವ ಬೆಳ್ತಂಗಡಿ ನಗರದ ಮೊಟ್ಟಮೊದಲ ಚಿನ್ನಾಭರಣ ಮಳಿಗೆ ಗೀತಾ ಜ್ಯುವೆಲ್ಲರ್ಸ್ ಇದೀಗ ನವೀಕೃತ ವಿನ್ಯಾಸದೊಂದಿಗೆ ಸ್ಥಳಾಂತರಗೊಂಡು ಆ. 20 ರಂದು ಸಂತೆಕಟ್ಟೆಯ ಎಸ್ ಎನ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.

ಸಂಸ್ಥೆಯ ಮಾಲಕ ಅಮಿತ್ ಎನ್ ಎಸ್ ರವರ ತಾಯಿ ವಿಜಯ ಶ್ರೀನಿವಾಸ್ ರವರು ನೂತನ ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಮುಖ್ಯ ಅತಿಥಿಗಳಾಗಿ ಆದಾಯ ತೆರಿಗೆ ಇಲಾಖೆ ಚಿಕ್ಕಮಗಳೂರಿನ ನಿವೃತ್ತ ಅಧಿಕಾರಿ ಬಿ ನಾಗರಾಜ ಆಚಾರ್ಯ, ಕಟ್ಟಡ ಮಾಲಕ ಸಂತೋಷ್ ರಾವ್, ಚಾಮುಂಡೇಶ್ವರಿ ಹಾರ್ಡ್ ವೇರ್ ಮಾಲಕ ಸುಧೀರ್ ರಾವ್, ಸನ್ನಿಧಿ ಮೆಡಿಕಲ್ಸ್ ಮಾಲಕ ಸತ್ಯಶಂಕರ ಭಟ್, ಸಹಜಕೃಷಿ ಯೂ ಟ್ಯೂಬ್ ಚಾನೆಲ್ ನ ಶಿವಪ್ರಸಾದ್ ಮಲೆಬೆಟ್ಟು, ಪ್ರೇಮ ಜ್ಯುವೆಲ್ಲರ್ಸ್ ಮಾಲಕ ಮುರುಳೀದರ್, ಅಮಿತ್ ರವರ ಪತ್ನಿ ಸ್ಪೂರ್ತಿ, ಸಹೋದರಿ ಅಕ್ಷತಾ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶ್ವ ಪ್ರಾರ್ಥಿಸಿ, ಪುರುಷೋತ್ತಮ ಆಚಾರ್ಯ ಕನ್ನಾಜೆ ನಿರೂಪಿಸಿದರು.

ಗ್ರಾಹಕರ ತೃಪ್ತಿಕರ ಸೇವೆಯೇ ಮೊದಲ ಆದ್ಯತೆ: ಅಮಿತ್ ಎನ್.ಎಸ್
ಗ್ರಾಹಕರ ತೃಪ್ತಿಯೇ ನಮ್ಮ ಮೊದಲ ಆದ್ಯತೆ. ಐದು ದಶಕಗಳಿಂದ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ನಮ್ಮ ದೊಡ್ಡ ಶಕ್ತಿ. ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ನವೀಕೃತ ಮಳಿಗೆಯನ್ನು ಆರಂಭಿಸುತ್ತಿದ್ದೇವೆ. ಮುಂದೆಯೂ ಗುಣಮಟ್ಟದ ಆಭರಣಗಳೊಂದಿಗೆ ಸ್ನೇಹಪೂರ್ಣ ಹಾಗೂ ತೃಪ್ತಿಕರ ಸೇವೆ ನೀಡಲಿದ್ದೇವೆ ಎಂದು ಸಂಸ್ಥೆಯ ಮಾಲಕರಾದ ಅಮಿತ್ ಎನ್.ಎಸ್, ಸ್ಪೂರ್ತಿ ಹಾಗೂ ಅವ್ಯಾನ್ ತಿಳಿಸಿದ್ದಾರೆ.

Related posts

ರೆಖ್ಯ ,ಕಳೆಂಜ, ಕೊಕ್ಕಡ, ಶಿಶಿಲ ರಸ್ತೆಗಳಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ವೇಗ ನಿಯಂತ್ರಕ ಉಬ್ಬುಗಳಿಗೆ ಬಣ್ಣ ಬಳಿಯುವ ಕಾರ್ಯ

Suddi Udaya

ನೆಲ್ಯಾಡಿ ಅಮ್ಮ ಕ್ಯಾಂಟೀನ್ ಮಾಲಕ ಮಡಂತ್ಯಾರು ನಿವಾಸಿ ಗಿರೀಶ್ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ತಾಲೂಕು ಒಕ್ಕಲಿಗ ಸಂಘದ ನೇತೃತ್ವದಲ್ಲಿ ಚಂದ್ರಶೇಖರ ಗೌಡ ಧರ್ಮದಕಲ, ಶ್ರೀಧರ ಗೌಡ ಮರಕಡ, ಜನಾರ್ಧನ ಗೌಡ ಕೇರಿಮಾರುರಿಗೆ ನುಡಿನಮನ

Suddi Udaya

ಬ್ಯಾಂಕ್ ಮುಷ್ಕರ ಮುಂದೂಡಿಕೆ: ಎಂದಿನಂತೆ ಕಾರ್ಯನಿರ್ವಹಿಸಲಿವೆ ಬ್ಯಾಂಕ್‌ಗಳು

Suddi Udaya

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಆಟಿಡೊಂಜಿ ದಿನಾಚರಣೆ

Suddi Udaya

ಬುರುಡೆ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್ ಗೆ ಹಾಜರು

Suddi Udaya
error: Content is protected !!