25.6 C
ಪುತ್ತೂರು, ಬೆಳ್ತಂಗಡಿ
October 7, 2026
ಗ್ರಾಮಾಂತರ ಸುದ್ದಿಧಾರ್ಮಿಕವರದಿ

ಆ.28: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ಶ್ರೀ ದುರ್ಗಾದೇವಿಯ ಸನ್ನಿಧಿಗೆ ಆಗಮಿಸುತ್ತಿರುವ ಧರ್ಮಸ್ಥಳದ ಶ್ರದ್ಧಾ ಅಮಿತ್

ಬೆಳ್ತಂಗಡಿ: ಕೊಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಮಿತ್ತ ಬಾಗಿಲು ಕಿಲ್ಲೂರು ಇಲ್ಲಿಯ ಮಹಿಳಾ ವಿಭಾಗದ ವತಿಯಿಂದ ಬೆಳ್ಳಿ ಹಬ್ಬದ ಪ್ರಯುಕ್ತ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ಸೂಕ್ತ ಹವನ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಯವರ ಪುತ್ರಿ ಶ್ರೀಮತಿ ಶ್ರದ್ಧಾ ಅಮಿತ್ ಆಗಮಿಸಲಿದ್ದಾರೆ.

ಅಷ್ಟಲಕ್ಷ್ಮಿಯರನ್ನು ಪೂಜಿಸುವ ಪುಣ್ಯ ದಿನವೇ ವರಮಹಾಲಕ್ಷ್ಮಿ ಪೂಜೆ ವರಮಹಾಲಕ್ಷ್ಮಿ ಹಬ್ಬವು ಶ್ರಾವಣ ಮಾಸದ ಹುಣ್ಣಿಮೆಯ ಮುನ್ನ ಬರುವ ಶುಕ್ರವಾರದಂದು ಆಚರಿಸಲಾಗುವ ಅತ್ಯಂತ ಶ್ರೇಷ್ಠವಾದ ಹಿಂದೂ ಹಬ್ಬವಾಗಿದ್ದು ತಾಯಿ ಲಕುಮಿಯನ್ನು ಪೂಜಿಸುವುದರಿಂದ ಕುಟುಂಬಕ್ಕೆ ಫಲ ಸಿಗುವುದು ಎಂಬ ಅಪಾರ ನಂಬಿಕೆ ಇರುವುದರಿಂದ ಅತಿ ಹೆಚ್ಚು ಮಹಿಳೆಯರು ಈ ಪೂಜೆಯಲ್ಲಿ ಭಾಗವಹಿಸುವುದರೊಂದಿಗೆ ತಾಯಿ ವರಮಹಾಲಕ್ಷ್ಮಿಯನ್ನು ಆರಾಧಿಸುತ್ತಾರೆ ಮಧ್ಯಾಹ್ನ 11:00 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಶ್ರದ್ಧ ಅಮಿತ್ ವಹಿಸಲಿದ್ದಾರೆ.

ಧಾರ್ಮಿಕ ಪ್ರವಚನವನ್ನು ಅಶ್ವಿನಿ ಅರವಿಂದ ಹೆಬ್ಬಾರ್ ಮುಂದಾಜಿ ಇವರು ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಜ, ರಕ್ಷಿತ್ ಶಿವರಾಂ ಅಧ್ಯಕ್ಷರು ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ, ಕಿರಣ್ ಚಂದ್ರ ಡಿ, ಪುಷ್ಪಗಿರಿ ಉರು ವಾಲು ಧಾರ್ಮಿಕ ಮುಖಂಡರು ಬೆಳ್ತಂಗಡಿ, ಅನಿಲ್ ಕುಮಾರ್ ಎಸ್ ಎಸ್ ಮುಖ್ಯ ಕಾರ್ಯನಿರ್ವಾಹಕ ಎಸ್ ಕೆ ಡಿ ಆರ್ ಪಿ , ದಾಸಪ್ಪ ಗೌಡ BA LLB ಕಾಂಜಾನು ನಂದಗೋಕುಲ ಆಡಳಿತ ಮೊಕ್ತೆಸರರು ಕೊಲ್ಲಿ ದೇವಸ್ಥಾನ, ಕೆ ಸತೀಶ್ ಕಾಮತ್ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಕೊಲ್ಲಿ, ಕೆ. ಮೋಹನ್ ಬಂಗೇರ ಕಾರಿಂಜ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಮಿತ್ತಬಾಗಿಲು, ಕೇಶವ ಪಡಕೆ ಅಧ್ಯಕ್ಷರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಲ್ಲಿ, ವನಿತಾ ಉಮೇಶ್ ಅಧ್ಯಕ್ಷರು ಮಹಿಳಾ ವಿಭಾಗ ಸಮಿತಿ ಕೊಲ್ಲಿ ಭಾಗವಹಿಸಲಿದ್ದಾರೆ. (ವರದಿ: ರತ್ನಕರ್ ಬಿ. ನನಸು ನಾವೂರು)

Related posts

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ನಾಗದೇವರಿಗೆ ಕ್ಷೀರಾಭಿಷೇಕ, ವಿಶೇಷ ಪೂಜೆ

Suddi Udaya

ಬೆದ್ರಬೆಟ್ಟು: ಮರಿಯಾoಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಭಗವದ್ಗೀತೆಯ ಕಂಠಪಾಠ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯನ್ನು ಪಡೆದ ಕುಮಾರಿ ಅದ್ವಿತಿ ರಾವ್ ರವರಿಗೆ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಸನ್ಮಾನ

Suddi Udaya

ಬೆಳ್ತಂಗಡಿ: ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಕಡ್ಡಾಯ

Suddi Udaya

ಬೆಳ್ತಂಗಡಿ ಜೈನ ಬಸದಿ ಬಳಿ ಕಾರುಗಳೆರಡು ಪರಸ್ಪರ ಡಿಕ್ಕಿ: ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ

Suddi Udaya

ನಡ್ತಿಕಲ್ಲು: ಆಧಾರ್ ನೋಂದಣಿ-ತಿದ್ದುಪಡಿ ಶಿಬಿರದ ಉದ್ಘಾಟನೆ

Suddi Udaya
error: Content is protected !!