23.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ಮಹಾಸಭೆ: ರೂ.69.68 ಲಕ್ಷ ನಿವ್ವಳ ಲಾಭ, ಶೇ. 10.25ಡಿವಿಡೆಂಟ್ ಘೋಷಣೆ

ಕೊಯ್ಯೂರು: ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘ ಇದರ 2025-26ನೇ ಸಾಲಿನ ಮಹಾಸಭೆಯು ಆ.23 ರಂದು ಪಂಚದುರ್ಗ ಸಹಕಾರಿ ಸಭಾಭವನದಲ್ಲಿ ಜರಗಿತು.

ಮಹಾಸಭೆಯ ಸಭಾ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವೀಂದ್ರನಾಥ ಪಿ. ರವರು ವಹಿಸಿ ಮಾತನಾಡಿ ಸಂಘವು ಅನೇಕ ಹಿರಿಯ ಸಹಕಾರಿಗಳ ಮಾರ್ಗದರ್ಶನದಿಂದ ಹಾಗೂ ಸದಸ್ಯರುಗಳ ಉತ್ತಮ ಸಹಕಾರದಿಂದ 66 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಭಾರತದಲ್ಲಿ 30 ಕೋಟಿಗೂ ಹೆಚ್ಚು ಜನ ಸಹಕಾರ ಕ್ಷೇತ್ರದಲ್ಲಿ ವ್ಯವಹರಿಸುತ್ತಿದ್ದಾರೆ. ನಾನು ಮಾತ್ರ ಬೆಳೆಯುವುದಲ್ಲ, ಇನ್ನೊಬ್ಬರನ್ನೂ ಬೆಳೆಸಬೇಕು ಅನ್ನುವ ತತ್ವವೇ ಸಹಕಾರದ ಮೂಲ ಆಶಯ. ಸಂಘವು ಪ್ರಸಕ್ತ ಸಾಲಿನಲ್ಲಿ 2,01,24,88,127.78ರೂ. ನಷ್ಟು ವ್ಯವಹಾರ ನಡೆಸಿ 69,68,759.39ರೂ. ನಿವ್ವಳ ಲಾಭ ಗಳಿದ್ದು, ಶೇ.10.25 ಡಿವಿಡೆಂಟ್ ಘೋಷಿಸಿದರು.

ಸಾಧಕರಿಗೆ ಸನ್ಮಾನ-ಗೌರವ: ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಸಾಧಕ ವಿದ್ಯಾರ್ಥಿಗಳು, ವೈದ್ಯರುಗಳು, ಹಾಗೂ ಗಣ್ಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಸಂಘದ ಉಪಾಧ್ಯಕ್ಷ ಪುರುಷೋತ್ತಮ, ನಿರ್ದೇಶಕರಾದ ಅಶೋಕ್ ಭಟ್, ಉಜ್ವಲ್ ಕುಮಾರ್, ದಾಮೋದರ ಗೌಡ, ಯತೀಶ, ಕುಸುಮಾವತಿ, ಶೋಭಾ, ಎನ್. ಪರಮೇಶ್ವರ ಗೌಡ, ಸಂಜೀವ ಎಂ.ಕೆ., ನವೀನ್ ಕುಮಾರ್, ಕೇಶವ ಪೂಜಾರಿ, ಕೇಂದ್ರ ಬ್ಯಾಂಕಿನ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಉಜ್ವಲ್ ಕುಮಾರ್ ಸ್ವಾಗತಿಸಿದರು. ಸದಸ್ಯೆ ಕಾವ್ಯ ಪ್ರಾರ್ಥಿಸಿದರು. ನಿರ್ದೇಶಕ ಕೇಶವ ವಂದಿಸಿದರು. ಸಂಘದ ಸಿಬ್ಬಂದಿಗಳಾದ ಮಮತಾ ರೈ, ಕೇಶವ ಕೆ, ವಿನಾಯಕ ಬಿ, ಸುಕನ್ಯಾ ಬಿಜೆ, ಲೋಕೇಶ್, ಯತೀಶ್, ಸುದರ್ಶನ್, ದಿಲೀಪ್ ಕುಮಾರ್, ಚಂಪಾ, ಗೀತಾ, ಯೋಗೀಶ್ ಆಚಾರ್ಯ ಸಹಕರಿಸಿದರು.

Related posts

ಸುದೇಮುಗೇರು ಜೀವನ್ ರವರ ಮನೆಗೆ ಮಂಗಳೂರು ಕಥೋಲಿಕ್ ಸಭಾ ಪ್ರದೇಶ್ ಅಧ್ಯಕ್ಷ ಸಂತೋಷ್ ಡಿಸೋಜ ಹಾಗೂ ಇತರರು ಭೇಟಿ

Suddi Udaya

ಆಟೋ ಚಾಲಕರ ಹಾಗೂ ಸಾರಿಗೆ ನೌಕರರ ಭವಿಷ್ಯದ ಭದ್ರತೆಗಾಗಿ ಯೋಜನೆಗಳನ್ನು ರೂಪಿಸುವಂತೆ ಬಿಎಂಎಸ್ ನ ವೆಹಿಕಲ್ ಯೂನಿಯನ್ ಸಂಘಗಳಿಂದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರಿಗೆ ಮನವಿ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ವಿಷು ಕಣಿ ದರ್ಶನ, ವಿಷು ಹಬ್ಬ ವಿಶೇಷ ಪೂಜೆ

Suddi Udaya

ಉಜಿರೆ: ಮಲೆಬೆಟ್ಟುನಲ್ಲಿ ರೈತರಿಗೆ ಹೊರ ಆವರಣ ಕೃಷಿ ತರಬೇತಿ

Suddi Udaya

ತೋಟತ್ತಾಡಿ ಶ್ರೀ ಉಳ್ಳಾಳ್ತಿ ಭಜನಾ ಮಂದಿರದಲ್ಲಿ 9ನೇ ವರ್ಷದ ನವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮ

Suddi Udaya

ತೆಕ್ಕಾರು ಕುಟ್ಟಿಕಳ ಸ. ಹಿ ಪ್ರಾ. ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ಪೀಠೋಪಕರಣ ವಿತರಣೆ

Suddi Udaya
error: Content is protected !!