September 16, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಶಾಲಾ ಕಾಲೇಜು

ನಿಡ್ಲೆ , ಪೆರ್ಲ, ಕೊಕ್ಕಡ ವಲಯ ಮಟ್ಟದ ಖೋ ಖೋ ಪಂದ್ಯಾಟ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ವಲಯ ಮಟ್ಟದ ಖೋ ಖೋ ಪಂದ್ಯಾಟವನ್ನು ಆಯೋಜಿಸಲಾಯಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಪುದುವೆಟ್ಟು ಶಾಲೆಯ ಮಾಜಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಗಫುರ್ ರವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಡ್ಲೆ , ಉಜಿರೆ, ಮುಂಡಾಜೆ ವಲಯದ ಸಿಆರ್ ಪಿ ಪ್ರತಿಮಾ ರವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ವಲಯ ಸಂಘಟಕರಾದ ಶ್ರೀಧರ್ ನೇಲ್ಯಡ್ಕ, ಹಿರಿಯ ಕ್ರೀಡಾ ಪ್ರೇಮಿಯಾದ ಹೊನ್ನಪ್ಪ ಗೌಡ, ಶಾಲೆಯ ಮುಖ್ಯ ಶಿಕ್ಷಕರಾದ ಶೀನಪ್ಪ ಗೌಡ ಹಾಗೂ ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶಶಿಧರ ಜಿ ಗುಂಪಕಲ್ಲು ಇವರು ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಬ್ದುಲ್ ಗಪೂರ್ ರವರು ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆಗೆ ವಿಶೇಷ ಸ್ಥಾನವಿದೆ,ಕ್ರೀಡೆಯಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಶಿಸ್ತು ಸಮಯ ಪ್ರಜ್ಞೆ ಆತ್ಮವಿಶ್ವಾಸ ಮತ್ತು ತಂಡದ ಮನೋಭಾವ ಬೆಳೆಯುತ್ತದೆ ಎಂದು ತಿಳಿಸಿದರು. ಮುಖ್ಯ ಅತಿಥಿ ಸ್ಥಾನದ ನೆಲೆಯಲ್ಲಿ ಮಾತನಾಡಿದ ಸಿಆರ್‌ಪಿಗಳಾದ ಪ್ರತಿಮ ರವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆ ಮಹತ್ವದ ಪಾತ್ರ ವಹಿಸುತ್ತದೆ. ಸಮಯ ಪ್ರಜ್ಞೆಯ ಗುಣವನ್ನು ಈ ಕ್ರೀಡೆ ತಿಳಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶೀನಪ್ಪ ಗೌಡರವರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಾಲೆಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು . ವಿದ್ಯಾರ್ಥಿಗಳ ಪ್ರಾರ್ಥನ ಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಪವನ್ ಕುಮಾರ್ ಸ್ವಾಗತಿಸಿ,ಶಾಲೆಯ ದೈಹಿಕ ಶಿಕ್ಷಕಿ ಶೀಲಾ ಎನ್ ರವರು ಧನ್ಯವಾದಗೈದರು. ಶಾಲಾ ಶಿಕ್ಷಕರಾದ ನಿಶಾಂತ್ ಕುಮಾರ್ ನಿರೂಪಿಸಿದರು. ಖೋ ಖೋ ಪಂದ್ಯಾಟದಲ್ಲಿ ಬಾಲಕರ ಮತ್ತು ಬಾಲಕಿಯರ ವಿಭಾಗ ಪ್ರಥಮ ಸ್ಥಾನವನ್ನು ಸೈಟ್ ಫ್ರಾನ್ಸಿಸ್ ಕೊಕ್ಕಡ ದ್ವಿತೀಯ ಸ್ಥಾನವನ್ನು ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಶಾಲೆಗಳು ಬಹುಮಾನವನ್ನು ಪಡೆದುಕೊಂಡವು.

Related posts

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ಜಿ.ಕೆ ರಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ

Suddi Udaya

ಧರ್ಮಸ್ಥಳ: ‘ಉನ್ನತಿ’ ವಾಣಿಜ್ಯ ಸಂಕೀರ್ಣದಲ್ಲಿ ‘ಆತಿಥ್ಯ ವೆಜ್’ ಶುಭಾರಂಭ

Suddi Udaya

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್: ವಸಂತ ಗಿಳಿಯಾರ್ ವಿರುದ್ದ ಕಾನೂನು ಕ್ರಮಕ್ಕೆ ವಸಂತ ಬಂಗೇರ ಅಭಿಮಾನಿ ಬಳಗದಿಂದ ಒತ್ತಾಯ: ಸೌಜನ್ಯ ಆತ್ಯಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಬೇಕೆಂಬುದು ವಸಂತ ಬಂಗೇರ ಅಭಿಮಾನಿ ಬಳಗದ ನಿಲುವು

Suddi Udaya

ಕೊಕ್ರಾಡಿ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ, ದ.ಕ ಸಾಧನೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಶ್ಲಾಘನೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿರುವ ಸಾಕ್ಷಿ ದೂರು ದಾರ: ಇಂದು ಮಂಗಳೂರಿನಲ್ಲಿ ಡಿಐಜಿ ಅನುಚೇತ್ ಮುಂದೆ ಹೇಳಿಕೆ ನೀಡಲು ಹಾಜರು

Suddi Udaya
error: Content is protected !!