33.4 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಂದಾರಿನಲ್ಲಿ ಮೊಬೈಲ್ ಟವರ್‌ನಿಂದ 60 ಲೀಟರ್ ಡೀಸೆಲ್ ಕಳವು :ಮೂವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಬಂದಾರು ಗ್ರಾಮದ ಇಂಡಸ್ ಮೊಬೈಲ್ ಟವರ್‌ನಿಂದ ಸುಮಾರು 60 ಲೀಟರ್ ಡೀಸೆಲ್ ಕಳವು ಮಾಡಿದ ಆರೋಪದ ಮೇಲೆ ಮೂವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂಡಸ್ ಮೊಬೈಲ್ ಟವರ್ ಕಂಪನಿಯಲ್ಲಿ ಸೆಕ್ಯುರಿಟಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿರುವ ದಿನೇಶ್ ಕೆ(53) ಅವರು ನೀಡಿದ ದೂರಿನ ಆಧಾರದಲ್ಲಿ ಆ.24 ರಂದು ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 303(2)ರ ಅಡಿಯಲ್ಲಿ ಧೀಕ್ಷಣ್ ಹಾಗೂ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಆಗಸ್ಟ್ 23ರಂದು ರಾತ್ರಿ ಸುಮಾರು 2 ಗಂಟೆಗೆ ಬಂದಾರು ಗ್ರಾಮದ ಟವರ್ ಬಳಿ ತಾಂತ್ರಿಕ ಸಿಬ್ಬಂದಿ ದೀಕ್ಷಿತ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ರಸ್ತೆಯ ಬಳಿ ನಿಲ್ಲಿಸಿದ್ದ KA-20-D-7442 ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಎರಡು ಕ್ಯಾನ್‌ಗಳಲ್ಲಿ ಡೀಸೆಲ್ ತುಂಬಿಸುತ್ತಿರುವುದು ಕಂಡುಬಂದಿದೆ. ಟಾರ್ಚ್ ಬೆಳಕಿನಲ್ಲಿ ಅವರನ್ನು ಗಮನಿಸಿ ಕಾರಿನ ಬಳಿ ತೆರಳುತ್ತಿದ್ದಂತೆ, ಮೂವರು ಡೀಸೆಲ್ ಕ್ಯಾನ್‌ಗಳ ಸಮೇತ ಕಾರಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪರಾರಿಯಾದವರಲ್ಲಿ ಇದೇ ಟವರ್‌ನಲ್ಲಿ ಈ ಹಿಂದೆ ಟೆಕ್ನಿಷಿಯನ್ ಆಗಿ ಕೆಲಸ ಮಾಡಿದ್ದ ಧೀಕ್ಷಣ್ ಎಂಬಾತನನ್ನು ಗುರುತಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳವಾಗಿರುವ ಸುಮಾರು 60 ಲೀಟರ್ ಡೀಸೆಲ್‌ನ ಮೌಲ್ಯ ಸುಮಾರು 6 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

Related posts

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಎಸ್‌ಡಿಎಂ ಪಾಲಿಟೆಕ್ನಿಕ್ ಉಜಿರೆಯಲ್ಲಿ ಕ್ಯಾಂಪಸ್ ನೇಮಕಾತಿ ಚಾಲನೆ

Suddi Udaya

ವೇಣೂರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ಯುವವಾಹಿನಿ ಘಟಕದಿಂದ ಯಕ್ಷಗಾನ ಕಲಾವಿದರಿಗೆ ಸನ್ಮಾನ

Suddi Udaya

ಮೇ 20: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ: ಅಳದಂಗಡಿಯಲ್ಲಿ ರೋಡ್ ಶೋ, ವಿಜಯೋತ್ಸವ- ಸಂದೀಪ್ ನೀರಲ್ಕೆ

Suddi Udaya

ಮುಂಡಾಜೆ ಹಿ. ಪ್ರಾ. ಶಾಲಾ ವಿದ್ಯಾರ್ಥಿನಿ ದ್ವಿಷಾ ಯು.ಡಿ. ರಿಗೆ ರಾಷ್ಟ್ರ ಮಟ್ಟದ ಗೋಲ್ಡನ್ ಆರೋ ಪ್ರಶಸ್ತಿ

Suddi Udaya

ಪಿಯುಸಿ ಫಲಿತಾಂಶ: ಸಂಸ್ಕೃತದಲ್ಲಿ ಎಕ್ಸೆಲ್ ಕಾಲೇಜಿನ 114 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಕೆ

Suddi Udaya
error: Content is protected !!