26.5 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ 168 ಕೋಟಿ ವ್ಯವಹಾರ-ರೂ 71.63 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ.12 ಡಿವಿಡೆಂಡ್

ಬೆಳ್ತಂಗಡಿ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆ.27ರಂದು ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಕೆ. ಹರೀಶ್ ಕುಮಾರ್, ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ₹168 ಕೋಟಿಗೂ ಅಧಿಕ ವ್ಯವಹಾರ ನಡೆಸಿ ₹71.63 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.

ಸಂಘದಲ್ಲಿ 1,032 ಎ ತರಗತಿ ಹಾಗೂ 2,061 ಸಿ ವರ್ಗದ ಸದಸ್ಯರಿದ್ದು, ₹1 ಕೋಟಿಗೂ ಅಧಿಕ ಪಾಲು ಬಂಡವಾಳ ಹೊಂದಿದೆ. ₹98 ಕೋಟಿ ಠೇವಣಿ ಸಂಗ್ರಹವಾಗಿದ್ದು, ₹93 ಕೋಟಿ ಸಾಲ ವಿತರಿಸಲಾಗಿದೆ. ನಿಡ್ಲೆ ಹಾಗೂ ಕಡಬದಲ್ಲಿ ಸಂಘದ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರ ಉತ್ತಮ ವ್ಯವಹಾರದಿಂದ ಸಂಘದ ಬೆಳವಣಿಗೆಗೆ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಉಜಿರೆ ಹಾಗೂ ನೆರಿಯದಲ್ಲಿ ಶಾಖೆಗಳನ್ನು ತೆರೆಯುವ ಕುರಿತು ಆಲೋಚನೆ ನಡೆಸಲಾಗುತ್ತಿದೆ ಎಂದರು.

ಸಂಘದ ಉಪಾಧ್ಯಕ್ಷ ಗಂಗಾಧರ ಮಿತ್ತಮಾರ್, ನಿರ್ದೇಶಕರಾದ ಎಬಿ ಉಮೇಶ್, ಬಿ.ಎಂ. ಅಬ್ದುಲ್ ಹಮೀದ್, ಜಗದೀಶ್ ಹೆಗ್ಡೆ, ಕೆ.ಎಸ್. ಯೋಗೀಶ್ ಕುಮಾರ್, ಕೆ. ರಾಮಚಂದ್ರ ಗೌಡ, ಶೈಲೇಶ್ ಕುಮಾರ್, ವಿ. ರಮೇಶ್ ಪೂಜಾರಿ, ಮೋಹನ್ ಶೆಟ್ಟಿಗಾರ್, ರಾಮಚಂದ್ರ ಭಟ್ ಅರೆಕ್ಕಲ್, ಉಷಾ ಶರತ್, ರಾಗ್ನೀಶ್ ಹಾಗೂ ಅಭಿನಂದನ್ ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಗಂಗಾಧರ ಮಿತ್ತಮಾರ್ ಸ್ವಾಗತಿಸಿದರು. ನಿರ್ದೇಶಕ ಎಬಿ ಉಮೇಶ್ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಿಇಒ ಪ್ರದೀಪ್ ಕುಮಾರ್ ವರದಿ ವಾಚಿಸಿದರು. ಸಿಬ್ಬಂದಿ ಯುವರಾಜ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಾಮಚಂದ್ರ ಗೌಡ ವಂದಿಸಿದರು.

ಸಿಬ್ಬಂದಿಗಳಾದ ರಶ್ಮಿತಾ ಸಂತೋಷ್, ಚೈತ್ರ, ಮನೋಜ್ ಕುಮಾರ್, ಶ್ರವಣ್ ಕುಮಾರ್, ಅನುಶ್ರೀ ಎಂ., ರಮ್ಯಶಾರದ, ಗೋಪಾಲ ಎಸ್., ಪ್ರತಿಮಾ, ಸುಷ್ಮಾ ಆರ್. ಹಾಗೂ ನಿತ್ಯನಿಧಿ ಸಂಗ್ರಹಕರು ಮತ್ತು ಸದಸ್ಯರು ಸಹಕರಿಸಿದರು.

Related posts

ಬಳಂಜ ಶಾಲಾ ಅಮೃತ ಮಹೋತ್ಸವದ ಬಗ್ಗೆ ಹಿತ ಚಿಂತಕರ ಸಭೆ: ಅಮೃತ ಮಹೋತ್ಸವದ ಅಧ್ಯಕ್ಷರಾಗಿ ಚಂದ್ರಶೇಖರ್ ಪಿ‌.ಕೆ ಆಯ್ಕೆ

Suddi Udaya

ಹಾವುಗಳ ಸಂರಕ್ಷಕರಾದ ಸ್ನೇಕ್ ಅಶೋಕ್ ನಾಗರ ಹಾವು ಹಿಡಿಯುವ ವೇಳೆ ಹಾವು ಕಚ್ಚಿ ಮಂಗಳೂರು ಆಸ್ಪತ್ರೆಗೆ ದಾಖಲು

Suddi Udaya

2023-24ನೇ ಸಾಲಿನ ಶೈಕ್ಷಣಿಕ ಶಾಲಾ ವೇಳಾಪಟ್ಟಿ ಪ್ರಕಟ ಮೊದಲನೇ ಶೈಕ್ಷಣಿಕ ಅವಧಿ ಮೇ 29 ರಿಂದ ಆರಂಭ

Suddi Udaya

ತ್ರೋಬಾಲ್ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ: ದ.ಕ.ಜಿ.ಪ.ಕಿ ಪ್ರಾ ಜನಾರ್ಧನ ಶಾಲೆಯಲ್ಲಿ ಪರಿಸರ ಕಾರ್ಯಕ್ರಮ, ಹಣ್ಣಿನ ಗಿಡ ನಾಟಿ

Suddi Udaya

ಆಮಂತ್ರಣ ದಶಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ

Suddi Udaya
error: Content is protected !!