24.6 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆಡಳಿತ ಮಂಡಳಿ ನಿರ್ದೇಶಕರಾಗಿ ಶಶಿ ಕುಮಾರ್ ರೈ ಬಾಲ್ಯೊಟ್ಟು

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.ಬೆಂಗಳೂರು ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ನಿರ್ದೇಶಕರಾಗಿ ಮೈಸೂರು ವಿಭಾಗದಿಂದ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಪುತ್ತೂರಿನ ಶಶಿ ಕುಮಾರ್ ರೈ ಬಾಲ್ಯೊಟ್ಟು ಅವರು ಚುನಾಯಿತರಾಗಿದ್ದಾರೆ.


13 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೈಸೂರು ವಿಭಾಗದಿಂದ ಸ್ಪರ್ಧೆ ಮಾಡಿದ್ದ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಚಲಾವಣೆಯಾದ 18 ಮತಗಳಲ್ಲಿ 18 ಮತಗಳನ್ನೂ ಪಡೆದುಕೊಳ್ಳುವ ಮೂಲಕ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ 62 ವರ್ಷಗಳ ಇತಿಹಾಸದಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ದ.ಕ ಜಿಲ್ಲೆಯ ಮೊದಲ
ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

13 ನಿರ್ದೇಶಕರಲ್ಲಿ ಮೈಸೂರು ವಿಭಾಗದಿಂದ ಮೂವರು ನಿರ್ದೇಶಕರ ಆಯ್ಕೆಗೆ ಅವಕಾಶವಿತ್ತು. ಮೈಸೂರು ವಿಭಾಗಕ್ಕೆ ಸೇರಿದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ದ.ಕ., ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಒಟ್ಟು 7 ಯೂನಿಯನ್‌ಗಳ ಅಧ್ಯಕ್ಷರು ಕಣದಲ್ಲಿದ್ದರು. ಇದರಲ್ಲಿ ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ ಶಶಿಕುಮಾರ್‌ ರೈ ಬಾಲ್ಯೊಟ್ಟು , ಚಿಕ್ಕಮಗಳೂರು ಜಿಲ್ಲಾ ಯೂನಿಯನ್‌‌ ಶ್ರೀಕಂಠಪ್ಪ ಗೌಡ ಹಾಗೂ ಮೈಸೂರು ಜಿಲ್ಲಾ ಯೂನಿಯನ್‌ನಿಂದ ಜಿ.ಟಿ.ದೇವೇಗೌಡ ಜಯಶಾಲಿಯಾಗಿದ್ದಾರೆ. ಉಳಿದ ವಿಭಾಗಗಳಿಂದ 10 ಮಂದಿ ಅಭ್ಯರ್ಥಿಗಳು ವಿಜೇತರಾಗಿದ್ದಾರೆ.

ಆಡಳಿತ ಮಂಡಳಿ ಚುನಾವಣೆಗೆ 7 ತಿಂಗಳ ಹಿಂದೆಯೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆದಿತ್ತು.ಆದರೆ ಹಳೆಯ ಕಾಯ್ದೆ ಅಥವಾ ಹೊಸ ಕಾಯ್ದೆಯಡಿ ಚುನಾವಣೆ ನಡೆಸುವ ಕುರಿತ ಗೊಂದಲದಿಂದ ಜಿ.ಟಿ.ದೇವೇಗೌಡ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.ಇದರಿಂದ ಪ್ರಕ್ರಿಯೆ ವಿಳಂಬವಾಗಿತ್ತು.ಹಳೆಯ ಕಾಯ್ದೆಯಡಿ ಚುನಾವಣೆ ನಡೆಸುವುದಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಇದೀಗ ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಸೆ.4ರಂದು ಅಧ್ಯಕ್ಷರ ಆಯ್ಕೆ ನಡೆಯಲಿದೆ .

ನನ್ನ ಗೆಲುವು ಸಹಕಾರಿಗಳಿಗೆ ಅರ್ಪಣೆ:
ಪ್ರಭಾಕರ ರಾವ್ ಅವರಿಂದ ಆರಂಭವಾದ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಲ್ಲಿ ಘಟಾನುಘಟಿಗಳು ಅಧ್ಯಕ್ಷರಾಗಿ ಇದ್ದರು. 62 ವರ್ಷಗಳ ನಂತರ ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ಗೆ ನಿರ್ದೇಶಕರ ಸ್ಥಾನ ಸಿಕ್ಕಿದೆ. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಈ ಬಾರಿ ರಾಜ್ಯದಲ್ಲೇ ಅತೀ ಹೆಚ್ಚು ಯೂನಿಯನ್ ಕೂಡ ಆಗಿದೆ. ಇದೀಗ ಡಾ|ಎಂ.ಎನ್.ರಾ | ಡಾ|ಎಂ.ಎನ್.ರಾಜೇಂದ್ರ ಕುಮಾರ್ ರವರ ನಾಯಕತ್ವದಲ್ಲಿ ಐತಿಹಾಸಿಕ ಗೆಲುವು ದೊರೆತಿದೆ. ನನಗೆ ಸಿಕ್ಕಿದ ಗೆಲುವು ಎಲ್ಲಾ ಸಹಕಾರಿಗಳಿಗೆ ಅರ್ಪಣೆ.

  • ಶಶಿಕುಮಾರ್ ರೈ ಬಾಲ್ಯೊಟ್ಟು

Related posts

ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: ದೂರುದಾರ ಎಸ್ಐಟಿ ಕಸ್ಟಡಿಗೆ

Suddi Udaya

ಅಳದಂಗಡಿ: ಕೆದ್ದುವಿನಲ್ಲಿ ಪೆಟ್ರೋಲ್ ಪಂಪ್ ಶುಭಾರಂಭ, ಶಾಸಕ ಹರೀಶ್ ಪೂಂಜರಿಂದ ಉದ್ಘಾಟನೆ

Suddi Udaya

“ಲೋಕಾಯುಕ್ತ ಜನ ಸಂಪರ್ಕ ಸಭೆ: ಗ್ರಾಮ ಮಟ್ಟದಲ್ಲಿ ಭ್ರಷ್ಟಚಾರದ ಕುರಿತು ಜಾಗೃತಿ-ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ

Suddi Udaya

ಅ.13: ಯಕ್ಷಭಾರತಿ ಕನ್ಯಾಡಿ ಸಂಸ್ಥೆಯ ವತಿಯಿಂದ ಕನ್ಯಾಡಿಯಲ್ಲಿ ಬೃಹತ್ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣೆ ಶಿಬಿರ

Suddi Udaya

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬಡಗಕಾರಂದೂರು ಕಟ್ಟೂರು ಸರಕಾರಿ ಜಾಗದಲ್ಲಿ ಕಾಣಿಸಿಕೊಂಡ ಬೆಂಕಿ : ಬೆಂಕಿ ನಂದಿಸಿದ ಅಗ್ನಿ ಶಾಮಕ ದಳ

Suddi Udaya
error: Content is protected !!