24.8 C
ಪುತ್ತೂರು, ಬೆಳ್ತಂಗಡಿ
October 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಐದು ದೇವರ ಗುಡಿಗಳ ಶಿಲಾನ್ಯಾಸ

ಕೊಕ್ಕಡ: ಇಲ್ಲಿಯ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಐದು ದೇವರ ಗುಡಿಗಳ ಶಿಲಾನ್ಯಾಸ ಕಾರ್ಯಕ್ರಮವು ಆ.27ರಂದು ನಡೆಯಿತು.

ದೇವಳದ ತಂತ್ರಿಗಳಾದ ನೀಲೇಶ್ವರ ಎಡಮನೆ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಹೋಮ, ಶಿಲಾಪೂಜೆಯನ್ನು ನೆರವೇರಿಸಿದರು. ವಾಸ್ತುಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಇವರು ವಿಷ್ಣುಮೂರ್ತಿ ದೇವರ ಗುಡಿಯ ಶಿಲಾನ್ಯಾಸವನ್ನೂ, ಕದ್ರಿ ಮಂಜುನಾಥ ದೇವರ ಅರ್ಚಕರಾದ ಚತುರ್ವೇದಿ ಪ್ರಭಾಕರ ಅಡಿಗರು ನೀಲಕಂಠ ದೇವರ ಗುಡಿಯ ಶಿಲಾನ್ಯಾಸವನ್ನೂ, ಬಿಲ್ಲವ ಮುಖಂಡ ರಾಘವ ಪೂಜಾರಿ ಕೊಲ್ಲಾಜೆ ಉಳ್ಳಾಳ್ತಿ ದೇವಿಯ ಗುಡಿಯ ಶಿಲಾನ್ಯಾಸವನ್ನೂ, ಲಕ್ಮೀನಾರಾಯಣ ತೋಡ್ತಿಲ್ಲಾಯ ಗಣಪತಿ ದೇವರ ಗುಡಿಯ ಶಿಲಾನ್ಯಾಸವನ್ನೂ, ಸೌತಡ್ಕ ಮಹಾಗಣಪತಿ ದೇಗುಲದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಶಾಸ್ತಾರ ಗುಡಿಯ ಶಿಲಾನ್ಯಾಸವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ಅರ್ಚಕ ರಮಾನಂದ ಭಟ್, ಬಾಲಕೃಷ್ಣ ಕೆದಿಲಾಯ, ಸುಬ್ರಹ್ಮಣ್ಯ ಉಪ್ಪಾರ್ಣ, ಸುಬ್ರಹ್ಮಣ್ಯ ತೋಡ್ತಿಲ್ಲಾಯ ಕುಶಾಲಪ್ಪ ಗೌಡ ಪೂವಾಜೆ, ವಿಶ್ವನಾಥ ಪೂಜಾರಿ ಕೊಲ್ಲಾಜೆ, ಜಯರಾಮ ನೆಲ್ಲಿತ್ತಾಯ, ಕುಶಾಲಪ್ಪಗೌಡ ಪುಡಿಕೆತ್ತೂರು, ಡಾ.ಮೋಹನದಾಸ ಗೌಡ, ರಮೇಶ ಯಡಪಡಿತ್ತಾಯ ಕೊಡಂಕಿರಿ, ಜೀರ್ಣೋಧ್ದಾರ ಸಮಿತಿ ಸದಸ್ಯರು, ಬೈಲುವಾರು ಸಮಿತಿಯ ಸದಸ್ಯರು, ಊರಿನ, ಸೀಮೆಯ ಭಕ್ತರು ಭಾಗವಹಿಸಿದ್ದರು.

Related posts

ತೆಕ್ಕಾರು: ವಿದ್ಯುತ್ ತಂತಿಯ ಮೇಲೆ ಬಿದ್ದ ಮರ

Suddi Udaya

‘ಮೋದಿಜೀಯವರ ಅಧಿಕಾರವಧಿಯಲ್ಲಿ ಆಯುರಾರೋಗ್ಯ ಲಭಿಸಲಿ’ ಎಂದು ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರೀ ಕ್ಷೇತ್ರ ಸೌತಡ್ಕ ಕ್ಷೇತ್ರದಲ್ಲಿ 120 ಅಗೇಲು ರಂಗಪೂಜೆ

Suddi Udaya

ಲಾಯಿಲ : ಕರ್ನೋಡಿ ಸ.ಉ.ಹಿ.ಪ್ರಾ. ಶಾಲೆಯ ಹಳೆವಿದ್ಯಾರ್ಥಿಗಳಿಂದ ಸಿ.ಸಿ. ಟಿ.ವಿ ಹಸ್ತಾಂತರ ಹಾಗೂ ವರ್ಗಾವಣೆಗೊಂಡ ಶಿಕ್ಷಕಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Suddi Udaya

ಕೊಯ್ಯೂರು ಗ್ರಾ.ಪಂ. ಅಧ್ಯಕ್ಷರಾಗಿ ದಯಾಮಣಿ, ಉಪಾಧ್ಯಕ್ಷರಾಗಿ ಹರೀಶ್ ಗೌಡ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಕೆಂಪೇಗೌಡ ಜಯಂತಿ ಆಚರಣೆ

Suddi Udaya
error: Content is protected !!