September 6, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿರಾಜ್ಯ ಸುದ್ದಿವರದಿ

ಸರಣಿ ಕಳ್ಳತನಗೈಯ್ಯುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ: ಕಾರ್ಕಳ ತಾಲೂಕು ನಿಟ್ಟೆ ಅಜ್ಜೊಟ್ಟು ನಿವಾಸಿ ಸುರೇಶ ಕೆ ಪೂಜಾರಿ ಬಂಧಿತ ಆರೋಪಿ

ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೋಮಂತಡ್ಕ ಸೇರಿದಂತೆ ವಿವಿಧೆಡೆ ಇತ್ತಿಚೇಗೆ ಸರಣಿ ಕಳ್ಳತನಗೈದಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.


ಕಾರ್ಕಳ ತಾಲೂಕು ನಿಟ್ಟೆ ಅಜ್ಜೊಟ್ಟು ನಿವಾಸಿ ಸುರೇಶ ಕೆ ಪೂಜಾರಿ (50ವ) ಬಂಧಿತ ಆರೋಪಿಯಾಗಿದ್ದಾನೆ.
ಈತ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟಿಯೊಂದನ್ನು ಕಳ್ಳತನಗೈದು ಅದರಲ್ಲಿ ಸುತ್ತಾಡುತ್ತಾ ಒಬ್ಬಂಟಿಯಾಗಿ ರಾತ್ರಿವೇಳೆ ಹಲವೆಡೆ ಕಳ್ಳತನ ಕೃತ್ಯವೆಸಗುತ್ತಿದ್ದನೆಂದು ತನಿಖೆಯಿಂದ ದೃಢಪಟ್ಟಿದೆ. ಇದೇ ಆ.9 ರಂದು ಸೋಮಂತಡ್ಕ ಪೇಟೆಯ ಪ್ರಸನ್ನ ಪ್ರಾವಿಜನ್ ಸ್ಟೋರ್‌ನ ಬಾಗಿಲು ಮುರಿದು ಡ್ರಾವರ್ ನಲ್ಲಿಟ್ಟಿದ್ದ 50 ಸಾವಿರ ರೂ ನಗದು ಕಳ್ಳತನ ಗೈದಿರುವ ಬಗ್ಗೆ ಮಾಲಕ ಪ್ರಸನ್ನ ಆರಿಗ ಅವರು ಠಾಣೆಗೆ ನೀಡಿದ್ದರು.


ಧರ್ಮಸ್ಥಳ ಎಸ್.ಐ ಅನಿಲ್‌ಕುಮಾರ್ ಡಿ, ಸಮರ್ಥ ಗಾಣಿಗೇರ್, ಲೋಲಾಕ್ಷ ಪಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸ್ಯಾಮುವೆಲ್, ರಾಜೇಶ್, ಪ್ರಶಾಂತ, ಶೇಖರ್, ಸತೀಶ ನಾಯ್ಕ ಜಿ, ಶಶಿಧರ, ಮಂಜುನಾಥ, ಧರ್ಮಪಾಲ್, ಅಸ್ಲಾಂ, ಕೃಷ್ಣಪ್ಪ, ಪ್ರಮೋದಿನಿ, ಮಲ್ಲಿಕಾರ್ಜುನ, ಅಭಿಜಿತ್, ಮೆಹಬೂಬ್, ನಾಗರಾಜ ಬುಡ್ರಿ, ದೀಪು, ಮಧು, ಹರೀಶ್, ಜಗದೀಶ್ ಇವರುಗಳನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.


ಆರೋಪಿಯ ವಿರುದ್ದ ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವ, ಹಿರಿಯಡಕ, ಪಡುಬಿದ್ರಿ, ಮುಲ್ಕಿ, ಹೆಬ್ರಿ, ಉಡುಪಿ ನಗರ, ದಾವಣಗೆರೆ ಗ್ರಾಮಾಂತರ ಮತ್ತು ಬೆಳಗಾಂ ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಬಂಧಿತನಿಂದ 20,220 ರೂ. ನಗದು, ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಅದರ ಮೌಲ್ಯ 25ಸಾವಿರ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಕೃತ್ಯ ಸ್ಥಳಗೈದ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಲಾಗಿದೆ.

Related posts

ಬಿಜೆಪಿ ನಿಟ್ಟಡೆ ಶಕ್ತಿಕೇಂದ್ರದ ಬೂತ್ ಸಮಿತಿಗಳ ರಚನೆ

Suddi Udaya

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ ಚಂದ್ರಹಾಸ್ ಬಳಂಜ

Suddi Udaya

ಕೊಕ್ಕಡ ಸ. ಪ್ರೌಢಶಾಲೆಯಲ್ಲಿ ಅ.3 ರಿಂದ ಅ.9 ರವರೆಗೆ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ

Suddi Udaya

ಬುರುಡೆ ಪ್ರಕರಣ ಆರೋಪಿ ಚಿನ್ನಯ್ಯ ಮತ್ತೆ ಎಸ್.ಐ.ಟಿ ಕಸ್ಟಡಿಗೆ

Suddi Udaya

ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮುಂದೂಡಿಕೆ

Suddi Udaya

ಡಿ.17: ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಭ್ರಮದ ಕೋರಿಜಾತ್ರೆ

Suddi Udaya
error: Content is protected !!