25.5 C
ಪುತ್ತೂರು, ಬೆಳ್ತಂಗಡಿ
October 15, 2026
Uncategorizedಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕವರದಿ

ವೀರಶೈವ ಲಿಂಗಾಯತ ಸಂಘದ ವಾರ್ಷಿಕೋತ್ಸವ – ಸಾಧಕರಿಗೆ-ನಿವೃತ್ತರಿಗೆ ಸನ್ಮಾನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ – ಪದಗ್ರಹಣ ಸಮಾರಂಭ

ಉಜಿರೆ: ಬೆಳ್ತಂಗಡಿ ತಾಲೂಕು ವೀರಶೈವ ಲಿಂಗಾಯತ ಸಂಘ ಇದರ ವಾರ್ಷಿಕೋತ್ಸವ, ಸಾಧಕರಿಗೆ -ನಿವೃತ್ತರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆ.30ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆಯಿತು.

ಉಡುಪಿ ಅಲ್ಲಮಪ್ರಭು ಅನುಭಾವ ಪೀಠದ ಪೀಠಾಧಿಪತಿ ಶ್ರೀ ಶರಣ ಜಗನ್ನಾಥಪ್ಪ ಪನಸಾಲೆ ಅವರು ದೀಪ ಪ್ರಜ್ವಲನೆಗೈದರು. ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಪಂಚಾಕ್ಷರಪ್ಪ ವಹಿಸಿದ್ದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಶೇಖರ್ ಟಿ, ನಿವೃತ್ತ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಹೆಚ್.ಎಮ್. ಚಿಕ್ಕಮಗಳೂರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸಪ್ಪ ರೊಟ್ಟಿ, ಬೆಳ್ತಂಗಡಿ ತಾಲೂಕು ವೀರಶೈವ ಲಿಂಗಾಯತ ಸಂಘದ ಕಾರ್ಯದರ್ಶಿ ಕಲ್ಲೇಶಪ್ಪ ಕೆ. ಬಿ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ನೂತನ ಅಧ್ಯಕ್ಷರಾದ ನವೀನ್ ಪ್ರಕಾಶ್, ಉಪಾಧ್ಯಕ್ಷರಾದ ಗಾಯತ್ರಿ ವಿಶ್ವನಾಥ, ವಿಠಲ ಪುದೊಟ್ಟು, ಪ್ರಧಾನ ಕಾರ್ಯದರ್ಶಿ ಸೌಮ್ಯ ವಸಂತ್, ಬಟ್ಟಾಜೆ ಕಲ್ಮಂಜ, ಜೊತೆ ಕಾರ್ಯದರ್ಶಿ ಯತೀಶ್ ಕುಮಾ‌ರ್ ಅಕ್ಷಯನಗರ,ಕೋಶಾಧಿಕಾರಿ ರಮೇಶ್ ಜಾಮೇಗೌಡ, ಸಹ ಕೋಶಾಧಿಕಾರಿ ಚನ್ನಯ್ಯ ಕೂಡಗಿ,ಸಂಘಟನಾ ಕಾರ್ಯದರ್ಶಿಗಳಾದ ಕಿರಣ್ ಎನ್., ರಘುವಯ್ಯ ಆರಂಬೋಡಿ, ಗಣೇಶ ಅರ್ಬಿ, ಗೌರವ ಸಲಹೆಗಾರರಾದ ರತ್ನಾವತಿ, ಶಿವಯ್ಯ ಎಸ್‌. ಎಲ್., ಪಂಚಾಕ್ಷರಪ್ಪ, ವಿಶ್ವನಾಥ ತೆಂಕಕಾರಂದೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಆನಂದ ಕೋಡಿಬೆಟ್ಟು, ಮೋನಪ್ಪ ಅಕ್ಷಯನಗರ, ಕಲ್ಲೇಶಪ್ಪ ಕೆ.ಬಿ., ರಾಮಯ್ಯ ಕಾಯರೊಟ್ಟು, ನೇತ್ರಾವತಿ ಅಶೋಕ ಬೆಳ್ತಂಗಡಿ ಉಪಸ್ಥಿತರಿದ್ದರು. ಸೌಮ್ಯ ವಸಂತ್ ಹಾಗೂ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಗಾಯತ್ರಿ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷ ಶಿವಯ್ಯ ಸ್ವಾಗತಿಸಿದರು.

Related posts

ಬೆಳ್ತಂಗಡಿ–ಗುರುವಾಯನಕೆರೆ ಭಜನಾ ಪರಿಷತ್ತಿನ ಸಭೆ

Suddi Udaya

ನಾವೂರು: ಡಾ| ವೀಣಾ ಬನ್ನಂಜೆಯವರ ಏಳನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ: ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಭಾಗಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಅಳದಂಗಡಿ ಸಂಪರ್ಕ ರಸ್ತೆಯಲ್ಲಿ ಮತ್ತೆ ಉರುಳಿ ಬಿದ್ದ ಮರ: ಪರದಾಡಿದ ಶಾಲಾ ಮಕ್ಕಳು

Suddi Udaya

ಬ್ರೈಟ್ ಹೊರೈಝನ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ‘ವಿಂಗ್ಸ್ ಆಫ್ ವಿಸ್ಡಮ್’ ವೇದಿಕೆ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮ

Suddi Udaya
error: Content is protected !!