26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭಜನಾ ಪರಿಷತ್ತಿನ ವತಿಯಿಂದ ನಂದಗೋಕುಲ ಗೋಶಾಲೆಗೆ ಮೇವು ಹಾಗೂ ಹಿಂಡಿ ಸಮರ್ಪಣೆ

ಬೆಳ್ತಂಗಡಿ : ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಬೆಳ್ತಂಗಡಿ ಹಾಗೂ ತಾಲೂಕಿನ ವಲಯ ಸಮಿತಿಗಳ ಪದಾಧಿಕಾರಿಗಳ ಸಹಕಾರದೊಂದಿಗೆ ಕಳೆಂಜ ಬಂಡೇರಿ ನಂದಗೋಕುಲ ಗೋಶಾಲೆಗೆ ಸುಮಾರು ಮೂರು ಪಿಕಪ್ ಮೇವು ಹಾಗೂ ಸುಮಾರು 350 ಕಿಲೋ ಹಿಂಡಿಯನ್ನು ಸಮರ್ಪಿಸಲಾಯಿತು.

ಗೋವುಗಳಿಗೆ ಮೇವು ಸಮರ್ಪಿಸಲು ಬಂದಂತಹ ಭಜನಾ ಪರಿಷತ್ತಿನ ಪದಾಧಿಕಾರಿಗಳನ್ನು ಹಾಗೂ ಸದಸ್ಯರುಗಳನ್ನು ಗೋಶಾಲೆಯ ಅಧ್ಯಕ್ಷ ನಾರಾಯಣಗೌಡ ಕೋಳಂಬೆ, ಉಪಾಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಕಾರ್ಯದರ್ಶಿ ನವೀನ್ ನೆರಿಯ, ಇಲ್ಲಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಜನಾರ್ದನ ಗೌಡ ಕಲ್ಕಟ್ಟ, ಕಾರ್ಯದರ್ಶಿ ದಾಮೋದರ ಗೌಡ ಪುದುವೆಟ್ಟು ಹಾಗೂ ಇತರರು ಪ್ರೀತಿಯಿಂದ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಇದರ ನೇತೃತ್ವವನ್ನು ವಹಿಸಿದ್ದ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ತಾಲೂಕು ಅಧ್ಯಕ್ಷ ರವಿರಾಜ್ ಚಾರ್ಮಾಡಿ, ತಾಲೂಕು ಗೌರವಾಧ್ಯಕ್ಷ ವೆಂಕಟೇಶ್ ಭಟ್ ಕಜೆ, ಸಲಹೆಗಾರರಾದ ನಾಗೇಶ್ ನೆರಿಯ, ವಲಯ ಅಧ್ಯಕ್ಷರುಗಳಾದ ಕೃಷ್ಣಪ್ಪಗೌಡ, ಪ್ರತಿಮ, ಹರೀಶ್ ಕಳೆಂಜ, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ನೀತ ಹಾಗೂ ವಲಯದ ಇನ್ನಿತರ ಪದಾಧಿಕಾರಿಗಳು ಮತ್ತೂರು ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಕೇಶವತಿ, ಸಹ ಸಂಚಾಲಕಿ ಶ್ರೀಮತಿ ಚೇತನ ಅಶೋಕ್ , ವೈದ್ಯನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ದೀಕ್ಷಿತ್, ಕಾರ್ಯದರ್ಶಿ ಶಶಿಧರ ಹಾಗೂ ಹಲವಾರು ಭಜಕರು ಜೊತೆಗಿದ್ದರು.

ನಂದಗೋಕುಲ ಗೋಶಾಲೆಯ ಕಾರ್ಯದರ್ಶಿ ನವೀನ್ ನೆರಿಯ ರವರು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಬೆಳ್ತಂಗಡಿ ಹಾಗೂ ವಲಯ ಸಮಿತಿಯವರು ಸೇರಿಕೊಂಡು ತಾಲೂಕಿನ ಸಮಸ್ತ ಭಜಕರ ಪರವಾಗಿ ಇಂದು ನಮ್ಮ ಗೋಶಾಲೆಯ ಗೋವುಗಳಿಗೆ ಆಹಾರವನ್ನು ಒದಗಿಸಿಕೊಟ್ಟು ಪುಣ್ಯ ಕಾರ್ಯದಲ್ಲಿ ಕೈಜೋಡಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ. ಇಂತಹ ಉತ್ತಮ ಜನಪರ ಕೆಲಸಗಳನ್ನು ಮಾಡಲು ತಮಗೆಲ್ಲರಿಗೂ ಭಗವಂತ ಇನ್ನಷ್ಟು ಶಕ್ತಿಯನ್ನು ನೀಡಲಿ ಎಂದು ಸಂತಸ ವ್ಯಕ್ತಪಡಿಸಿದರು.

Related posts

ಸಾರ್ವಜನಿಕರ ದೂರಿನಂತೆ ಅನಧಿಕೃತ ವಸತಿಗ್ರಹ ವ್ಯವಹಾರ ಸ್ಥಗಿತಗೊಳಿಸಿದ ಧರ್ಮಸ್ಥಳ ಗ್ರಾಮ ಪಂಚಾಯತ್

Suddi Udaya

ಮುಂಡಾಜೆ ಕೀರ್ತನಾ ಕಲಾ ತಂಡ ವತಿಯಿಂದ ಆಟಿಡೋಂಜಿ ಐತಾರೊ ಕಾರ್ಯಕ್ರಮ

Suddi Udaya

ಮೂಲ ಕೋಟೆ ತರವಾಡು ವತಿಯಿಂದ ಡಾ. ರವೀಶ್ ಪಡುಮಲೆಗೆ ಸನ್ಮಾನ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಗಾಯನ ತರಗತಿ ಆರಂಭ

Suddi Udaya

ಜೆಸಿಐ ಮಡಂತ್ಯಾರು “ವಿಜಯ 2024” ವತಿಯಿಂದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಮಾನ್ಸೂನ್ ಮೇನಿಯ 2023”

Suddi Udaya
error: Content is protected !!