26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸಂವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಮೀಸಲಾತಿ ಕುರಿತಾದ ವಿಶೇಷ ಸಭೆ

ಬೆಳ್ತಂಗಡಿ : ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮೀಸಲಾತಿ ಕುರಿತಾದ ವಿಶೇಷ ಸಭೆ ಬೆಳ್ತಂಗಡಿ ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಸುಂದರ್ ಕಾಶಿಪಟ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಉದ್ದೇಶ ಹಾಗೂ ಮೀಸಲಾತಿ ಕುರಿತಾದ ಸಂಕ್ಷಿಪ್ತ ಮಾಹಿತಿಯನ್ನು ಶಿಕ್ಷಕ ಸುಕೇಶ್ ಕೆ ಮಾಲಾಡಿ ಹೇಳಿದರು. ಯುವ ಮುಖಂಡರುಗಳು ಅಭಿಪ್ರಾಯ, ಪ್ರಶ್ನೆ, ಹಾಗೂ ಸಲಹೆ ಸೂಚನೆಗಳನ್ನು ನೀಡಿದರು. ಸಂವಿಧಾನ ರಕ್ಷಣಾ ಸಮಿತಿಯ ಗೌರವ ಸಲಹೆಗಾರರಾಗಿರುವ ಶೇಖರ್ ಕುಕ್ಕೇಡಿ ಇವರು ಸಂವಾದದೊಂದಿಗೆ ಉತ್ತರಿಸಿದರು.

ವೇದಿಕೆಯಲ್ಲಿ ಸಮಿತಿಯ ಕೋಶಾಧಿಕಾರಿ ಶಿವಾನಂದ ಪಡಂಗಡಿ, ಉಪಾಧ್ಯಕ್ಷ ವಿಜಯ್ ಕುಮಾರ್ ಬಜಿರೆ, ಗೌರವ ಸಲಹೆಗಾರರಾದ ಓಬಯ್ಯ ಆರಂಬೋಡಿ, ಶೇಖರ್ ವಿ ಧರ್ಮಸ್ಥಳ, ಬಾಬಿ ಮಾಲಾಡಿ, ನಾರಾಯಣ ಪುದುವೆಟ್ಟು, ಆದಿ ದ್ರಾವಿಡ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಕೊಕ್ಕಡ, ಯುವವಕೀಲೆ ಸವಿತಾ ಇವರುಗಳು ಅನಿಸಿಕೆ ವ್ಯಕ್ತಪಡಿಸಿದರು. ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಉಸ್ತುವಾರಿಗಳನ್ನು ನೇಮಕ ಮಾಡಲಾಯಿತು. ‌

ಸುಶ್ಮೀತಾ ಮಾಲಾಡಿ ಸ್ವಾಗತಿಸಿ, ಮಾನ್ಯ ಉಜಿರೆ ವಂದಿಸಿದರು. ವಿನಯ್ ಕುಮಾರ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Related posts

ಕಸ್ತೂರಿರಂಗನ್ ವರದಿ ವಿರೋಧಿಸಿ ಮಲವಂತಿಗೆಯಲ್ಲಿ ಪ್ರತಿಭಟನೆ

Suddi Udaya

ಶ್ರೀ ಕ್ಷೇತ್ರ ಧ. ಗ್ರಾ. ಯೋ. ಸಮುದಾಯ ಅಭಿವೃದ್ಧಿ ವತಿಯಿಂದ ರೂ.25 ಸಾವಿರ ಆರ್ಥಿಕ ನೆರವು

Suddi Udaya

ಬೆಳ್ತಂಗಡಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Suddi Udaya

ತ್ವರಿತವಾಗಲಿ ಬೆಳೆ ವಿಮೆ ಕಂತು ಪಾವತಿ: ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 10ನೇ ವರ್ಷದ ಯೋಗ ದಿನಾಚರಣೆ

Suddi Udaya

ಮೊಬೈಲ್ ಹಿಂದಿರುಗಿಸಿಕೊಟ್ಟು ಮಾನವೀಯತೆ ಮೆರೆದ ಬೆಳ್ತಂಗಡಿ ಸಂತೆಕಟ್ಟೆ ಗಣೇಶ್ ಮೆಡಿಕಲ್ ಮಾಲೀಕ

Suddi Udaya
error: Content is protected !!