26.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ರಕ್ಷಾಬಂಧನ ಆಚರಣೆ: ದುರ್ಗಾ ಟೆಕ್ಸ್ ಟೈಲ್ಸ್ ಮಾಲಕ ಮೋಹನ್ ಚೌಧರಿ ರವರಿಂದ ವಸ್ತ್ರ ವಿತರಣೆ

ಉಜಿರೆ: ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಮೋಹನ್ ಚೌದ್ರಿ ಮಾಲಕರು ದುರ್ಗಾ ಟೆಕ್ಸ್ ಟೈಲ್ಸ್ ಉಜಿರೆ ಹಾಗೂ ರತನ್ ಸಿಂಗ್ ಪೂಜಾ ಏಜೆನ್ಸಿ ಉಜಿರೆ, ಸುಖರಾಂ ಪಟೇಲ್, ಮಾಲಕರು ರಾಜಾರಾಮ್ ಶೋರೂಮ್ ಉಜಿರೆ, ಇವರು ಭೇಟಿ ನೀಡಿ ವಿಶೇಷ ಮಕ್ಕಳೊಂದಿಗೆ ರಕ್ಷಾಬಂಧನವನ್ನು ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿಶೇಷ ಮಕ್ಕಳು ಹಾಜರಿದ್ದರು. ರಕ್ಷಾ ಬಂಧನ ಹಬ್ಬದ ಪ್ರಯುಕ್ತ ದುರ್ಗಾ ಟೆಕ್ಸ್ ಟೈಲ್ಸ್ ಮಾಲಕರಾದ ಮೋಹನ್ ಚೌಧರಿ ಸಾನಿಧ್ಯ ಕೇಂದ್ರದ ವಿಶೇಷ ಮಕ್ಕಳಿಗೆ ಹೊಸ ಹೊಸ ವಿನ್ಯಾಸದ ವಸ್ತ್ರಗಳನ್ನು ಹಾಗೂ ವಿಶೇಷ ಶಿಕ್ಷಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿರುತ್ತಾರೆ.

ದುರ್ಗಾ ಟೆಕ್ಸ್ಟೈಲ್ಸ್ ಮಾಲಕರಾದ ಮೋಹನ್ ಚೌದರಿ ಮಾತನಾಡಿ ದೇವರ ಮಕ್ಕಳೊಂದಿಗೆ ರಕ್ಷಾಬಂಧನವನ್ನು ಆಚರಿಸಿಕೊಂಡಿದ್ದು ತುಂಬಾ ಸಂತೋಷ ಕೊಟ್ಟಿದೆ. ಇಲ್ಲಿನ ಸಿಬ್ಬಂದಿಗಳ ಸೇವೆ ಅತ್ಯಂತ ಮಹತ್ವಪೂರ್ಣವಾದದ್ದು ಹಾಗೂ ಹೆಮ್ಮೆ ಪಡುವಂಥದ್ದು. ನಮ್ಮ ಸಹಕಾರ ಪ್ರೋತ್ಸಾಹ ಸದಾ ಈ ಸಂಸ್ಥೆಯ ಮೇಲೆ ಇರಲಿದೆ. ಹಾಗೂ ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು ಎಂದು ತಿಳಿಸಿದರು.

Related posts

ಧರ್ಮಸ್ಥಳ ಯಕ್ಷಗಾನ ಮೇಳ: ಸೇವೆ ಬಯಲಾಟ ಪ್ರದರ್ಶನ

Suddi Udaya

ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಗ್ರಾಮೀಣ ಘಟಕದ ವತಿಯಿಂದ ಕೊಕ್ಕಡ ಎಂಡೊಸಲ್ಪಾನ್ ಕೇಂದ್ರದಲ್ಲಿ ಇಂದಿರಾ ಗಾಂಧಿ ಜನ್ಮದಿನ ಆಚರಣೆ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ದೀಪ ಪ್ರದಾನ ಕಾರ್ಯಕ್ರಮ

Suddi Udaya

ನೆರಿಯ: ಬೋವಿನಡಿ ನಿವಾಸಿ ಸುಶೀಲ ನಿಧನ

Suddi Udaya

ಜಾಗತಿಕ ಸೀರೋ ಮಲಬಾರ್ ಧರ್ಮ ಸಂಸದ್ ಗೆ ಪಾಲಾದಲ್ಲಿ ಸಮಾಪ್ತಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ಭಾಗಿ

Suddi Udaya

ಗುರುವಾಯನಕೆರೆ: ಸೆಲೆಕ್ಷನ್ ವೇರ್ ನಲ್ಲಿ ಆಷಾಢ & ಮಾನ್ಸೂನ್ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೇ.50 ರಷ್ಟು ರಿಯಾಯಿತಿ

Suddi Udaya
error: Content is protected !!