26.9 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದೇವಾಂಗ ಸಮಾಜ ಮುಂಡಾಜೆ ಘಟಕದ ಸಭೆ

ಮುಂಡಾಜೆ : ದೇವಾಂಗ ಸಮಾಜ ಮುಂಡಾಜೆ ಘಟಕ ಇದರ 34ನೇ ಘಟಕ ಸಭೆಯು ಶಶಿಧರ ನೇಕಾರ ಬನಶಂಕರಿ ಇವರ ಮನೆಯಲ್ಲಿ ನಡೆಯಿತು.


ಸಭೆಯನ್ನು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಶಿಧರ ನೇಕಾರ ವಹಿಸಿದ್ದು, ವೇದಿಕೆಯಲ್ಲಿ ಮಾಜಿ ಅಧ್ಯಕ್ಷರು, ಮಾಜಿ ವಲಯ ಸ್ಥಾಪಕಧ್ಯಕ್ಷರು, ವಲಯಾಧ್ಯಕ್ಷರು ಹಾಗೂ ಘಟಕದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೇಶವ ದೇವಾಂಗರವರು ರಕ್ಷಾಬಂಧನದ ಮಹತ್ವವನ್ನು ಪೌರಾಣಿಕ ಕಥೆಯ ಮೂಲಕ ವಿವರಿಸಿ ತ್ಯಾಗ, ಪ್ರೀತಿ, ರಕ್ಷಣೆಯ ಸಹೋದರತ್ವದ ಅಭಯವನ್ನು ತಿಳಿಸಿದರು. ಮತ್ತು ಸಾಂಕೇತಿಕವಾಗಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಿ ಸಹೋದರತ್ವವನ್ನು ಸಾರಲಾಯಿತು.


ಶ್ರೀಮತಿ ಸವಿತಾ ಕೇಶವ ದೇವಾಂಗರವರು ಹಿಂದಿನ ಸಭೆಯ ವರದಿ ವಾಚಿಸಿ ಅನುಮೋದಿಸಲಾಯಿತು.
ಕಾರ್ಯದರ್ಶಿ ಸಚಿನ್ ಎಂ ಎಸ್ ಬೆಳ್ತಂಗಡಿ ರವರು ಕಾರ್ಯಕ್ರಮದ ವರದಿ ವಾಚಿಸಿ, ಖರ್ಚು ವೆಚ್ಚಗಳ ವಿವರವನ್ನು ಸಭೆಯಲ್ಲಿ ತಿಳಿಸಿ, ಮಿಗತೆಯ ಬಜೆಟ್ ಘೋಷಿಸಿ, ಸಹಕರಿಸಿದ ಘಟಕದ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.


ಭಾಸ್ಕರ ಎಂ ಡಿ , ರವಿಚಂದ್ರ ನೆಯ್ಯಾಲು,ಕೇಶವ ದೇವಾಂಗ , ಸಂಜೀವ ಎಂ ಡಿ , ಸವಿತಾ ಕೆ ದೇವಾಂಗ, ರೋಹಿತ್ ಕಾಶಿಬೆಟ್ಟು ರವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಕಾರ್ಯಕ್ರಮದ ಯಶಸ್ಸನ್ನು ಹಂಚಿಕೊಂಡು ಮುಂದೆಯೂ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಮಾಡಬೇಕೆಂದು ಎಲ್ಲರ ಸಹಕಾರ ಮತ್ತು ಮಾರ್ಗದರ್ಶನಕ್ಕೆ ಅಭಿನಂದನೆ ಸಲ್ಲಿಸಿದರು.


ಮುಂಗಡ ಪಾವತಿಗೆ ಇನ್ನು ಮುಂದೆ ಹೊಸ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಯಿತು. ಘಟಕಾಧ್ಯಕ್ಷರು ಮಾತನಾಡಿ ಕಾರ್ಯಕ್ರಮವು ಯಶಸ್ವಿಯಾಗಲು ಎಲ್ಲರೂ ಜವಾಬ್ದಾರಿಯಿಂದ ನಡೆಯಬೇಕು, ಇಂತಹ ಮಾದರಿ ಕಾರ್ಯಕ್ರಮವನ್ನು ಇನ್ನು ಮುಂದೆಯೂ ನಾವೆಲ್ಲ ಸೇರಿ ಯಶಸ್ವಿಯಾಗಿ ಮಾಡೋಣವೆಂದು ಹಾರೈಸಿ, ಘಟಕದ ಸದಸ್ಯರಿಗೆ ಅಭಿನಂದಿಸಿ, ತಮ್ಮ ಕೊಡುಗೆಯಾಗಿ ಸದಸ್ಯರ ಮನೆಯ ಕಾರ್ಯಕ್ರಮದ ಉಪಯೋಗಕ್ಕೆಂದು 50 ಊಟದ ಸ್ಟೀಲ್ ತಟ್ಟೆಯನ್ನು ಉಚಿತವಾಗಿ ನೀಡಿದರು.


ಘಟಕದ ನಿಧಿ ಸಮರ್ಪಣಾ ಕಾರ್ಯಕ್ಕೆ ನಿಧಿ ಸಮರ್ಪಿಸಿದ ರಾಜು ತಮಿಳುನಾಡು ರವರನ್ನು ಸನ್ಮಾನಿಸಿ ಫಲಕವಿತ್ತು ಅಭಿನಂದಿಸಲಾಯಿತು. ಇಂದಿನ ಸಭೆಯಲ್ಲಿ 3 ಸದಸ್ಯರಿಗೆ ಮುಂಗಡ ಪಾವತಿಯನ್ನು ವಿತರಿಸಲಾಯಿತು.
ಮುಂದಿನ ಸಭೆಯನ್ನು ಶ್ರೀಮತಿ ವಸಂತಿ ರಾಜಗೋಪಾಲ್ ರವರ ಮನೆಯಲ್ಲಿ ನಡೆಸುವುದೆಂದು ನಿರ್ಧರಿಸಿ ಸಭಾ ವೀಳ್ಯ ನೀಡಲಾಯಿತು. ಶ್ರಾವ್ಯ ಮತ್ತು ಶ್ರವಣ್ ಪ್ರಾರ್ಥಿಸಿದರು, ಶ್ರೀಮತಿ ರಕ್ಷಿತಾ ಶಶಿಧರ್ ಸ್ವಾಗತಿಸಿ, ಸಚಿನ್ ಎಂ ಎಸ್ ನಿರೂಪಿಸಿ, ರೋಹಿತ್ ಕಾಶಿಬೆಟ್ಟು ಧನ್ಯವಾದವಿತ್ತರು.

Related posts

ಬೆಳ್ತಂಗಡಿ: ಜೈನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅಭಿವೃದ್ಧಿ ಕುರಿತು ಮಂಗಳೂರು ವಲಯ ಸಮಾಲೋಚನಾ ಸಭೆ

Suddi Udaya

ಮುಗೇರಡ್ಕ ದೈವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಪದ್ಮುಂಜ : ಸಜನಿ ಕೊಬ್ಬರಿ ಎಣ್ಣೆ ಮತ್ತು ಹಿಟ್ಟಿನ ಗಿರಣಿ ಶುಭಾರಂಭ

Suddi Udaya

ಬೆಳ್ತಂಗಡಿ ಗ್ರಾಮೀಣ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರು ಹಾಗೂ ಸದಸ್ಯರ ವತಿಯಿಂದ ಸಹಾಯಹಸ್ತ

Suddi Udaya

ಧರ್ಮಸ್ಥಳ ಯೋಜನೆಯ ಕಾರ್ಯಕ್ರಮ: ರಾಜ್ಯಾದ್ಯಂತ 1000 ಶಾಲೆಗಳಿಗೆ ಜ್ಞಾನದೀಪ ಗೌರವ ಶಿಕ್ಷಕರ ನಿಯೋಜನೆ

Suddi Udaya
error: Content is protected !!