26.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

42 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ನಾರಾವಿ ಅಂಗನವಾಡಿ ಶಿಕ್ಷಕಿ ಸುಮಿತ್ರಾ ರವರಿಗೆ ಬೀಳ್ಕೊಡುಗೆ

ನಾರಾವಿ: ಮಕ್ಕಳ ಪಾಲನೆ, ಪೋಷಣೆ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ 42 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಅಂಗನವಾಡಿ ಶಿಕ್ಷಕಿ ಸುಮಿತ್ರಾ ರವರ ವಿದಾಯ ಸಮಾರಂಭವು ನಾರಾವಿ ವಲಯದ ಅಂಗನವಾಡಿ ಶಿಕ್ಷಕಿಯರ ವತಿಯಿಂದ ಗೌರವಪೂರ್ವಕವಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಪ್ರಿಯ ಆಗ್ನೇಸ್ ವಹಿಸಿದರು. ಮುಖ್ಯ ಅತಿಥಿಯಾಗಿ ವಲಯದ ಮೇಲ್ವಿಚಾರಕಿ ಕಾತ್ಯಾಯಿನಿ, ತಾಲೂಕು ಅಂಗನವಾಡಿ ಸಂಘಟನೆಯ ಅಧ್ಯಕ್ಷೆ ಗಾಯತ್ರಿದೇವಿ, ನಿವೃತ್ತ ಸನ್ಮಾನವನ್ನು ಸ್ವೀಕರಿಸುವ ಶಿಕ್ಷಕಿ ಸುಮಿತ್ರ ಭಾಗವಹಿಸಿದರು.

ಸೀತಮ್ಮ ಪ್ರಾರ್ಥಿಸಿ, ತಾಲೂಕು ಅಂಗನವಾಡಿ ಸಂಘಟನೆಯ ಕಾರ್ಯದರ್ಶಿ ಅರುಣ ಕುಮಾರಿ ಬಿ ರವರು ಸನ್ಮಾನ ಪತ್ರ ಓದಿ. ಕಾರ್ಯಕ್ರಮ ನಿರೂಪಿಸಿದರು. ಅಕ್ಷತಾ ಸ್ವಾಗತಿಸಿದರು. ಗಾಯತ್ರಿದೇವಿ, ಜಯಲಕ್ಷ್ಮೀ, ದೇವಿ, ಮೀನಾ, ಲಲಿತಾ ರವರು ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಾರಾವಿ ವಲಯದ ಎಲ್ಲಾ ಶಿಕ್ಷಕಿಯರು ಭಾಗವಹಿಸಿ , ಅಭಿನಂದನೆ ಸಲ್ಲಿಸಿ, ನಿವೃತ್ತ ಜೀವನಕ್ಕೆ ಶುಭಹಾರೈಸಿ ಬೀಳ್ಕೊಟ್ಟರು. ಶಿಕ್ಷಕಿ ಅನುಜ್ಞಾ ವಂದಿಸಿದರು.

Related posts

ಶಿಶಿಲ: ಅಡ್ಡಹಳ್ಳ ನಿವಾಸಿ ಡೀಕಯ್ಯ ಗೌಡ ರವರ ಮನೆ ಮೇಲೆ ಮರ ಬಿದ್ದು ಹಾನಿ

Suddi Udaya

ಗುರುವಾಯನಕೆರೆ: ನಿವೃತ್ತ ಕೆ.ಎಸ್.ಆರ್.ಟಿ.ಸಿ ಟ್ರಾಫಿಕ್ ಕಂಟ್ರೋಲರ್ ಕೃಷ್ಣ ಕಾಮತ್ ನಿಧನ

Suddi Udaya

ಅಕ್ರಮ ಕೋಳಿ ಅಂಕ- ಧರ್ಮಸ್ಥಳ ಪೊಲೀಸರ ದಾಳಿ: ಏಳು ಆರೋಪಿಗಳ ಬಂಧನ

Suddi Udaya

ಉಜಿರೆ: ಶ್ರೀ. ಧ.ಮಂ.ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವದ ಸಂಭ್ರಮ -ಮಕ್ಕಳಿಗೆ ಅದ್ದೂರಿಯ ಸ್ವಾಗತ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ : ಮಹಾರಥೋತ್ಸವ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Suddi Udaya
error: Content is protected !!