23.3 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮೈಟ್ ವಿದ್ಯಾರ್ಥಿಗಳಿಂದ ಪ್ರಾಜೆಕ್ಟ್‌ ವಿನ್ಯಾಸ ಕಾರ್ಯಾಗಾರ

ಪುಂಜಾಲಕಟ್ಟೆ: ಮೂಡುಬಿದ್ರೆಯ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಎಂಜಿನಿಯರಿಂಗ್‌ (MITE) ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಾಜೆಕ್ಟ್‌ ವಿನ್ಯಾಸದ ಕುರಿತು ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರವು ಸೆ.2ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆಯಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಾಗಾರವನ್ನು ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರ್ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳಲ್ಲಿ ಒಂದಾದ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಅನ್ನು ಎರಡು ದಿನಗಳ ಕಾರ್ಯಾಗಾರಕ್ಕೆ ಆಯ್ಕೆ ಮಾಡಿರುವುದಕ್ಕಾಗಿ ಮೈಟ್ ಕಾಲೇಜಿನ ಆಡಳಿತ ವರ್ಗ ಹಾಗೂ ಉಪನ್ಯಾಸಕರಿಗೆ ಧನ್ಯವಾದ ಸಲ್ಲಿಸಿದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಷಣ್ಮುಖ ಪಿ.ಎಲ್. ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. CRP ಅಧಿಕಾರಿ ಚೇತನ ಅವರು ಮಾತನಾಡಿ, ವಿದ್ಯಾರ್ಥಿಗಳು ಕಾರ್ಯಾಗಾರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಮೈಟ್ ಕಾಲೇಜಿನ ಉಪನ್ಯಾಸಕರಾದ ರಂಜಿತ್ ಎಚ್.ಡಿ. ಬಳಂಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಾಗಾರದ ಉದ್ದೇಶ, ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳಿಗೆ ದೊರೆಯುವ ಪ್ರಯೋಜನಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಮನೋಹರ್, ಶಿಕ್ಷಕಿ ಶಿಲ್ಪಾ ಹಾಗೂ MITE ಕಾಲೇಜಿನ ಉಪನ್ಯಾಸಕರಾದ ಸೂರಜ್ ಶೆಟ್ ಉಪಸ್ಥಿತರಿದ್ದರು. ಶಿಕ್ಷಕ ರುದ್ರಸ್ವಾಮಿ ಅವರು ಸ್ವಾಗತಿಸಿದರು.

ಮೈಟ್ ಕಾಲೇಜಿನ ವಿದ್ಯಾರ್ಥಿಗಳಾದ ರಿಷಿಕ್ ಆರ್. ಜೈನ್, ಸುವೇಲ್ ಜೈನ್, ಶ್ರೀವಲ್ಲಿ, ನಿಯತಿ ಡಿ., ಕಾರ್ತಿಕ್, ತೇಜಸ್ ಎಸ್. ರೈ, ಸುಜನ್ ಕುಮಾರ್ ಡಿ., ಮೊಹಮ್ಮದ್ ಹಫೀಜ್, ಹಿತೇಶ್ ಗುಡಿಗಾರ್, ಪ್ರಣಮ್ಯ ಬಿ., ಪ್ರತೀಕ್ಷಾ ಕೆ., ತ್ರಿಶಾ ಶೆಟ್ಟಿ, ಆತ್ಮಿ, ಹರ್ಷಿತಾ, ದೀಕ್ಷಿತ್ ಎಸ್. ಹೆಗ್ಡೆ, ರಕ್ಷನ್ ರೈ, ರತನ್, ಸನ್ಮಿತ್ ಎಸ್. ಪೂಜಾರಿ, ಸುರಜ್, ಶ್ರವಣ್ ಕುಮಾರ್, ಅನ್ವಿತ್ ಶೆಟ್ಟಿ, ತನ್ವಿತ್ ಜೆ. ಶೆಟ್ಟಿ, ಕೌಸ್ತುಭ್, ಪ್ರಥಮ್ ಶೆಟ್ಟಿ, ನರೇಂದ್ರ ಪಟೇಲ್, ಎಂ. ನೇಹಲ್ ಸುವರ್ಣ, ವಿಖ್ಯಾತ್ ಶೆಟ್ಟಿ, ಸವೀನ್ ಹಾಗೂ ಚರಣ್ ಸೇರಿದಂತೆ ಸುಮಾರು 50 ಮೈಟ್ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಇದರ ಜೊತೆಗೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಸುಮಾರು 210 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಾಜೆಕ್ಟ್‌ ವಿನ್ಯಾಸ, ಆವಿಷ್ಕಾರ ಮತ್ತು ತಾಂತ್ರಿಕ ಕೌಶಲ್ಯಗಳ ಕುರಿತು ಪ್ರಾಯೋಗಿಕವಾಗಿ ಕಲಿಯುವ ಅವಕಾಶ ಪಡೆದರು.

Related posts

ಬೆಳ್ತಂಗಡಿ : ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿ ಗೋಪಾಲ ಅಧಿಕಾರ ಸ್ವೀಕಾರ

Suddi Udaya

ಪ್ರಪ್ರಥಮ ಬಾರಿಗೆ ಏಕಕಾಲದಲ್ಲಿ ಚಿತ್ರಮಂದಿರ ಮತ್ತು ಟಾಕೀಸ್ ಆ್ಯಪ್ ಒಟಿಟಿಯಲ್ಲಿ ಬಿಡುಗಡೆಗೊಳ್ಳುತ್ತಿರುವ “ಹೌದ್ದೋ ಹುಲಿಯ”

Suddi Udaya

ಲಯನ್ಸ್ ಕ್ಲಬ್ ವತಿಯಿಂದ ಸವಣಾಲು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಎಂಡಿಎಂಎ ಮಾದಕ ವಸ್ತು ಮಾರಾಟಕ್ಕೆ ಯತ್ನ ; ಓರ್ವ ಆರೋಪಿ ಬಂಧನ

Suddi Udaya

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Suddi Udaya

ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ‘ ನಮ್ಮ ನಡಿಗೆ ಡಿಜಿಟಲ್ ಕಡೆಗೆ ‘ ಡಿಜಿಟಲ್ ಸಾಕ್ಷರತಾ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!