23.8 C
ಪುತ್ತೂರು, ಬೆಳ್ತಂಗಡಿ
October 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆಶಾಲತಾ ಪ್ರಶಾಂತ ರವರಿಗೆ ಜೇಸಿ ವಲಯ ಮಟ್ಟದ “ಸಾಧನಾ ಶ್ರೀ” ಪ್ರಶಸ್ತಿ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ನಿಕಟ ಪೂರ್ವಾಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ ಇವರಿಗೆ ಜೆಸಿಐ ಭಾರತದ ವಲಯ 15 ರ 2026 ನೇ ಸಾಲಿನ ಪ್ರತಿಷ್ಠಿತ “ಸಾಧನಾ ಶ್ರೀ” ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಮಡಂತ್ಯಾರಿನಲ್ಲಿ ನಡೆದ ವಲಯದ “ವ್ಯವಹಾರ ಹಾಗೂ ಅಭಿವೃದ್ಧಿ ಮತ್ತು ಬೆಳವಣಿಗೆ” ಸಮ್ಮೇಳನದಲ್ಲಿ ವಲಯಾಧ್ಯಕ್ಷರಾದ ಸಂತೋಷ್ ಶೆಟ್ಟಿ ವ್ಯವಹಾರ ವಿಭಾಗ ನಿರ್ದೇಶಕ ವಿಕೇಶ್ ಮಾನ್ಯ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ರಂಜಿತ್ ಎಚ್‌ಡಿ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಅಧ್ಯಕ್ಷ ಜಿತೇಶ್ ಕುಮಾರ್, ಕಾರ್ಯದರ್ಶಿ ರಕ್ಷೀತ್ ಅಂಡಿಂಜೆ, ಪೂರ್ವಾಧ್ಯಕ್ಷರಾದ ನಾರಾಯಣ ಶೆಟ್ಟಿ, ಸಂತೋಷ್ ಪಿ ಕೊಟ್ಯಾನ್, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ ಲಾೖಲ, ಅಭಿನಂದನ್ ಹರೀಶ್, ಸ್ವರೂಪ್ ಶೇಖರ್ ಹಾಗೂ ಘಟಕದ ಪದಾಧಿಕಾರಿಗಳು ಸದಸ್ಯರು,ಉಜಿರೆ ಘಟಕದ ಸದಸ್ಯರು ಉಪಸ್ಥಿತರಿದ್ದರು.

ಶ್ರೀಮತಿ ಆಶಾಲತಾ ಪ್ರಶಾಂತ ಇವರು 2017 ರಲ್ಲಿ ಜೆಸಿಐ ಬೆಳ್ತಂಗಡಿ ಮೂಲಕ ಜೇಸಿ ಆಂದೋಲನದಲ್ಲಿ ತೊಡಗಿಸಿಕೊಂಡು ಘಟಕದ ವಿವಿಧ ಜವಬ್ದಾರಿ ನಿರ್ವಹಿಸಿ 2025 ನೇ ಸಾಲಿನ ಘಟಕದ ಅಧ್ಯಕ್ಷೆಯಾಗಿ ತರಬೇತಿ, ಸಾಮಾಜಿಕ ಬದ್ಧತೆ, ವ್ಯವಹಾರ, ಆರೋಗ್ಯ, ಯುವ ಹಾಗೂ ಮಹೀಳಾ ಸಬಲೀಕರಣ ಮುಂತಾದ ಸ್ತರಗಳಲ್ಲಿ ಕಾರ್ಯಕ್ರಮ ಮಾಡುವುದರೊಂದಿಗೆ ಅತ್ಯುತ್ತಮ ಅಧ್ಯಕ್ಷರಾಗಿ, ಅದಲ್ಲದೇ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಸುಧೀರ್ಘ ಇತಿಹಾಸದಲ್ಲಿ ಒಬ್ಬ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಮೂಡಿಬಂದವರು.


ಲಾೖಲ ಗ್ರಾಮ ಪಂಚಾಯತ್ ಇದರ ಮಾಜಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ ಇವರು ರಾಷ್ಟ್ರೀಯ ಪಕ್ಷದ ತಾಲೂಕು ಮಟ್ಟದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಂಗೋಲಿ ಹಾಗೂ ಚಿತ್ರಕಲಾವಿದೆಯಾದ ಇವರು ಒಬ್ಬ ವಸ್ತ್ರ ವಿನ್ಯಾಸಕಿಯಾಗಿ “ಆಶಾ’ಸ್ ದ ಬ್ರಾಂಡ್ ಬೂಟಿಕ್” ಸಂಸ್ಥೆಯನ್ನು ಸ್ಥಾಪಿಸಿ ಉದ್ಯಮ ನಡೆಸುತ್ತಿದ್ದು ತಮ್ಮ ಸಾಮರ್ಥ್ಯ, ನಾಯಕತ್ವ ಹಾಗೂ ಸಂಘಟನಾ ಕೌಶಲ್ಯ ವಿವಿಧ ಸಾಧನೆಗಳನ್ನು ಪರಿಗಣಿಸಿ ಈ “ಸಾಧನಾ ಶ್ರೀ” ಪ್ರಶಸ್ತಿಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದಿಂದ ಶಿಫಾರಸು ಮಾಡಲಾಯಿತು.

Related posts

ಸುದ್ದಿ ಉದಯ ಬೆಳಕಿನ ಹಬ್ಬ ದೀಪಾವಳಿ ವಿಶೇಷ ಸಂಚಿಕೆ: ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ:ಅದೃಷ್ಟವಂತ ಓದುಗರಿಗೆ ರೂ.25 ಸಾವಿರ ಬಹುಮಾನದ ಕೂಪನ್ ಡ್ರಾ

Suddi Udaya

ದಿಡುಪೆ: ಮರದಿಂದ ಬಿದ್ದು ವ್ಯಕ್ತಿ ಸಾವು

Suddi Udaya

ತುಳುಕೂಟ ಇಸ್ರೇಲ್ ವತಿಯಿಂದ ಮಂಜುಶ್ರೀ ಸೀನಿಯರ್ ಛೇಂಬರ್ ಬೆಳ್ತಂಗಡಿ ಆಶ್ರಯದಲ್ಲಿ ಕಿಲ್ಲೂರು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ದಂತ ವೈದ್ಯಕೀಯ ಪರೀಕ್ಷೆ : ಗೇರುಕಟ್ಟೆಯ ಡಾ|ಅನುದೀಕ್ಷಾರಿಂದ ಅತ್ಯುತ್ತಮ ಸಾಧನೆ

Suddi Udaya

ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಪ್ರಜಾಪ್ರಭುತ್ವದ ದೊಡ್ಡ ಹಬ್ಬದಲ್ಲಿ ಸಂಭ್ರಮಸಿದ ಬಳಂಜ- ನಾಲ್ಕೂರಿನ ಮತದಾರರು ಬಿರುಸಿನ ಮತದಾನ, ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ

Suddi Udaya
error: Content is protected !!