September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಭಾರತ್ ಜೋಡೋ ಯುವ ಸಂಘದ ಉಸ್ತುವಾರಿಗಳ ನೇಮಕ

ಬೆಳ್ತಂಗಡಿ:ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯುವಜನಪರ ಯೋಜನೆಯಾದ ಭಾರತ್ ಜೋಡೋ ಯುವ ಸಂಘ (BJYS)ವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಸಕ್ರಿಯವಾಗಿ ಸಂಘಟಿಸುವ ಉದ್ದೇಶದಿಂದ ಕ್ಷೇತ್ರದ ಏಳು ಜಿಲ್ಲಾ ಪಂಚಾಯತ್ ವ್ಯಾಪ್ತಿಗಳು ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.

ಕುವೆಟ್ಟು ಜಿಲ್ಲಾ ಪಂಚಾಯತ್‌ಗೆ ಅರವಿಂದ ಜೈನ್, ಕಣಿಯೂರು ಜಿಲ್ಲಾ ಪಂಚಾಯತ್‌ಗೆ ಎನ್.ಹೆಚ್. ಅಬ್ದುಲ್ ರೆಹಮಾನ್, ಅಳದಂಗಡಿ ಜಿಲ್ಲಾ ಪಂಚಾಯತ್‌ಗೆ ಲಿಯೋ ಪೀರೆರಾ, ನಾರಾವಿ ಜಿಲ್ಲಾ ಪಂಚಾಯತ್‌ಗೆ ದೀಪಕ್ ಶೆಟ್ಟಿ, ಲಾಯಿಲ ಜಿಲ್ಲಾ ಪಂಚಾಯತ್‌ಗೆ ಜಗನ್ನಾಥ್ ಪುತ್ರಬೈಲ್, ಉಜಿರೆ ಜಿಲ್ಲಾ ಪಂಚಾಯತ್‌ಗೆ ರಜತ್ ಗೌಡ, ಧರ್ಮಸ್ಥಳ ಜಿಲ್ಲಾ ಪಂಚಾಯತ್‌ಗೆ ಶರತ್ ಕಳೆಂಜ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ಅನಿಲ್ ಎ.ಜೆ. ಅವರನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.

ನೇಮಕಗೊಂಡಿರುವ ಉಸ್ತುವಾರಿಗಳು ತಮ್ಮ ವ್ಯಾಪ್ತಿಯಲ್ಲಿ ಯುವಜನರನ್ನು ಸಂಘಟಿಸಿ, ಭಾರತ್ ಜೋಡೋ ಯುವ ಸಂಘದ ಚಟುವಟಿಕೆಗಳನ್ನು ಗ್ರಾಮ ಮಟ್ಟದವರೆಗೆ ವಿಸ್ತರಿಸುವುದು ಹಾಗೂ ಸಾಮಾಜಿಕ ಮತ್ತು ಜನಪರ ಕಾರ್ಯಕ್ರಮಗಳಲ್ಲಿ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

Related posts

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ “ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಶಿಬಿರ

Suddi Udaya

ವೇಣೂರು: ಸಹೋದರರಿಬ್ಬರಿದ್ದ ಬೈಕ್ ಗೆ ಗೂಡ್ಸ್ ರಿಕ್ಷಾ ಡಿಕ್ಕಿ: ಓರ್ವ ಸ್ಥಳದಲ್ಲೇ ಮೃತ್ಯು, ಮತ್ತೋರ್ವನಿಗೆ ಗಂಭೀರ ಗಾಯ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಅಬಲೆಯರ ಪುನರ್ವಸತಿ ಕೇಂದ್ರ “ಸೇವಾಶ್ರಮ”ದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬ ಆಚರಣೆ

Suddi Udaya

ಮಾ.16: ಕನ್ಯಾಡಿ ಸೇವಾಭಾರತಿ 20ನೇ ವರ್ಷದ ಸಂಭ್ರಮ ಹಾಗೂ ರಕ್ತದಾನ ಶಿಬಿರ ಸಾಧನ ಸಲಕರಣೆಗಳ ವಿತರಣೆ , ಸಾಧಕರಿಗೆ ಗೌರವ ಸಮರ್ಪಣೆ ಮತ್ತು ನೂತನ ಟ್ರಸ್ಟಿಗಳ ಸೇರ್ಪಡೆ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗಿಡ ನಾಟಿ ಉತ್ಸವ

Suddi Udaya

ಮಾಲಾಡಿ: ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ರಿಂದ ಕಾರ್ಯಕರ್ತರ ಸಭೆ

Suddi Udaya
error: Content is protected !!