September 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಶ್ರೀಮತಿ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಮಕ್ಕಳು ನವಶಕ್ತಿ, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗುರುವಾಯನಕೆರೆ ಬೆಂಗಳೂರು ಬಂಟರ ಸಂಘ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇವರ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವು ಸೆ.6ರಂದು ಬಂಟರ ಭವನ ಗುರುವಾಯನಕೆರೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಸಂಘದ ಗೌರವ ಮಾರ್ಗದರ್ಶಕರು, ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ನೆರವೇರಿಸಿ ಮಾತನಾಡಿ,  ಒಂದು ಉತ್ತಮ ಶಿಕ್ಷಣ ಸಂಸ್ಥೆಯು ಕೇವಲ ಅಂಕಗಳನ್ನು ಗಳಿಸುವ ಮಾರ್ಗವಾಗದೆ, ವಿದ್ಯಾರ್ಥಿಗಳಲ್ಲಿ ನೈತಿಕತೆ, ಮಾನವೀಯತೆ ಮತ್ತು ಉತ್ತಮ ನಡತೆಯನ್ನು ರೂಪಿಸುವ ಪ್ರಮುಖ ಕೇಂದ್ರ, ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆ ನೀಡಿ ಸಮಾಜದ ಉತ್ತಮ ವ್ಯಕ್ತಿಯಾಗಿ ರೂಪಿಸಲು ಕಾರ್ಕಳದ ಅಜೆಕಾರಿನ ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಅಡಿಪಾಯವಾಗಿದೆ.  ಮೌಲ್ಯಧಾರಿತ ಶಿಕ್ಷಣಕ್ಕೆ ಕರಾವಳಿ ಜಿಲ್ಲೆಯಲ್ಲಿ ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಮಾದರಿ. ಈ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆಯುವುದೆ ಸೌಭಾಗ್ಯ, ವೖದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಜ್ಞಾನ ಸುಧಾ ಸಂಸ್ಥೆಯವರು ಆಗಿದ್ದು, ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಅವರು ಉತ್ತಮ ಶಿಕ್ಷಣ ನೀಡುತ್ತಿರುವುದು ಅಭಿನಂದನೀಯ, ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ನಡೆಸಿ ತಂದೆ ತಾಯಿಗಳಿಗೆ ಆದರ್ಶವಾಗಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿ ಕಾರ್ಕಳ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಡಾ| ಸುಧಾಕರ ಶೆಟ್ಟಿ, ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿ ತಂದೆ ತಾಯಿನ್ನು ದೇವರದ ಜಾಗದಲ್ಲಿ ಇರಿಸಿ ಪೂಜಿಸಬೇಕು, ವಿನಾಯತೆವುಳ್ಳ ವಿದ್ಯೆಗೆ ಮೌಲ್ಯ ಹೆಚ್ಚು, ವಿದ್ಯಾರ್ಜನೆ ಸಮಯದಲ್ಲಿ ದಾರಿ ತಪ್ಪದೇ ಉತ್ತಮವಾಗಿ ವಿಧ್ಯಾಭ್ಯಾಸ ನಡೆಸಿ, ಉದ್ಯೋಗ ಪಡೆದು ತನ್ನ ಕಾಲಿನ ಮೇಲೆ ನಿಂತು, ಪೋಷಕರಿಗೆ ಆಶಾಕಿರಣವಾಗಿ ಬೆಳೆದು ನಿಲ್ಲಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ತಂದೆ- ತಾಯಿಯ ತ್ಯಾಗವನ್ನು ಮಕ್ಕಳು ಅರ್ಥೖಸಿಕೊಳ್ಳಬೇಕು,  ಅವರ ಹುಟ್ಟು ಹಬ್ಬದಂದು ಸ್ಟೇಟಸ್ ಹಾಕಿ ಪ್ರಯೋಜನವಿಲ್ಲ ಆದರೆ ಅವರ ಘನತೆಗೆ ದಕ್ಕೆ ಬಾರದೇ ಹಾಗೆ ನೋಡಿಕೊಳ್ಳವುದು ಮಕ್ಕಳ ಕರ್ತವ್ಯ,  ಸಮಾಜದ ಎಲ್ಲಾ ಜಾತಿಗಳು ನಮ್ಮ ದೇಹದ ಒಂದು ಭಾಗವಿದ್ದಂತೆ.  ಸಮಾಜದಲ್ಲಿ ನಾವೆಲ್ಲರೂ ಸಾಮಾರಸ್ಯದಿಂದ ಬದಕು ನಡೆಸಿ ಹಿಂದೂ ಧರ್ಮವನ್ನು ಗಟ್ಟಿಗೊಳಿಸಬೇಕು. ಡ್ರಗ್ಸ್, ಪ್ರೀತಿ ವ್ಯಮೋಹಕ್ಕೆ ಮಕ್ಕಳು ಬಲಿಯಾಗಬಾರದು, ಇದರಿಂದ ಪೊಷಕರು ಮಾನಸಿಕವಾಗಿ ನೋವನ್ನು ಅನುಭವಿಸುತ್ತಾರೆ. ಪೊಷಕರನ್ನು ನೋಯಿಸದಿರುವ ಮಕ್ಕಳು ಸಮಾಜದಲ್ಲಿ ಯಶಸ್ಸು ಪಡೆಯುತ್ತಾರೆ. ಮಕ್ಕಳು ತಂದೆ ತಾಯಿಗೆ ಸುಖಿ ಜೀವನ ನೀಡಿ ಎಂದು ಹೇಳಿದ ಅವರು 225 ಮಂದಿಗೆ ಎಂಬಿಎಸ್ ಸೀಟ್ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿ ಸಿಕ್ಕಿರುವುದು ಸಂತೋಷ ಸಂಗತಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಪಿ. ಯಚ್. ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ ಮುಂದಿನ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನ ವಿತರಣೆಯನ್ನು ಬಂಟರ ಸಮಾಜದೊಂದಿಗೆ ಇತರ ಸಮಾಜದ ಮಂದಿಗೆ ಶೇ. 10 ರಷ್ಟು ನೀಡಲಾಗುವುದು ಎಂದು ಫೋಷಿಸಿದರು.

ಮುಖ್ಯ ಅತಿಥಿಯಾಗಿ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಜಯಂತ ಶೆಟ್ಟಿ ಕುಂಟಿನಿ, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಜಯರಾಮ ಶೆಟ್ಟಿ ಮುಂಡಾಡಿಗುತ್ತು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಧಿ ಸಂಚಾಲಕ ಅಜಿತ್ ಜಿ. ಶೆಟ್ಟಿ ಮಾತನಾಡಿ 46 ವರ್ಷದಿಂದ ದಾನಿಗಳ ಸಹಕಾರದಿಂದ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ.  ಈ ಬಾರಿ 326 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಸಮಾಜದೊಂದಿಗೆ ವಿದ್ಯಾರ್ಥಿಗಳು ಕುಟುಂಬದ ಸಂಬಂಧ ಗಟ್ಟಿಯಾಗಲಿ, ಹಾಗೇಯೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ,  ಇಲ್ಲಿ ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಉದ್ಯೋಗ ಸೇರಿದ ಬಳಿಕ ವಿದ್ಯಾರ್ಥಿನಿಧಿಗೆ ಸಹಕರಿಸಿಸುತ್ತಿರುವುದು ಗಮನಹ ವಾಗಿದೆ  ಎಂದು ಪ್ರಸ್ತಾವಿಸಿ ಸ್ವಾಗತಿಸಿದರು.

ಸಮಿತಿಯ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲೖಲಾ, ಉಪಾಧ್ಯಕ್ಷ ರಾಜು ಶೆಟ್ಟಿ ಬೆಂಗತ್ಯಾರು, ಕೋಶಾಧಿಕಾರಿ ವಸಂತ ಶೆಟ್ಟಿ ಶ್ರದ್ಧಾ, ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಸುಲ್ಕೇರಿ,  ಸಂಘದ ನಿಕಟಪೂರ್ವ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ, ಯುವ ವಿಭಾಗ ಅಧ್ಯಕ್ಷ ಅಜಯ್ ಜೆ. ಶೆಟ್ಟಿ, ಮಹಿಳಾ ವಿಭಾಗ ಅಧ್ಯಕ್ಷ ವಸುಧ ಪಿ. ಶೆಟ್ಟಿ ಸಹಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಪ್ರತಿಭಾ ಪುರಸ್ಕಾರ, ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಕಳ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಾಕಾಧ್ಯಕ್ಷ ಡಾ| ಸುಧಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಭಾಸ್ಕರ ಶೆಟ್ಟಿ ಮತ್ತು  ತಂಡ ಪ್ರಾರ್ಥಿಸಿದರು.  ಪತ್ರಕರ್ತೆ ಶ್ರೇಯಾ ಶೆಟ್ಟಿ ಗುರುವಾಯನಕೆರೆ ನಿರೂಪಿಸಿದರು.

Related posts

ಬೆಳ್ತಂಗಡಿ ಯುವ ಕಾಂಗ್ರೆಸ್ ಸಮಿತಿ ವತಿಯಿಂದ “ಸರ್ಕಾರದ ನಡೆ ಕಾರ್ಯಕರ್ತರ ಕಡೆ” ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ಮುಂಡಾಜೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಅಳದಂಗಡಿ ಪಾಲಬೆ ಮನೆಯ ಭವ್ಯ ರಂಗಮಂಟಪದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

Suddi Udaya

ನಡ ಸ. ಪ್ರೌ.ಶಾಲೆಯಲ್ಲಿ ತಾಲ್ಲೂಕು ಮಟ್ಟದ ಯೋಗ ಸ್ಪರ್ಧೆ

Suddi Udaya

ಲಾಯಿಲ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಶ್ರದ್ದೇಶ್ ಗಾಣಿಗ, ಕಾರ್ಯದರ್ಶಿಯಾಗಿ ಅಜಯ್

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್ ಪೂಂಜ:ತಾಲ್ಲೂಕಿನಾದ್ಯಾಂತ ಸಂಘಟನಾತ್ಮಕ ಪ್ರವಾಸ – 65ಕ್ಕೂ ಅಧಿಕಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿ, ಕಾಯ೯ಕತ೯ರ ಸಭೆ

Suddi Udaya
error: Content is protected !!