ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಅಳದಂಗಡಿ ಪಾಲಬೆ ಮನೆಯ ಭವ್ಯ ರಂಗಮಂಟಪದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

ಅಳದಂಗಡಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಅಳದಂಗಡಿ ಶ್ರೀದೇವಿ ನಿಲಯ ಪಾಲಬೆ ಮನೆಯ ಅಂಗಳದಲ್ಲಿ ಹಾಕಿರುವ ಭವ್ಯ ರಂಗಮಂಟಪದಲ್ಲಿ ನ.23ರಂದು ಸಂಜೆ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಯಿತು.

ಕುಣಿತ ಭಜನೆ ಹಾಗೂ ವಿವಿಧ ವಿನೋದಾವಳಿಗಳ ಮೂಲಕ ದೇವರ ಪ್ರವೇಶ, ಚೌಕಿ ಪೂಜೆ ನಡೆಯಿತು.

ಕಟೀಲು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸಿದ್ದರು.ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು,ಶಾಸಕ ಹರೀಶ್ ಪೂಂಜ,ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಪ್ರಗತಿಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ, ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ,ಮಾಜಿ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಬಳಂಜ ಗ್ರಾ.ಪಂ ಅಧ್ಯಕ್ಷೆ ಶೋಭಾ ಕುಲಾಲ್, ಉಪಾಧ್ಯಕ್ಷ ಯಶೋಧರ ಶೆಟ್ಟಿ, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಧಾರ್ಮಿಕ ಚಿಂತಕ ದಿನೇಶ್ ಪಿ‌ಕೆ, ಪ್ರಮುಖರಾದ ಡಾ.ಎನ್.ಎಂ ತುಳಪುಳೆ, ಪ್ರಕಾಶ್ ಶೆಟ್ಟಿ ನೊಚ್ಚ, ನಿತ್ಯಾನಂದ ಶೆಟ್ಟಿ ನೊಚ್ಚ, ರಂಜಿತ್ ಹೆಚ್.ಡಿ, ತಿಮ್ಮಪ್ಪ ಪೂಜಾರಿ, ಇಂಜಿನಿಯರ್ ಸೂರಜ್ ಹಾನಿಂಜ, ಗುರುಪ್ರಸಾದ್ ಹೆಗ್ಡೆ,ಗಣೇಶ್ ದೇವಾಡಿಗ, ಸತೀಶ್ ರೈ ಬಾರ್ದಡ್ಕ,ಪ್ರಕಾಶ್ ಡೇವುಣಿ, ಸತೀಶ್ ಶೆಟ್ಟಿ ಕುರೆಲ್ಯ,ರಾಧಾಕೃಷ್ಣ ರೈ ಅಟ್ಲಾಜೆ,ತಿಮ್ಮಪ್ಪ ಪೂಜಾರಿ ತಾರಿಪಡ್ಪು,ದೀಪಕ್ ಹೆಚ್.ಡಿ, ಜಗದೀಶ್ ರೈ ಹಾನಿಂಜ,ಹರೀಶ್ ವೈ ಚಂದ್ರಮ, ಜಗದೀಶ್ ಪೆರಾಜೆ, ಸುಕೇಶ್ ಹಾನಿಂಜ ಹಾಗೂ ವಿವಿಧ ಕ್ಷೇತ್ರದ ಗಣ್ಯರು,ಸಂಘ ಸಂಸ್ಥೆಗಳ ಮುಖ್ಯಸ್ಥರು, ಮೊದಲಾದವರು ಉಪಸ್ಥಿತರಿದ್ದರು.

ಶ್ರೀಮತಿ ದೀಪ್ತಿ ಮತ್ತು ಶೇಖರ ದೇವಾಡಿಗ, ಮಾ. ಚಾರ್ವಿಕ್, ಬೇಬಿ ಶ್ರೇಯಾನ್ವಿ, ಹರೀಶ್ ದೇವಾಡಿಗ ಪಾಲಬೆ ಆಗಮಿಸಿದ ಅತಿಥಿ ಗಣ್ಯರನ್ನು,ಭಕ್ತಾದಿಗಳನ್ನು ಸ್ವಾಗತಿಸಿದರು.

Related posts

ಭಾರೀ ಮಳೆಗೆ : ಕೊಕ್ಕಡ ಎಲ್ಯಣ್ಣ ಗೌಡರವರ ಬಾವಿ ಕುಸಿತ: ಅಪಾರ ನಷ್ಟ

Suddi Udaya

ರೇಷ್ಮೆರೋಡ್: ಬೃಹತ್ ಗಾತ್ರದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ಮಂಗಳೂರು ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ನೂತನ ತುರ್ತು ಚಿಕಿತ್ಸಾ ವೈದ್ಯಕೀಯ ಕೇಂದ್ರ ಉದ್ಘಾಟನೆ

Suddi Udaya

ಕೊಕ್ಕಡ ಕೇಸರಿ ಗೆಳೆಯರ ಬಳಗದ ವತಿಯಿಂದ ಅಯೋಧ್ಯ ಟ್ರೋಫಿ: ಅಯೋಧ್ಯ ಕರಸೇವಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಎ.ಪಿ.ಎಂ.ಸಿ ನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ

Suddi Udaya

ಬೆಂಗಳೂರು ಬ್ಯಾರಿ ಜಮಾಅತ್ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಸವಾದ್ ಮುಹಮ್ಮದ್ ಕುಂಞ ಉಜಿರೆ

Suddi Udaya
error: Content is protected !!