September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸುಲ್ಕೇರಿಮೊಗ್ರು ಹಿಂದೂ ಯುವ ಸೇನೆ ಸೇವಾ ಸಂಘದ ಲೋಗೋ ಬಿಡುಗಡೆ ಹಾಗೂ ಸೇವಾ ರಸೀದಿ ಬಿಡುಗಡೆ ಕಾರ್ಯಕ್ರಮ

ಸುಲ್ಕೇರಿಮೊಗ್ರು: ಹಿಂದೂ ಯುವ ಸೇನೆ ಸೇವಾ ಸಂಘ ಸುಲ್ಕೇರಿಮೊಗ್ರು, ಇದರ ಲೋಗೋ ಬಿಡುಗಡೆ ಹಾಗೂ ಸೇವಾ ರಸೀದಿ ಬಿಡುಗಡೆ ಕಾರ್ಯಕ್ರಮವು ಸಂಘದ ಅಧ್ಯಕ್ಷ ಅಶ್ವಥ್ ಸಾಲ್ಯಾನ್ ವರ್ಪಾಲೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ನಿತ್ಯಾನಂದ ಶೆಟ್ಟಿ ನೊಚ್ಚ ಭಾಗವಹಿಸಿ ಹಿಂದೂ ಯುವ ಸೇನೆ ಸೇವಾ ಸಂಘದ ಲೋಗೋ ಬಿಡುಗಡೆ ಮಾಡಿದರು ಹಾಗೂ ಸಮಾಜ ಸೇವೆಯ ಬಗ್ಗೆ ಮಾತನಾಡಿದರು. ಸಂಘವು (2018) ಸುಮಾರು 8 ವರ್ಷಗಳ ಹಿಂದೆ ಪ್ರಾರಂಭಗೊಂಡು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದು, ಆಸಕ್ತ ಕುಟುಂಬಗಳಿಗೆ ದಾನ ಸಹಾಯವನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಕಾರ್ಯಕ್ರಮ, ಅಸಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ಅಧ್ಯಕ್ಷರು ತಿಳಿಸಿದರು.

ಕಾರ್ಯಕ್ರಮವು ನಂದನ್ ಕುಮಾರ್ ಪ್ರಾರ್ಥಿಸಿ, ಸುದರ್ಶನ್ ಸ್ವಾಗತಿಸಿ, ಕಾರ್ಯಕ್ರಮದ ನಿರೂಪಣೆಯನ್ನು ಪುರುಷೋತ್ತಮ್ ನಿರ್ವಹಿಸಿದರು. ಸಂಜೀವ ದೇವರಗುಡ್ಡೆ ಧನ್ಯವಾದವನ್ನಿತ್ತರು. ಸಂಘದ ಲೋಗೋವನ್ನು ಕಿರಣ್ ಕುಮಾರ್ ಜ್ಯೋತಿಕಾ ಸ್ಟುಡಿಯೋ ಅಳದಂಗಡಿ ಮಾಡಿದರು.

Related posts

ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಆರ್ಥಿಕ ಸಹಾಯ ಧನ ವಿತರಣೆ

Suddi Udaya

ಮೊಗ್ರು: ಮುಗೇರಡ್ಕ ಕಿ.ಪ್ರಾ. ಶಾಲೆಯ ಬಿಸಿಯೂಟ ಕೊಠಡಿಗೆ ಬಂದಾರು ಗ್ರಾ.ಪಂ. ವತಿಯಿಂದ ಶೀಟ್ ಅಳವಡಿಕೆ

Suddi Udaya

ಬಂದಾರು : ಬಟ್ಲಡ್ಕ ಜುಮಾ ಮಸೀದಿಯಲ್ಲಿ 2ನೇ ದಿನದ ಉರೂಸ್ ಸಮಾರಂಭ

Suddi Udaya

ನೆರಿಯದಲ್ಲಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ: ಗ್ರಾಮ ಪಂಚಾಯಿತಿ ಎದುರು ರಾತ್ರಿ ತನಕ ಪ್ರತಿಭಟನೆ

Suddi Udaya

ಅಕ್ರಮ ಮರಳು ಸಾಗಾಟ: ಪೊಲೀಸರ ದಾಳಿ; ಎರಡು ಟಿಪ್ಪರ್ ವಾಹನ ವಶ

Suddi Udaya

ಮಡಂತ್ಯಾರು ಮಂಜಲ್ ಪಲ್ಕೆಯಲ್ಲಿ ತೆರೆದ ಕೊಳವೆ ಬಾವಿಯನ್ನು ಮುಚ್ಚಿಸಿದ ಮಡಂತ್ಯಾರು ಗ್ರಾ.ಪಂ.

Suddi Udaya
error: Content is protected !!