September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು ಮೈತ್ರಿ ಯುವಕ ಮಂಡಲದ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಉದ್ಘಾಟನೆ

ಬೆಳಾಲು : ಸೆ 06 ಮೈತ್ರಿ ಯುವಕ ಮಂಡಲ ಬೆಳಾಲು ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಸೆ. 06 ರಂದು ಯುವಕ ಮಂಡಲದ ವಠಾರದಲ್ಲಿ ನೆರವೇರಿತು.

ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಅರ್ಚಕರಾದ ಸಂಪತ್ ಕುಮಾರ್ ದೀಪ ಪ್ರಜ್ವಲನೆಗೊಳಿಸುವ ಮೂಲಕ ಚಾಲನೆ ನೀಡಿ, ಶುಭ ಹಾರೈಸಿದರು. ಉದ್ಯಮಿಗಳಾದ ಸತೀಶ್ ಗೌಡ ಗಣಪನಗುತ್ತು, ಶ್ರೀ ಧ.ಮ. ಪ್ರೌಢಶಾಲೆ ಬೆಳಾಲು ಅಧ್ಯಾಪಕರಾದ ಕಿರಣ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯುವಕ ಮಂಡಲ ಗೌರವಾಧ್ಯಕ್ಷರಾದ ನಿತಿನ್ ಮೋನಿಸ್, ಅಧ್ಯಕ್ಷ ನವನೀತ್ ಗೌಡ, ಕಾರ್ಯದರ್ಶಿ ಕಿರಣ್ ಸುವರ್ಣ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಯುವಕ ಮಂಡಲದ ಗೌರವ ಸಲಹೆಗಾರರು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜತ್ತನ್ನ ಗೌಡ, ನೋಟರಿ ವಕೀಲರಾದ ಶ್ರೀನಿವಾಸ್ ಗೌಡ ಗೌಡ ಶ್ರೀ ಸೌಧ ಬೆಳಾಲು, ವಕೀಲರಾದ ಕೇಶವ್ ಗೌಡ ಪಿ., ಅಧ್ಯಪಕರಾದ ಭರತ್ ಬೆಳಾಲು, ಅನಿಲ್ ಡಿ ಸೋಜ, ಶ್ಯಾಮ್ ರಾಯ ಆಚಾರ್ಯ, ಡೀಕಯ್ಯ ಗೌಡ ಅರಣೆಮಾರು,ಕೇಶವ ಟೈಲರ್, ದಿನೇಶ್, ಹರೀಶ್ ದರ್ಖಾಸು ಬೆಳಾಲು,ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ವಾತಿ ಪ್ರಾರ್ಥನೆಗೈದರು, ಸ್ವಾಗತ ನವನೀತ್ ಅಧ್ಯಕ್ಷರು ಮೈತ್ರಿ ಯುವಕ ಮಂಡಲದ ಅಧ್ಯಕ್ಷ ನವನೀತ್ ಗೌಡ ಸ್ವಾಗತಿಸಿ, ಕಾರ್ಯದರ್ಶಿ ಕಿರಣ್ ಸುವರ್ಣ ಈರೆಂತ್ಯಾರು ಧನ್ಯವಾದವಿತ್ತರು,
ಅಧ್ಯಪಕರಾದ ಭರತ್ ನಿರೂಪಣೆಗೈದರು. ಆಕರ್ಷಣೆಯ ಕೃಷ್ಣ ವೇಷ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆಗಳು ನೆರವೇರಿತು.

Related posts

ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ ಲಾರಿ: ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್

Suddi Udaya

ಬೆಳ್ತಂಗಡಿ ಭಾರತಿಯ ಜೈನ್ ಮಿಲನ್ ವಲಯ 8ರ ವಾರ್ಷಿಕ ಮಹಾಸಭೆ

Suddi Udaya

ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆಯ ಬಗ್ಗೆ ಜಾಗೃತಿ ಅಭಿಯಾನ

Suddi Udaya

ಉಜಿರೆ ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್‌ ಸಯನ್ಸ್‌ ಉಪನ್ಯಾಸಕಿ ಸುಚೇತಾರವರಿಗೆ ಪಿ.ಎಚ್.ಡಿ ಪದವಿ

Suddi Udaya

ಕಡಿರುದ್ಯಾವರ: ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವಾಣಿ ಸೌಹಾರ್ದಕೋ ಆಪರೇಟಿವ್ ಸೊಸೈಟಿ ಮಹಾಸಭೆ

Suddi Udaya
error: Content is protected !!