ಕುವೆಟ್ಟು: ಶ್ರೀರಾಮ ಸೇವಾ ಸಮಿತಿ ಮದ್ದಡ್ಕ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಮದ್ದಡ್ಕ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಸೆ 4 ರoದು ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ವಿಜೃಂಭಣೆಯಿಂದ ಜರಗಿತು.

ರಾಘವೇಂದ್ರ ಭಟ್ ಮಠ ಇವರು ಭಜನಾ ಮಂದಿರದಲ್ಲಿ ವಿಶೇಷ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಕ್ಕಳಿಗೆ ಮಹನೀಯರಿಗೆ ಮಹಿಳೆಯರಿಗೆ ವಿಶೇಷ ಆಟೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಿವೃತ್ತ ಅಂಚೆಪಾಲಕರಾದ ಬಾಲಕೃಷ್ಣ ಪೂಜಾ ಹೊಸಮನೆ ಇವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಧಾರ್ಮಿಕ ಸಭೆಯಲ್ಲಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ವೀಣಾ ಎಸ್ ನಾಯಕ್ ಬಲ್ಕತ್ಯಾರು ಇವರು ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಮನೋಹರ ಕೇದಳಿಕೆ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಗೌರಾಧ್ಯಕ್ಷರಾದ ರಾಜಪ್ರಕಾಶ್ ಶೆಟ್ಟಿ ಪಡ್ಡೈಲು. ವಿಶ್ವ ಹಿಂದೂ ಪರಿಷತ್ ಘಟಕದ ಅಧ್ಯಕ್ಷ ಗಣೇಶ್ ಶೆಟ್ಟಿ ಅರ್ಕಜೆ, ಕಾರ್ಯದರ್ಶಿ ವಿನೋದ್ ಶೆಣೈ ಮದ್ದಡ್ಕ, ಬಜರಂಗದಳ ಮದ್ದಡ್ಕ ಸಂಚಾಲಕರಾದ ಯಶೋಧರ ಶೆಟ್ಟಿ ಅರ್ಕಜೆ,. ಶ್ರೀರಾಮ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಆಚಾರ್ಯ, ಕೋಶಾಧಿಕಾರಿ ಪವನ್ ಪೂಜಾರಿ ಪಯ್ಯೋಟ್ಟು, ಉಪಸ್ಥಿತರಿದ್ದರು.

ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ವಿಶೇಷವಾದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಬಹುಮಾನ ನೀಡಲಾಯಿತು ಹಾಗೂ ಹಲವು ವರ್ಷಗಳ ಹಿಂದೆ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮಗಳು ನಡೆಸಿಕೊಂಡು ಬಂದಂತ ಹಿರಿಯರಾದ ಗೋಪಾಲ ಆಚಾರ್ಯ ಮತ್ತು ಶಾಂತರಾಮ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ದೃತಿ ಆಚಾರ್ಯ ಪ್ರಾರ್ಥನೆಗೈದರು. ಶೈಲಿಶ್ ಕಾರ್ಯಕ್ರಮ ನಿರೂಪಿಸಿ. ವಿಜಯ ಸಾಲಿಯನ್ ಪಣಕಜೆ ಸ್ವಾಗತಿಸಿದರು. ಪ್ರಭಾಕರ್ ಶೆಟ್ಟಿ ಉಪ್ಪಡ್ಕ ಸನ್ಮಾನಿತರನ್ನು ಪರಿಚಯಿಸಿದರು. ಮನು ಮದ್ದಡ್ಕ ಧನ್ಯವಾದ ನೀಡಿದರು.
(ವರದಿ ಮನು ಮದ್ದಡ್ಕ)












