November 5, 2026
ವರದಿಶುಭಾರಂಭಸಂಘ-ಸಂಸ್ಥೆಗಳು

ಬೆಳ್ತಂಗಡಿಯ ಪ್ರಖ್ಯಾತ ವಸ್ತ್ರಮಳಿಗೆ ಮಯೂರ ಟೈಕ್ಸ್‌ಟೈಲ್ಸ್ – ಬೆಳ್ತಂಗಡಿ ಚರ್ಚ್ ರಸ್ತೆಯ ಶ್ರೀಸಾಯಿ ಸನ್ನಿಧಿಗೆ ಸ್ಥಳಾಂತರಗೊಂಡು ಶುಭಾರಂಭ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮನೆಮತಾಗಿರುವ ಹಾಗೂ ಗುಣಮಟ್ಟಕ್ಕೆ ಪ್ರಖ್ಯಾತಿಯನ್ನು ಪಡೆದ ಶ್ರೀ ಮಯೂರ
ಟೆಕ್ಸ್‌ಟೈಲ್ಸ್ ನ.5ರಂದು ಬೆಳ್ತಂಗಡಿ ಚರ್ಚ್ ರಸ್ತೆಯ ಶ್ರೀಸಾಯಿ ಸನ್ನಿಧಿಯ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಸ್ಥಳಾಂತರಗೊಂಡ ನೂತನ ಸಂಸ್ಥೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ನ ಧಮ೯ಗುರುಗಳಾದ ರೇ.ಫಾ. ವಾಲ್ಟರ್ ಡಿ ಮೊಲ್ಲೋ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಮಂಗಳಗಿರಿ ಮುಂಡೂರಿನ ಆಡಳಿತ ಮೋಕ್ತೇಸರ ರಾಜೀವ್, ಬೆಳ್ತಂಗಡಿಯ ಲೋಬೋ ಮೋಟಾರ‍್ಸ್‌ನ ಮಾಲಕ ಉದ್ಯಮಿ ರೋನಾಲ್ಡ್ ಲೋಬೊ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ, ಪುರೋಹಿತರಾದ ಸದಾಶಿವ ಹೊಳ್ಳ ಚಂದ್ಕೂರು, ಕೃಷ್ಣ ಎಲೆಕ್ಟ್ರಿಕಲ್‌ನ ಮಾಲಕ ಕೃಷ್ಣಭಟ್ ಕೊಯ್ಯೂರು ಭಾಗವಹಿಸಿ ಸ್ಥಳಾಂತರ ಸಂಸ್ಥೆಗೆ ಶುಭ ಕೋರಿದರು.

ಸಂಸ್ಥೆಯ ಮಾಲಕ ಪದ್ಮನಾಭ ಅವರು ಆಗಮಿಸಿದ ಅತಿಥಿ-ಗಣ್ಯರನ್ನು ಬರಮಾಡಿಕೊಂಡರು. ಸುವರ್ಣ ಸ್ಟುಡಿಯೋ ಮಾಲಕ ಪಾಲಾಕ್ಷ ಸುವರ್ಣ ಸಂಸ್ಥೆ ಬೆಳೆದು ಬಂದ ಹಾದಿಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ಲಾಯಿಲ ವಂದಿಸಿದರು.

Related posts

ತ್ರೋಬಾಲ್ ಪಂದ್ಯಾಟ: ಪೆರಿಂಜೆ ಶ್ರೀ.ಧ.ಮಂ. ಅನುದಾನಿತ ಪ್ರೌಢಶಾಲೆ ವಿದ್ಯಾರ್ಥಿನಿ ಹಾಜ್ರ ರಾಫಿಯಾ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪ್ರಕ್ರಿಯೆ ಆರಂಭ

Suddi Udaya

ಉಜಿರೆ ಎಸ್ ಡಿ ಎಮ್ ಪಾಲಿಟೆಕ್ನಿಕ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಟೆಕ್ ವ್ಯುಹ್ ಕಾರ್ಯಕ್ರಮ

Suddi Udaya

ಅಳದಂಗಡಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸ್ವಚ್ಚತಾ ಅಭಿಯಾನ

Suddi Udaya

ಸಚಿವ ದಿನೇಶ್ ಗುಂಡೂರಾವ್‌ರಿಂದ ಉಜಿರೆ ಮತ್ತು ಬೆಳ್ತಂಗಡಿಯಲ್ಲಿ ನಿರ್ಮಾಣಗೊಳ್ಳಲಿರುವ ಮೆಟ್ರಿಕ್ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಶಿಲಾನ್ಯಾಸ

Suddi Udaya

ಇಂದಬೆಟ್ಟು ಪಲ್ಲದಕೋಡಿ ನಿವಾಸಿ ಜಗದೀಶ್ ನಿಧನ

Suddi Udaya
error: Content is protected !!