29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಎಕ್ಸೆಲ್ ಸಮೂಹ ಸಂಸ್ಥೆಗಳಲ್ಲಿ ಗೋಕುಲದ ಗೋಪಾಲ ಬೃಂದಾವನದ ರಾಧೆ ಸ್ಪರ್ಧೆ

ಗುರುವಾಯನಕೆರೆ: ಎಕ್ಸೆಲ್‌ ಟೆಕ್ನೋ ಸ್ಕೂಲ್‌ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗೋಕುಲದ ಗೋಪಾಲ ಬೃಂದಾವನದ ರಾಧೆ ಸ್ಪರ್ಧೆ ಸಂಸ್ಥೆಯ ಕುವೆಂಪು ಸಭಾಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರು ಸುಮಂತ್ ಕುಮಾರ್ ಜೈನ್ ಬಿ, ಅತಿಥಿಗಳು ಮತ್ತು ತೀರ್ಪುಗಾರರಾಗಿ ಯಕ್ಷಗಾನ ಕಲಾವಿದ ಮೋಹನ್ ಕಲ್ಲೂರಾಯ, ರಂಗಭೂಮಿ ಕಲಾವಿದ ಯಶ್ವಂತ್ ಬೆಳ್ತಂಗಡಿ, ಎಕ್ಸೆಲ್ ಟೆಕ್ನೋ ಸ್ಕೂಲ್ ಪ್ರಾಂಶುಪಾಲೆ ಸುಮಿತ್ರ ಗೌಡ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಸುಮಂತ್ ಕುಮಾರ್ ಜೈನ್ ಬಿ ಯವರು ಈ ಕಾರ್ಯಕ್ರಮವನ್ನು ಸ್ಪರ್ಧೆಯ ರೀತಿಯಲ್ಲಿ ಮಾತ್ರ ಪರಿಗಣಿಸದೆ ಮಕ್ಕಳಿಗೆ ಕೃಷ್ಣನ ತತ್ವಗಳನ್ನು ಕೃಷ್ಣನ ಲೀಲೆಯನ್ನು ತಿಳಿಸುವ ಉದ್ದೇಶದಿಂದ ಮಾಡಲಾಗಿದೆ. ಮುಂದಿನ ವರ್ಷ ಇನ್ನೂ ಅಧಿಕ ನಗದು ಬಹುಮಾನವನ್ನು ಮಾಡಿ ಅತ್ಯಂತ ವಿಜೃಂಭಣೆಯಿಂದ ಮಾಡಲಾಗುವುದು ಎಂದರು.

ತೀರ್ಪುಗಾರರಾಗಿ ಆಗಮಿಸಿದ ಮೋಹನ್ ಕಲ್ಲೂರಾಯ ಅವರು ಮಾತನಾಡಿ ಈ ಪರಿಸರದಲ್ಲಿ ಇಂತಹ ದೊಡ್ಡ ವೇದಿಕೆ ಮಕ್ಕಳಿಗೆ ಎಕ್ಸೆಲ್ ಸಂಸ್ಥೆ ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು. ಯಶ್ವಂತ್ ಬೆಳ್ತಂಗಡಿ ಮಾತನಾಡಿ ಕೃಷ್ಣನ ಜೀವನವೇ ಮೌಲ್ಯ ಭರಿತವಾದದ್ದು ಇಂತಹ ಸ್ಪರ್ಧೆಗಳು ಆ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಲು ಬಹಳ ಉಪಕಾರಿಯಾಗುತ್ತದೆ ಎಂದರು.

ಚೊಚ್ಚಲ ಬಾರಿಗೆ ನಡೆದ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ. ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 35,000 ಕ್ಕೂ ಹೆಚ್ಚು ನಗದು ಬಹುಮಾನವನ್ನು ವಿಜೇತರಿಗೆ ಪ್ರೀತಿಪೂರ್ವಕವಾಗಿ ನೀಡಲಾಯಿತು.

ಜೂನಿಯರ್ ವಿಭಾಗದಲ್ಲಿ ಆರ್‌ ವಿ .ಪಿ ಸಾಲಿಯಾನ್ ಪ್ರಥಮ, ವಿನಮ್ರ. ವಿ ದ್ವಿತೀಯ, ತ್ರಿಷಿಕ ಎಚ್ ಪೂಜಾರಿ ತೃತೀಯ, ಸೀನಿಯರ್ ‘ಎ’ ವಿಭಾಗದಲ್ಲಿ ಜಾನ್ವಿ ಎಚ್ ಕುಲಾಲ್. ಪ್ರಥಮ, ಚಿನ್ಮಯ್ ಎಸ್ ಕೆ. ದ್ವಿತೀಯ, ನವಷ್ಯ ಎಸ್ . ಜಿ ತೃತೀಯ, ಸೀನಿಯರ್ ‘ಬಿ’ ವಿಭಾಗ ದಲ್ಲಿಸ್ಮಯ ಎಸ್ ಕೋಟ್ಯಾನ್ ಪ್ರಥಮ, ಪ್ರಣಮ್ಯ ದ್ವಿತೀಯ, ಕ್ಷತ್ರಿಯ ಪೂರ್ವ ತೃತೀಯ ಸ್ಥಾನ ಪಡೆದು ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಈ ಕಾರ್ಯಕ್ರಮದಲ್ಲಿ ಎಕ್ಸೆಲ್ ಟೆಕ್ನೋ ಸ್ಕೂಲ್ ನ ಪ್ರಾಂಶುಪಾಲೆ ಸುಮಿತ್ರಾ ಗೌಡ ಹಾಗೂ ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ವೃಂದದವರು ಉಪಸ್ಥಿತರಿದ್ದರು.

Related posts

ಕಿಲ್ಲೂರು ಸ.ಉ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ವಲಯ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟ: ಬಳಂಜ ಪ್ರೌಢ ಶಾಲೆ ಪ್ರಥಮ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಕರಾಟೆ ಪಂದ್ಯಾಟ: ದಿವ್ಯ ಜ್ಯೋತಿ ಆಂ.ಮಾ. ಶಾಲೆ ಕಾಯರ್ತಡ್ಕ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಮರುಮೌಲ್ಯ ಮಾಪನದಲ್ಲಿ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಕು. ಅನನ್ಯ ರಾಜ್ಯಕ್ಕೆ 9ನೇ ರ‍್ಯಾಂಕ್

Suddi Udaya

ತುಳು ಲಿಪಿ ಆನ್-ಲೈನ್ ಪರೀಕ್ಷೆ: ಪಂಚಮಿ ಬಿ.ಆರ್ ಶತಃ ಪ್ರತಿಶತ ಸಾಧನೆ

Suddi Udaya
error: Content is protected !!