28.2 C
ಪುತ್ತೂರು, ಬೆಳ್ತಂಗಡಿ
September 9, 2026
Uncategorized

ದುರ್ನಾತ ಬೀರುತ್ತಿರುವ ಬೆಳ್ತಂಗಡಿ ಮಾರಿಗುಡಿ ಪರಿಸರ : ಭಕ್ತರು ಮೂಗುಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿ

ಬೆಳ್ತಂಗಡಿ: ಬೆಳ್ತಂಗಡಿ ನಗರದ ಮಾರಿಗುಡಿ ಪರಿಸರವು ದುರ್ನಾತ ಬೀರುತ್ತಿದ್ದು, ಮಾರಿಗುಡಿಗೆ ಭಕ್ತರು ಮೂಗುಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರಿಗುಡಿ ಪರಿಸರದಲ್ಲಿ ಹಾದು ಹೋಗುವ ಚರಂಡಿಯಲ್ಲಿ ಪೂರ್ತಿ ಕಸಕಡ್ಡಿ ತುಂಬಿದ್ದು, ಚರಂಡಿಯಲ್ಲಿ ಮಲೀನ ನೀರು ಸಂಗ್ರಹವಾಗಿದೆ. ಚರಂಡಿಯಲ್ಲಿ ಗಿಡಕಟ್ಟಿಗಳು ಬೆಳೆದು ಚರಂಡಿಯ ಸ್ವಚ್ಚತಾ ಕಾರ್ಯವನ್ನು ನಡೆಸದಿರುವುದರಿಂದ ಮಲೀನ ನೀರು ಸರಿಯಾಗಿ ಹರಿದು ಹೋಗದೆ ಅಲಲ್ಲಿ ಶೇಖರಣೆಗೊಂಡು ಈಗ ದುರ್ನಾತ ಬೀರುತ್ತಿದೆ. ಮಾರಿಗುಡಿ ಕಂಪೌಂಡನ ಸುತ್ತಾ ಗಿಡ, ಕಳೆಗಿಡಗಳು ಬೆಳೆದು ನಿಂತಿದೆ.

ಈ ಪರಿಸರ ಈಗ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಅಸಹ್ಯಕರ ಸ್ಥಿತಿಯಾಗಿದೆ. ಮಾರಿಗುಡಿಗೆ ಬರುವ ಭಕ್ತರು ಮೂಗಿಗೆ ಕೈ ಹಿಡಿದುಕೊಂಡೇ ಬರಬೇಕಾಗಿದೆ. ಆದ್ದರಿಂದ ನಗರ ಪಂಚಾಯತದ ಅಧಿಕಾರಿಗಳು ಮಾರಿಗುಡಿ ಪರಿಸರಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಮಾರಿಗುಡಿ ಪರಿಸರದ ಸ್ವಚ್ಚತೆಯನ್ನು ಆದ್ಯಷ್ಟು ಶೀಘ್ರ ಮಾಡುವಂತೆ ಭಕ್ತರು ಒತ್ತಾಯಿಸಿದ್ದಾರೆ.

Related posts

ಎಸ್. ಡಿ. ಎಮ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ವೀಡಿಯೊ ಹಾಗೂ ಮಾಹಿತಿಪತ್ರ ಅನಾವರಣ

Suddi Udaya

ಬೆಳ್ತಂಗಡಿಯಲ್ಲಿ 500 ಎಕ್ರೆ ಯಾಂತ್ರಿಕೃತ ಯಂತ್ರಶ್ರೀ ನಾಟಿಗೆ ಚಾಲನೆ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿoದ ಡಾ. ಹೆಗ್ಗಡೆ ರವರಿಗೆ ಪಟ್ಟಾಭಿಷೇಕ ವಧ೯ಂತ್ಯುತ್ಸವ‌ ಅಭಿನಂದನೆ

Suddi Udaya

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಮುಂಡಾಜೆ ಗ್ರಾ.ಪಂ ಪಿಡಿಓ ರಾಜ್ಯಮಟ್ಟಕ್ಕೆ ಆಯ್ಕೆ: ಮಹಿಳೆಯರ ಕಲಾತ್ಮಕ ವೈಯಕ್ತಿಕ ಯೋಗಾಸನ,ಸಾಂಪ್ರದಾಯಿಕ ವೈಯಕ್ತಿಕ ಯೋಗಾಸನದಲ್ಲಿ ಪ್ರಶಸ್ತಿ

Suddi Udaya

ಗುರುವಾಯನಕೆರೆ 30 ನೇ ವರ್ಷದ ಸಾರ್ವಜನಿಕ‌ ಶ್ರೀ ಗಣೇಶೋತ್ಸವ: ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿಯವರಿಂದ ಗಣಪತಿಗೆ ಬೆಳ್ಳಿ ಕಿರೀಟ ಸಮರ್ಪಣೆ

Suddi Udaya
error: Content is protected !!