28.2 C
ಪುತ್ತೂರು, ಬೆಳ್ತಂಗಡಿ
September 9, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತಹಶೀಲ್ದಾರ್ ಆದೇಶದ ಬೆನ್ನಲ್ಲೇ ಅನಧಿಕೃತ ಕಟ್ಟಡ ತೆರವು

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಪಡ್ಲಾಡಿಯ ನೇತಾಜಿ ಬಡಾವಣೆ ಪಕ್ಕದ ಸರ್ಕಾರಿ 116/1 ರಲ್ಲಿ 0.05 ಎಕ್ರರೆಯಲ್ಲಿ ಗ್ರಂಥಾಲಯಕ್ಕೆ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಮನೆ ಕಟ್ಟಡವನ್ನು ಬೆಳ್ತಂಗಡಿ ತಹಶೀಲ್ದಾರ್ ಅವರ ಆದೇಶದ ಮೇರೆಗೆ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.

ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿರುವ ಸೂರಪ್ಪ ಮತ್ತು ರಾಜು ಮೇಸ್ತ್ರಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ತೆರವುಗೊಳಿಸುವಂತೆ ಆದೇಶಿಸಿದ್ದರು. ಅದರಂತೆ ಸೆ.4ರಂದು ಅಧಿಕಾರಿಗಳು ಕಟ್ಟಡ ತೆರವುಗೊಳಿಸಲು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುಧಾಕರ್ ಬಿ.ಎಲ್. ಹಾಗೂ ರಾಜು ಮೇಸ್ತ್ರಿ ಮಗ ಸುರೇಶ್ ಅವರು ಮೂರು ದಿನಗಳೊಳಗೆ ಕಟ್ಟಡವನ್ನು ತಾವೇ ತೆರವುಗೊಳಿಸುವುದಾಗಿ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿ ಕಾಲಾವಕಾಶ ಕೋರಿದ್ದರು.

ನಿಗದಿತ ಅವಧಿಯಲ್ಲಿ ಕಟ್ಟಡ ತೆರವುಗೊಳಿಸದಿದ್ದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.ಅದರಂತೆ ಇದೀಗ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್.ನರಗುಂದ, ಕಂದಾಯ ನಿರೀಕ್ಷಕ ರಾಜು ಲಮಣಿ, ಲಾಯಿಲ ಗ್ರಾಮ ಪಂಚಾಯತ್ ಪಿಡಿಒ ತಾರಾನಾಥ್ ನಾಯ್ಕ್, ಗ್ರಾಮ ಆಡಳಿತ ಅಧಿಕಾರಿ ರನಿತಾ, ಗ್ರಾಮ ಸಹಾಯಕ ಸತೀಶ್ ಅವರ ಮುತುವರ್ಜಿಯಿಂದ ಅನಧಿಕೃತ ಕಟ್ಟಡವನ್ನು ಸಂಪೂರ್ಣವಾಗಿ ಅಕ್ರಮ ಕಟ್ಟಡ ಮಾಲೀಕರು ತೆರವುಗೊಳಿಸಿ ಕಂದಾಯ ಇಲಾಖೆಯ ಕಾನೂನು ಪಾಲನೆ ಮಾಡಿದ್ದಾರೆ‌.

Related posts

ಕಾಡಾನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀರಾಮ ಪ್ರೌಢ ಶಾಲೆಯ ಬಾಲಕ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಚಾರ್ಮಾಡಿ ಗ್ರಾ.ಪಂ. ಎದುರು ನಿರ್ಮಿತ ಗುಡಿಸಲು ತೆರವುಗೊಳಿಸುವಂತೆ ಎಸ್‌ಡಿಪಿಐ ವತಿಯಿಂದ ಬೆಳ್ತಂಗಡಿ ತಹಸೀಲ್ದಾರ್ ಹಾಗೂ ಕಾರ್ಯನಿರ್ವಹಣಾ ಅಧಿಕಾರಿಗೆ ಮನವಿ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಪದಗ್ರಹಣ ಸಮಾರಂಭ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಸಮಿತಿಯಿಂದ ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ನೂತನ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ತಮಿಳುನಾಡಿನ ದಿನೇಶ್ ಬಾಲಸುಬ್ರಹ್ಮಣ್ಯರಿಂದ ಬ್ರೋಂಕೋಸ್ಕೋಪಿ ಯಂತ್ರ ಕೊಡುಗೆ

Suddi Udaya
error: Content is protected !!