ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಅಡಚಣೆಯಾಗುವ ಮರಗಳ ತೆರವು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಹಾಗೂ ವಿದ್ಯುತ್ ಲೈನಿಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸುವ
ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಬೆಳ್ತಂಗಡಿಯ ಜೈನ ಬಸದಿ, ಮೇಲಂತಬೆಟ್ಟು, ಹಳೆಕೋಟೆ, ಚರ್ಚ್ ರೋಡ್, ಹುಣ್ಸೆಕಟ್ಟೆ, ಮುಗುಳಿ, ಕಲ್ಲಗುಡ್ಡೆ ಹಾಗೂ ಆಸುಪಾಸು ಪರಿಸರದಲ್ಲಿ ಸೆ.10ರಂದು ಬೆಳಿಗ್ಗೆ ಗಂಟೆ10.00ರಿಂದ ಸಂಜೆ ಗಂಟೆ:5.30ರ ತನಕ ವಿದ್ಯುತ್ ನಿಲುಗಡೆ ಆಗಲಿದೆ.












