32.2 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೈಬ್ರೆಂಟ್ ಕಾಲೇಜಿನಲ್ಲಿ ವಿವೇಕ ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ “ಚಾರಿತ್ರ್ಯವೇ ಯಶಸ್ಸಿನ ಮೊದಲ ಹೆಜ್ಜೆ” ವಿವೇಕ ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಂಧ್ರಪ್ರದೇಶದ ಕಡಪದಲ್ಲಿರುವ ರಾಮಕೃಷ್ಣ ವಿಷನಿನ ಸ್ವಾಮಿ ಅನುಪಮಾನಂದಜಿ ವಿದ್ಯಾರ್ಥಿಗಳನ್ನು ಉದ್ದೇಶಿ ಮಾತನಾಡುತ್ತಾ, ಈ ಸಮಾಜದಲ್ಲಿನ ಒಳಿತು ಕೆಡುಕುಗಳನ್ನು ಅರ್ಥಮಾಡಿಕೊಂಡು ಒಳಿತನ್ನು ಜೀವನದಲ್ಲಿ ಅಳವಡಿಸಿಕೊಂಡು ಧೈರ್ಯವಾಗಿ ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಮುಂದುವರಿಯಲು ಶಕ್ತಿಯನ್ನು ನೀಡುವುದೇ ವಿವೇಕ. ಸ್ವಾಮಿ ವಿವೇಕಾನಂದರಿಗೆ ಆ ಒಂದು ಶಕ್ತಿ ಇದ್ದದರಿಂದಲೇ ನರೇಂದ್ರನಾಥ ದತ್ತರಾಗಿದ್ದವರು ಸ್ವಾಮಿ ವಿವೇಕಾನಂದರಾದರು ಎಂದು ಹೇಳಿದರು.

ಯುವ ಜನತೆ ಭಾರತದ ಭವಿಷ್ಯ. ಮುಂದೆ ನೀವು ಈ ದೇಶವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವವರು ಎಂದು ಹೇಳಿದರು. ಭಾರತವು ಇಡಿ ಜಗತ್ತನ್ನೇ ಗೆಲ್ಲುತ್ತೆ ಅದು ಖಡ್ಗದಿಂದ ಅಲ್ಲ. ಯಾವುದೇ ಮಿಲಿಟರಿ ಶಕ್ತಿಯಿಂದ ಅಲ್ಲ ಬದಲಾಗಿ ನಮ್ಮ ಆದ್ಯಾತ್ಮದಿಂದ ಎಂದು ವಿವೇಕಾನಂದರು ಹೇಳಿದ್ದರು. ಇದು ನಮ್ಮ ಆಧ್ಯಾತ್ಮಕ್ಕೆ ಇರುವ ಶಕ್ತಿಯಾಗಿದೆ. ಇಲ್ಲಿ ಶ್ರೇಷ್ಠ- ಕನಿಷ್ಠ ಮತ್ತು ಧರ್ಮ ಧರ್ಮ ಎಂದು ಹೊಡೆದಾಡುವುದಲ್ಲ ನಾವೆಲ್ಲರೂ ಕೂಡಿ ಬಾಳಬೇಕು ಎಂದು ತಿಳಿಸಿದರು.


ನಿಮ್ಮ ಮನಸ್ಸನ್ನು ಏಕಾಗ್ರತೆಯಿಂದ ನಿಯಂತ್ರಿಸಿ, ಶಾರೀರಕವಾಗಿ ದೃಢವಾಗಿದ್ದುಕೊಂಡು ಆತ್ಮವಿಶ್ವಾಸದಿಂದ ಮುಂದೆ ಬರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಸಾಧನೆ ಮಾಡಿ ನಿಮ್ಮ ಪೋಷಕರು ಗರ್ವದಿಂದ ನಿಮ್ಮ ಕಡೆಗೆ ನೋಡುವಂತೆ ನೀವೆಲ್ಲರೂ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮತ್ತು ಮಾಜಿ ಸೈನಿಕರಾದ ಬೆಳ್ಳಾಲ ಗೋಪಿನಾಥ್ ರಾವ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯ ದಿವಸ್ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯ ಸೇನೆಯಲ್ಲಿ ಸುಮಾರು 20 ರಿಂದ 35 ವರ್ಷ ಸೇವೆ ಸಲ್ಲಿಸಿ, ನಿವೃತ್ತರಾಗಿ, ಪ್ರಸ್ತುತ ಕಾಲೇಜಿನಲ್ಲಿ ಶಿಸ್ತುಪಾಲನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸುಬೇದಾರ್ ಕೆ. ಗುಣಾಕರ್, ಹವಾಲ್ದಾರ್ ಎನ್. ವಿದ್ಯಾಧರ, ಹವಾಲ್ದಾರ್ ಎನ್. ಬಾಲಕೃಷ್ಣ, ಹವಾಲ್ದಾರ್ ಹರಿಚಂದ್ರ, ಹವಾಲ್ದಾರ್ ಡಿ. ಬಾಲಕೃಷ್ಣ, ಹವಾಲ್ದಾರ್ ಎಂ. ಭಾಸ್ಕರ್ ಇವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲರಾದ ಡಾ. ಎಸ್. ಎನ್. ವೆಂಕಟೇಶ್ ನಾಯಕ್ ವಹಿಸಿದ್ದರು. ಕಾಲೇಜಿನ ಟ್ರಸ್ಟಿಗಳಾದ ಸುಭಾಷ್ ಝಾ, ಡಾ. ಶರತ್ ಗೋರೆ, ಚಂದ್ರಶೇಖರ್ ರಾಜೇ ಅರಸ್, ಎಸ್. ಮೆಹಬೂಬ್ ಬಾಷಾ, ಯೋಗೇಶ್ ಬೆಡೆಕರ್ , ಆಡಳಿತಾಧಿಕಾರಿ ಅರುಣ್ ಡಿಸಿಲ್ವ ವೇದಿಕೆಯಲಿದ್ದರು . ವಿದ್ಯಾರ್ಥಿಗಳಾದ ಕು. ಹೊನ್ವಿತಾ ಅತಿಥಿಗಳನ್ನು ಪರಿಚಯಿಸಿದರು. ಗೌತಮ್ ಸ್ವಾಗತಿಸಿದರು. ಕು. ತಪಸ್ಯ ಭಟ್ ನಿರೂಪಿಸಿದರು. ತೇಜಸ್ ಬಲ್ಲಾಳ್ ವಂದನಾರ್ಪಣೆಗೈದರು.

Related posts

ಬೆಳ್ತಂಗಡಿ : ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲೂಕು ಸಮಿತಿ ಸಮಾಲೋಚನಾ ಸಭೆ

Suddi Udaya

ಮೇ 20: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ: ಅಳದಂಗಡಿಯಲ್ಲಿ ರೋಡ್ ಶೋ, ವಿಜಯೋತ್ಸವ- ಸಂದೀಪ್ ನೀರಲ್ಕೆ

Suddi Udaya

ಬೆಳ್ತಂಗಡಿ ಟಿವಿಎಸ್ ಲೋಬೋ ಮೋಟಾರ್ಸ್ ನಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಇಂದಬೆಟ್ಟು : ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ನಾವೂರು ಮತ್ತು ಕುತ್ಲೂರು ಗ್ರಾಮಗಳ ವಿದ್ಯುತ್ ಸಂಪರ್ಕಕ್ಕಾಗಿ ವನ್ಯಜೀವಿ ಮಂಡಳಿ ಅನುಮೋದನೆ: ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಅಧ್ಯಕ್ಷ ಶೇಖರ್ ಎಲ್.ಹೇಳಿಕೆ

Suddi Udaya

ಹೊಸ್ತೋಟ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!