ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ನೆಟ್ ಬಾಲ್ ಪಂದ್ಯಾಟ ಸೆ. 9 ರಂದು ಜರಗಿತು.
ಪಂದ್ಯಾಟವನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಪ್ರಮೀಳಾ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಂಧೂರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ನಿಶಾ ಬನಂದೂರು ಕ್ರೀಡಾ ಪಟುಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮಾತನಾಡಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಹೊಂದಬಹುದು ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪ್ರಭಾಕರ್ ಪ್ರಶಸ್ತಿ ವಿತರಿಸಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಶ್ರೀ ಧ. ಮಂ, ಪ್ರೌಢಶಾಲೆ ಬೆಳಾಲು ಪ್ರಥಮ ಸ್ಥಾನ, ಸರ್ಕಾರಿ ಪ್ರೌಢಶಾಲೆ ಗುರುವಾಯನಕೆರೆ ದ್ವಿತೀಯ ಸ್ಥಾನ, ಬಾಲಕರ ವಿಭಾಗದಲ್ಲಿ ಎಸ್. ಡಿ. ಎಂ ಸೆಕೆಂಡರಿ ಶಾಲೆ ಉಜಿರೆ ಪ್ರಥಮ ಸ್ಥಾನ, ಸರ್ಕಾರಿ ಪ್ರೌಢಶಾಲೆ ಗುರುವಾಯನಕೆರೆ ದ್ವಿತೀಯ ಸ್ಥಾನ ಪಡೆಯಿತು. 14ರ ವಯೋಮಾನ ಬಾಲಕಿಯರ ವಿಭಾಗದಲ್ಲಿ ಎಸ್. ಡಿ. ಎಮ್ ಜನಾರ್ದನ ಶಾಲೆ ಉಜಿರೆ ಪ್ರಥಮ, ಎಸ್. ಡಿ. ಎಂ ಸೆಕೆಂಡರಿ ಶಾಲೆ ಉಜಿರೆ ದ್ವಿತೀಯ, ಬಾಲಕರ ವಿಭಾಗದಲ್ಲಿ ಎಸ್. ಡಿ. ಎಂ. ಸೆಕೆಂಡರಿ ಶಾಲೆ ಉಜಿರೆ ಪ್ರಥಮ, ಎಸ್. ಡಿ. ಎಂ ಜನಾರ್ದನ ಶಾಲೆ ಉಜಿರೆ ದ್ವಿತೀಯ ಬಹುಮಾನ ಪಡೆಯಿತು.
ಶಿಕ್ಷಕರಾದ ಕೃಷ್ಣಾನಂದ ರಾವ್ ಸ್ವಾಗತಿಸಿ, ಶಿಕ್ಷಕರಾದ ಕಿರಣ್ ವಂದಿಸಿದರು. ಸುಮನ್ ಯು.ಎಸ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿಠ್ಠಲ ಬದನಾಜೆ ಮತ್ತು ವೆಂಕಟೇಶ್ ಗುರುವಾಯನಕೆರೆ ಉಪಸ್ಥಿತರಿದ್ದರು.












