32.2 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ : 2.21 ಲಕ್ಷ ಲೀ. ಹಾಲು ಖರೀದಿ, ರೂ.7.57 ಲಕ್ಷ ಲಾಭ: ನಿರಂಜನ್ ಜೋಶಿ

ಅಳದಂಗಡಿ: ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ನಿರಂಜನ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ಸೆ.6ರಂದು ಸಂಘದ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷ ನಿರಂಜನ್ ಜೋಶಿ ಮಾತನಾಡಿ, ವರದಿ ಸಾಲಿನಲ್ಲಿ ಸಂಘವು 55 ಸದಸ್ಯರಿಂದ ಒಟ್ಟು 2,21,880 ಲೀಟರ್ ಹಾಲನ್ನು ರೂ.89,32,931.07 ಮೌಲ್ಯಕ್ಕೆ ಖರೀದಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ 60 ಸಾವಿರ ಲೀಟರ್‌ನಷ್ಟು ಹೆಚ್ಚುವರಿ ಹಾಲು ಖರೀದಿಸಲಾಗಿದೆ. ಇದರಲ್ಲಿ 2,140.5 ಲೀಟರ್ ಹಾಲನ್ನು ರೂ.1,14,097 ಮೌಲ್ಯಕ್ಕೆ ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಉಳಿದ 2,27,790.1 ಕೆ.ಜಿ. ಹಾಲನ್ನು ರೂ.95,37,643.34 ಮೌಲ್ಯಕ್ಕೆ ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಹಾಲು ಮಾರಾಟದಿಂದ ರೂ.7,57,904.58 ಲಾಭ ಗಳಿಸಿದ್ದು, ಕಳೆದ ಸಾಲಿಗಿಂತ ರೂ.2,67,571ರಷ್ಟು ಹೆಚ್ಚುವರಿ ಲಾಭವಾಗಿದೆ ಎಂದರು.

ಸಂಘವು ಸದಸ್ಯರಿಗೆ ನಿರಂತರವಾಗಿ ಉತ್ತಮ ಸೇವೆ ಒದಗಿಸುತ್ತಿದ್ದು, ಹಾಲು ಉತ್ಪಾದಕರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರೊಂದಿಗೆ ರಾಸುಗಳಿಗೆ ವಿಮಾ ಸೌಲಭ್ಯವನ್ನೂ ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ವನಿತಾ, ನಿರ್ದೇಶಕರಾದ ಮೋಹನ್ ಹೆಗಡೆ, ಹರೀಶ್ ಪೂಜಾರಿ, ಹರೀಶ್ ಮಡಿವಾಳ, ಪ್ರವೀಣ ಚಂದ್ರ ಮೆಹೆಂದಳೆ, ಪ್ರಮೋದ, ಜಗನ್ನಾಥ, ಆನಂದ ಪ್ರಕಾಶ ಕುಟಿನ್ನ, ರೀಟಾ ಡಿ’ಸೋಜ, ಸುಶೀಲ, ಯಶೋಧ ಹಾಗೂ ವಿಸ್ತರಣಾಧಿಕಾರಿ ರಾಜೇಶ್ ಪಿಕೆ ಉಪಸ್ಥಿತರಿದ್ದರು.

ಕಾರ್ಯದರ್ಶಿ ಶ್ರೀದೇವಿ ಹಾಗೂ ಹಾಲು ಪರೀಕ್ಷಕಿ ಸುಜಾತ ಸಹಕರಿಸಿದರು.

ಸದಸ್ಯರಿಗೆ ಶೇ.65 ಬೋನಸ್: 14 ಸಹಕಾರ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ.3,22,972.17 ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿಗಿಂತ ಶೇ.17ರಷ್ಟು ಲಾಭ ಹೆಚ್ಚಳವಾಗಿದ್ದು, ಸದಸ್ಯರಿಗೆ ಶೇ.65 ಬೋನಸ್ ವಿತರಿಸಲಾಗುವುದು. ಸಂಘದ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಹಾಲಿಗೆ ನಿರಂತರ ಮಾರುಕಟ್ಟೆ ಒದಗಿಸಲಾಗುತ್ತಿದ್ದು, ರಾಸುಗಳಿಗೆ ವಿಮಾ ಸೌಲಭ್ಯವನ್ನೂ ಸಂಘದ ವತಿಯಿಂದ ಕಲ್ಪಿಸಲಾಗುತ್ತಿದೆ.
—ನಿರಂಜನ್ ಜೋಶಿ, ಅಧ್ಯಕ್ಷರು, ಸೂಳಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ

Related posts

ಎಸ್ ಡಿ ಎಮ್ ಕಾಲೇಜಿನಲ್ಲಿ ವಾಣಿಜ್ಯ “ವ್ಯವಹಾರ “ಹಬ್ಬ

Suddi Udaya

ಕರಂಬಾರು ಹಿ.ಪ್ರಾ. ಶಾಲೆಯಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

Suddi Udaya

ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ: ಡಯಾಲಿಸಿಸ್ ಯಂತ್ರ ದುರಸ್ತಿ ಮಾಡದಿರುವುದಕ್ಕೆ ಅಧಿಕಾರಿಗಳಿಗೆ ತರಾಟೆ

Suddi Udaya

ಗೇರುಕಟ್ಟೆ ಆಟೋ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿದ ನಾಮಫಲಕದಲ್ಲಿ ಯಡವಟ್ಟು: ಕೂಡಲೇ ಸರಿಪಡಿಸುವಂತೆ ಆಗ್ರಹ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವಿತೀಯ

Suddi Udaya
error: Content is protected !!