ಆರಂಬೋಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸ್ಫೂರ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಆರಂಬೋಡಿ ಇದರ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಆಶಾಶೆಟ್ಟಿ ಮತ್ತು ದನವತಿ ಪ್ರಾರ್ಥಿಸಿದರು. ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಪ್ರಭಾಕರ್ ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್, ಆರೋಗ್ಯ ಸುರಕ್ಷಾ ಅಧಿಕಾರಿ ಪ್ರಿಯಾ, ಕೆನರಾ ಬ್ಯಾಂಕಿನ ಉಷಾ ಕಾಮತ್ ಒಕ್ಕೂಟದ ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪಂಚಾಯತ್ ನಿಂದ ಸಿಗುವ ಸವಲತ್ತುಗಳ ಬಗ್ಗೆ ಸಂಜೀವಿನಿ ಸದಸ್ಯರು ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ 2025-2026ನೇ ಸಾಲಿನ ವರದಿಯನ್ನು ವಾಚಿಸಿ ಮತ್ತು ಜಮಾಖರ್ಚಿನ ಮಂಡನೆಯನ್ನು ಸುಮತಿ ಸಭೆಯಿಂದ ಅನುಮೋದನೆ ಪಡೆಯಲಾಯಿತು. ಆರೋಗ್ಯ ಸುರಕ್ಷಾಧಿಕಾರಿ ಪ್ರಿಯಾ ಇವರು ಮಹಿಳೆಯರ ಆರೋಗ್ಯ FNHW ಕಾರ್ಯಕ್ರಮದ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಿದರು.. ಉಷಾ ಕಾಮತ್ ಆರ್ಥಿಕ ಸಾಕ್ಷರತೆ ಮತ್ತು ಇನ್ಶೂರೆನ್ಸ್ ಬಗ್ಗೆ ಮಾಹಿತಿ ನೀಡಿದರು.. ವಲಯ ಮೇಲ್ವಿಚಾರಕರರಾದ ಸ್ವಸ್ತಿಕ್ ಜೈನ್ ಸಂಜೀವಿನಿ ಯೋಜನೆಯ ಬಗ್ಗೆ ಹಾಗೂ ಲಿಂಗ ಸಮಾನತೆಯ ಬಗ್ಗೆ ಮಾಹಿತಿಯನ್ನು ನೀಡಿ, ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮ ವನ್ನು ಶಾರದಾ ನಿರೂಪಿಸಿ, ಕೃಷಿ ಸಖಿ ಅತಿಥಿಗಳನ್ನು ಸ್ವಾಗತಿಸಿ.. ಸಂಘದ ಸದಸ್ಯೆ ಚಂದ್ರಿಕಾ ಧನ್ಯವಾದ ವಿತ್ತರು.












