30 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೆ.14-16: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 38ನೇ ವರ್ಷದ ಗಣೇಶೋತ್ಸವ

ಲಾಯಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಲಾಯಿಲ ವತಿಯಿಂದ 38ನೇ ವರ್ಷದ ಗಣೇಶೋತ್ಸವವು ಕುತ್ಯಾರು ಶ್ರೀವತ್ಸ ಐತಾಳ ಬೆಳ್ತಂಗಡಿ ಇವರ ಪೌರೋಹಿತ್ಯದಲ್ಲಿ ಲಾಯಿಲ ಶ್ರೀ ವಿಶ್ವೇಶ್ವರ ಕಲಾ ಮಂದಿರದಲ್ಲಿ ಸೆ.14 ರಿಂದ 16 ರವರೆಗೆ ಜರುಗಲಿದೆ.

ಕಾರ್ಯಕ್ರಮಗಳು: ಸೆ.14 ರಂದು ಬೆಳಿಗ್ಗೆ ಪುಣ್ಯಾಹ ಕಲಶ, ತೋರಣ ಮುಹೂರ್ತ, ಮೂರ್ತಿ ಪ್ರತಿಷ್ಠೆ, ಉತ್ಸವದ ಉದ್ಘಾಟನೆ ನಡೆಯಲಿದೆ.
ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಚಿತ್ತರಂಜನ್ ಹೆಗ್ಡೆ, ಲಾಯಿಲ ಗುತ್ತು, ಅರುಣ್ ಕುಮಾರ್, ದಿಶಾ ಸಮೂಹ ಸಂಸ್ಥೆಗಳು, ಉಜಿರೆ, ಹೇಮಶಂಕರ ಶೆಟ್ಟಿ, ಸ್ವಸ್ತಿಕ್ ಕ್ಯಾಶ್ ಇಂಡಸ್ಟ್ರೀಸ್, ಲಾಯಿಲ ಬೆಳ್ತಂಗಡಿ, ಪ್ರವೀಣ್ ಶೆಟ್ಟಿ, ಉದ್ಯಮಿಗಳು, ಉಜಿರೆ, ಸೀತಾರಾಮ ಆರ್., ಅಧ್ಯಕ್ಷರು, ಪ್ರಗತಿಬಂಧು ಒಕ್ಕೂಟ, ಕೇಂದ್ರ ಸಮಿತಿ, ಬೆಳ್ತಂಗಡಿ ಇವರು ಭಾಗವಹಿಸಲಿದ್ದಾರೆ.
ನಂತರ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಣಹೋಮ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಭಕ್ತಿಗೀತೆ ಮತ್ತು ದೇಶ ಭಕ್ತಿಗೀತೆ ಸ್ಪರ್ಧೆ, ಭಜನಾ ಕಾರ್ಯಕ್ರಮ, ರಾತ್ರಿ ಕರ್ನೋಡಿ, ಪಡ್ಲಾಡಿ ಶಾಲಾ ಮಕ್ಕಳ ನೃತ್ಯ ಕಾರ್ಯಕ್ರಮ ಮತ್ತು ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಸೆ.15 ರಂದು ಬೆಳಿಗ್ಗೆ ಪುಣ್ಯಾಹ ಕಲಶ, ಗಣಹೋಮ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಧಾರ್ಮಿಕ ಸಭೆ ನಡೆಯಲಿದೆ. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಅರಮಲೆಬೆಟ್ಟ, ಗುರುವಾಯನಕೆರೆ ಇದರ ಆಡಳಿತ ಮೊಕ್ತೇಸರರಾದ ಸುಕೇಶ್ ಕುಮಾರ್ ಕಡಂಬು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಅಭ್ಯಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾರ್ತಿಕೇಯ, ಅಗ್ರಿಲೀಫ್ ಲಿ. ನಿಡ್ಲೆ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಅವಿನಾಶ್ ರಾವ್, ಕಳೆಂಜ ನಂದಗೋಕುಲ ಗೋಶಾಲೆಯ ಸ್ಥಾಪಕಾಧ್ಯಕ್ಷ ಡಾ| ಎಂ.ಎಂ. ದಯಾಕರ್, ಗುರುವಾಯನಕೆರೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಬೆಳ್ತಂಗಡಿ ಪಂ.ರಾ.ಇಂ.ಉ ವಿಭಾಗ ಇಂಜಿನಿಯರ್ ದಶರಥ ವಿ. ಕುಂಬಾರ ಭಾಗವಹಿಸಲಿದ್ದಾರೆ. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಂತರ ಓಂಶಕ್ತಿ ಗೆಳೆಯರ ಬಳಗ, ಲಾಯಿಲ ಇದರ ನವರಸ ಕಲಾವಿದರಿಂದ ಹರೀಶ್ ಪಡುಬಿದ್ರೆ ವಿರಚಿತ ತುಳು ಹಾಸ್ಯಮಯ ಸಾಂಸಾರಿಕ ನಾಟಕ `ಅಜ್ಜಿಗ್ ಏರ್ಲ ಇಜ್ಜೆರ್’ ನಡೆಯಲಿದೆ.

ಸೆ.16 ರಂದು ಪೂರ್ವಾಹ್ನ ಪುಣ್ಯಾಹ ಕಲಶ, ಗಣಹೋಮ, ಬೆಳಿಗ್ಗೆ 10.30 ರಿಂದ ಶ್ರೀಕೃಷ್ಣ ಮುಖ್ಯಪ್ರಾಣ ಭಜನಾ ಮುಂಡಳಿ ಬೆಳ್ತಂಗಡಿ ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ೧೨.೩೦ಕ್ಕೆ ಧಾರ್ಮಿಕ ಸಭೆ, ಸನ್ಮಾನ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಮಹಾಪೂಜೆ, ತದನಂತರ ಬಲಮುರಿ ವಿಶ್ವೇಶ್ವರನ ವೈಭವ ಪೂರ್ಣ ಶೋಭಾಯಾತ್ರೆ ವಿವಿಧ ಭಜನಾ ತಂಡ, ವೇಷ ಭೂಷಣಗಳೊಂದಿಗೆ ಶ್ರೀ ವಿಶ್ವೇಶ್ವರ ಕಲಾ ಮಂದಿರದಿಂದ ಹೊರಟು ಬೆಳ್ತಂಗಡಿಯ ರಾಜಬೀದಿಯಲ್ಲಿ ಸಾಗಿ ಬಂದು ಶ್ರೀ ರಾಘವೇಂದ್ರ ಮಠದ ಬಳಿ ಇರುವ ಗಣಪತಿ ಕಟ್ಟೆಯಲ್ಲಿ ವಸಂತ ಪೂಜೆಗೊಂಡು ಪವಿತ್ರ ಸೋಮಾವತಿ ನದಿಯಲ್ಲಿ ವಿಗ್ರಹದ ವಿಸರ್ಜನೆಯು ಜರಗಲಿರುವುದು.

Related posts

ಪುಂಜಾಲಕಟ್ಟೆ ಕೆ ಪಿ ಎಸ್ ಪದವಿ ಪೂರ್ವ ವಿಭಾಗದ ಕಂಪ್ಯೂಟರ್ ವಿಭಾಗದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಲಾರಿ ಪಲ್ಟಿ — ಪ್ರಾಣಾಪಾಯದಿಂದ ಪಾರಾದ ಚಾಲಕ

Suddi Udaya

ನಡ ಗ್ರಾಮದ ಕೊಯ್ಯಗುಡ್ಡೆ ನಿವಾಸಿ ಜಯರಾಮ ಗೌಡ ನಿಧನ

Suddi Udaya

ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಬೆಳ್ತಂಗಡಿ ತಾಲೂಕು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗುರುವಾಯನಕೆರೆ: ಸುಧಾಕರ ನಾಯಕ್ ನಿಧನ

Suddi Udaya

ಬೆಳ್ತಂಗಡಿ ನ್ಯಾಯಾಲಯ ಸಂಕೀರ್ಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya
error: Content is protected !!