30.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೆ.13-15: ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ವಾಣಿಜ್ಯ ಸಂಕೀರ್ಣದಲ್ಲಿ 16ನೇ ವರ್ಷದ ಸಾರ್ವಜನಿಕ ಗೌರಿ ಗಣೇಶೋತ್ಸವ

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಸೆ. 13ರಿಂದ 15ರವರೆಗೆ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯನ್ ಸಭಾಭವನದಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸೆ. 13ರಂದು ಬೆಳಿಗ್ಗೆ 9ಕ್ಕೆ ಗೌರಿ ಗಣೇಶ ವಿಗ್ರಹ ಪ್ರತಿಷ್ಠಾಪನೆ, ಶ್ರೀ ಗೌರಿ ಗಣೇಶೋತ್ಸವದ ಉದ್ಘಾಟನೆ ಮತ್ತು ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.

ಮಧ್ಯಾಹ್ನ ಗಂಟೆಗೆ ಸಾರ್ವಜನಿಕರಿಗೆ ಕುಣಿತ ಭಜನಾ ಸ್ಪರ್ಧೆ ನಡೆಯಲಿದ್ದು ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ನಗದು ಮತ್ತು ಪ್ರಥಮ ಹಾಗೂ ದ್ವಿತೀಯ ವಿಜೇತ ತಂಡಗಳಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.

ಸೆ. 14ರಂದು ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 3 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕುಣಿತ ಭಜನಾ ಸ್ಪರ್ಧೆ ಜರಗಲಿದೆ. ಸೆ. 15ರಂದು ಬೆಳಿಗ್ಗೆ 108 ಕಾಯಿ ಗಣಹೋಮ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 3:30ರಿಂದ ವಿವಿಧ ತಂಡಗಳಿಂದ ಕಲಾ ಪ್ರದರ್ಶನ, ಸಂಜೆ ಸಂಧ್ಯಾ ಪೂಜೆ, ವಿಸರ್ಜನಾ ಪೂಜೆ, ಪ್ರಾರ್ಥನೆ, ಶೋಭಾ ಯಾತ್ರೆ ಜರಗಲಿದೆ. ಶೋಭಾಯಾತ್ರೆಯಲ್ಲಿ ಮಂಗಳೂರಿನ ಆಕರ್ಷಕ ಟ್ಯಾಬೋ, ಸೃಷ್ಟಿ ಆರ್ಟ್ ಗುರುವಾಯನಕೆರೆ ಗೊಂಬೆ ಬಳಗದ ಕೀಲು ಕುದುರೆ, ಬ್ಯಾಂಡ್ ಸೆಟ್, ನಾಸಿಕ್ ಬ್ಯಾಂಡ್, ಸುಡು ಮದ್ದು ಪ್ರದರ್ಶನ ಹಾಗೂ ಅನೇಕ ಕಲಾತಂಡಗಳು ಭಾಗವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ಜು.10-ಆ.20: ಕುಮುಟಾ ಕೋನಳ್ಳಿ ವನದುರ್ಗಾ ದೇಗುಲದಲ್ಲಿ ಮಹಾಮಂಡಲೇಶ್ವರ ಕನ್ಯಾಡಿ ಶ್ರೀಗಳ ಚಾತುರ್ಮಾಸ್ಯ ವ್ರತ

Suddi Udaya

ಕನ್ಯಾಡಿ || : ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭೇಟಿ

Suddi Udaya

ಮುಂಡೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ನೂತನ ಯುವಕ ಮಂಡಲಕ್ಕೆ ಚಾಲನೆ, ಬಡ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

Suddi Udaya

ಧರ್ಮಸ್ಥಳ: ಯೂಟ್ಯೂಬರ್ಸ್‌ ಮೇಲೆ ಹಲ್ಲೆ ಪ್ರಕರಣ ಧರ್ಮಸ್ಥಳ ಪೊಲೀಸರಿಂದ ಓರ್ವನ ಬಂಧನ

Suddi Udaya
error: Content is protected !!