ಇಂದಬೆಟ್ಟು: ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವಠಾರದಲ್ಲಿ ವೇ.ಮೂ. ಆನಂದ ಭಟ್‌ರವರ ಪೌರೋಹಿತ್ಯದಲ್ಲಿ 27 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.14ರಂದು ಜರುಗಲಿದೆ.
ಬೆಳಿಗ್ಗೆ ಉತ್ಸವದ ಉದ್ಘಾಟನೆಯನ್ನು ಮಹೇಶ್ ಕರ್ಕೆರ ತಾರಕೂಟೆಲ್, ಇನ್ಸ್ ಪೆಕ್ಟರ್ (Retd) Border Security Force, ಭಾರತೀಯ ಗಡಿ ಭದ್ರತಾ ಬಲ ಮಾಡಲಿದ್ದಾರೆ. ಮಧ್ಯಾಹ್ನ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ಗೌಡ ಚೌಕದಕಟ್ಟೆ ವಹಿಸಲಿದ್ದಾರೆ.ಧಾರ್ಮಿಕ ಉಪನ್ಯಾಸವನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ನಿವೃತ್ತ ಶಾರೀರಿಕ ಶಿಕ್ಷಣ ಶಿಕ್ಷಕರಾದ ರಾಧಾಕೃಷ್ಣ ಅಡ್ಯಂತಾಯ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಗುರುವಾಯನಕೆರೆ ಎಕ್ಸೆಲ್ ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ| ಪ್ರದೀಪ್ ಎ., ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಹರೀಶ್ ಸಾಲಿಯಾನ್, ಇಂದಬೆಟ್ಟು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕೆ. ಚಂದ್ರಶೇಖರ ಕಾಂಜಾನು, ನಾವೂರು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಿಜಯ ಕೆ. ಹೊಡಿಕ್ಕಾರು ಆಗಮಿಸಲಿದ್ದಾರೆ.
ಬೆಳಿಗ್ಗೆ ನಾವೂರು ಪೇಟೆಯಿಂದ ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನಕ್ಕೆ ಭಜನೆ ಮೂಲಕ ಶ್ರೀ ಮಹಾಗಣಪತಿ ದೇವರ ವಿಗ್ರಹ ಮೆರವಣಿಗೆ ಮೂಲಕ ತರಲಾಗುವುದು. ನಂತರ ಧ್ವಜಾರೋಹಣ, ಉತ್ಸವದ ಉದ್ಘಾಟನೆ, ವಂದೇ ಮಾತರಂ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ, 108 ಕಾಯಿ ಗಣಹೋಮ (ಸೇವಾಕರ್ತರು: ಶ್ರೀಮತಿ ರಾಧ ಸತೀಶ್ ಗೌಡ ಮತ್ತು ಮನೆಯವರು ಚೌಕದಕಟ್ಟೆ ಬೆದ್ರಬೆಟ್ಟು ಸುಹನಾ ಐಸ್ ಕ್ರೀಮ್), ನಂತರ ಭಜನಾ ಕಾರ್ಯಕ್ರಮ ಮಧ್ಯಾಹ್ನ ಧಾರ್ಮಿಕ ಸಭೆ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಅಪರಾಹ್ನ ಭಕ್ತಿಗೀತೆ ಸ್ಪರ್ಧೆ, ಕುಣಿತ ಭಜನಾ ಕಾರ್ಯಕ್ರಮ, ಸಂಜೆ ವಿಸರ್ಜನಾ ಪೂಜೆ, ಪ್ರಸಾದ ವಿತರಣೆ, ಸಂಜೆ ಇಂದಬೆಟ್ಟು ಹಾಗೂ ನಾವೂರು ಗ್ರಾಮದ ಎಲ್ಲಾ ಭಜನಾ ತಂಡಗಳ ನೃತ್ಯ ಭಜನೆಯ ಮೂಲಕ ಶ್ರೀ ಮಹಾಗಣಪತಿ ದೇವರ ವೈಭವದ ಶೋಭಾಯಾತ್ರೆ, ಐಕ್ಯಮಂತ್ರ, ವಿಗ್ರಹ ಜಲಸ್ಥಂಬನ ನಡೆಯಲಿದೆ.












