30.2 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಜಿರಡ್ಕ: ಓಂಕಾರೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ 14ನೇ ವರ್ಷದ ಗೋಕುಲಾಷ್ಟಮಿ ಕಾರ್ಯಕ್ರಮ

ಕಲ್ಮಂಜ: ಇಲ್ಲಿನ ಓಂಕಾರೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ 14ನೇ ವರ್ಷದ ಗೋಕುಲಾಷ್ಟಮಿ ಕಾರ್ಯಕ್ರಮವು ಪಜಿರಡ್ಕ ಸದಾಶಿವೇಶ್ವರ ದೇವಾಲಯದ ವಠಾರದಲ್ಲಿ ಸೆ.6ರಂದು ನಡೆಯಿತು. ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಬಾಲಚಂದ್ರ ರಾವ್ ಗುತ್ತುಮನೆ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ಭಾಷಣವನ್ನು ಮಾಡಿದ ವಕೀಲರು ಹಾಗೂ, ಶ್ರೀ ಗೋಪಾಲಕೃಷ್ಣ ಭಜನೆ ಮಂಡಳಿ ಸವಣಾಲು ಇದರ ಗೌರವಾಧ್ಯಕ್ಷ ಕಿರಣ್ ಕುಮಾರ್, ಯುವ ಪೀಳಿಗೆಯಲ್ಲಿ ಹಿಂದುತ್ವದ ಉಳಿವಿನ ಪ್ರಶ್ನೆ ಜಾಗೃತವಾಗಬೇಕು ಎಂದರು.


ವೇದಿಕೆಯಲ್ಲಿ ನಿವೃತ್ತ ಅಂಚೆ ಪಾಲಕರಾದ ನಿಟ್ಟೋನಿ, ಶ್ರೀ ಕ್ಷೇತ್ರ ಪಜಿರಡ್ಕ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ, ಓಂಕಾರೇಶ್ವರ ಭಜನಾ ಮಂಡಳಿ ಅಧ್ಯಕ್ಷರಾದ ಗಣೇಶ್ ಎಸ್ ಉಪಸ್ಥಿತರಿದ್ದರು. ದಾನಿಗಳಾದ ದೇವಸ್ಥಾನದ ಅರ್ಚಕ ರಾಜೇಶ್ ಹೊಳ್ಳ ಪಜಿರಡ್ಕ ಮತ್ತು ಗೌರವ ಸಲಹೆಗಾರರಾದ ಸುಬ್ರಹ್ಮಣ್ಯ ಹೊಳ್ಳ ಪಜಿರಡ್ಕ,ಸಮಾಜ ಸೇವಕ ಪಕೀರ ಕೊಡೆಕಲ್ ಇವರನ್ನು ಸನ್ಮಾನಿಸಲಾಯಿತು. ಸಂಜೆಯ ಸಮಾರೋಪ ಸಮಾರಂಭದ ಧಾರ್ಮಿಕ ಭಾಷಣವನ್ನು ದೈವ ನರ್ತಕರಾದ ಬೇಬಿ ಬಳೆಂಜ ನಾಲ್ಕೂರು ನೆರವೇರಿಸಿದರು. ಅಧ್ಯಕ್ಷತೆಯನ್ನು ರಾಘವೇಂದ್ರ ಗೌಡ ಹೂಂಕ್ರೊಟ್ಟು ವಹಿಸಿದ್ದರು.

ವೇದಿಕೆಯಲ್ಲಿ ನಾಗಬ್ರಹ್ಮ ಶಾಮಿಯಾನ ಕಲ್ಮಂಜ ಇದರ ಮಾಲಕರಾದ ಜಯಾನಂದ ಮೂಡೈಬೆಟ್ಟು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಸತ್ಯನಪಲ್ಕೆ ಇದರ ಅಧ್ಯಕ್ಷ ಸಾಂತಪ್ಪ ಎಂ ಮದಿಮಾಲಕಟ್ಟೆ , .ಓಂಕಾರೇಶ್ವರ ಭಜನಾ ಮಂಡಳಿಯ ಸದಸ್ಯರಾದ ಚೇತನ್ ಗುಡಿಗಾರ್, ಶಿಕ್ಷಕರಾದ ಲತಾಶ್ರೀ ಮತ್ತು ಅಕ್ಷತಾ ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಉಪಸ್ಥಿತರಿದ್ದರು.‌ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ, ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು.ಕಾರ್ಯಕ್ರಮದ ಸಂಚಾಲಕ ರಾಜೇಶ್ ಎಂ.ಕೆ ಇವರ ಮಾತೃಶ್ರೀ ಶ್ರೀಮತಿ ಅಕ್ಕು ಅವರನ್ನು ರವಿಚಂದ್ರ ಡಿ.ಪುಷ್ಪಗಿರಿ ಸನ್ಮಾನಿಸಿದರು.

ಅಭಿಜ್ಞಾ ಮತ್ತು ಸ್ವಾತಿ ಪ್ರಾರ್ಥಿಸಿ, ಭಜನಾ ಮಂಡಳಿಯ ಕಾರ್ಯದರ್ಶಿ ಅಣ್ಣು ಎಂ.ಕೆ ಸ್ವಾಗತಿಸಿದರು. ಸದಸ್ಯರಾದ ಸುಜನ್ ಕುಮಾರ್ ವಂದೇಮಾತರಂ ಗೀತೆ ಹಾಡಿದರು. ಆನಂದ ಎಸ್.ಡಿ ಗುರಿಪ್ಪಳ್ಳ ಧನ್ಯವಾದವಿತ್ತರು .ಪ್ರಾಸ್ತಾವಿಕ ಭಾಷಣವನ್ನು ಭಜನಾ ಮಂಡಳಿ ಮತ್ತು ಗೋಕುಲಾಷ್ಟಮಿ ಸಮಿತಿ ಸಂಚಾಲಕರಾದ ರಾಜೇಶ್ ಎಂ.ಕೆ ಮಾಡಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಗಂಗಾಧರ ಗೌಡ, ರಘು ಚಂದ್ರ ಗುಡಿಗಾರ್, ಸುಂದರಿ ಪಾಲೆದಡಿ , ಪಂಚಾಯತ್ ಸದಸ್ಯರಾದ ಪ್ರವೀಣ್ ಗೌಡ, ಸಚಿನ್ ಗೌಡ ಕಲ್ಮಂಜ, ತಾರಾನಾಥ ಪಜಿರಡ್ಕ, ಕೀರ್ತಿ ಗೌಡ, ಸಮಿತಿಯ ಕೋಶಾಧಿಕಾರಿ ಪುರಂದರ ಗೌಡ, ಸುಧೀರ್ ಆಚಾರಿಬೆಟ್ಟು, ಸಂಧ್ಯಾ ಗುಡಿಗಾರ್, ದಿವ್ಯ ಜ್ಯೋತಿ, ಅರುಣಾ ಗೌಡ, ಪುಷ್ಪಲತಾ, ದಿನೇಶ್ ಮೂಡಾಯಿಬೆಟ್ಟು, ಸತ್ಯನಪಲ್ಕೆ, ಸುಬ್ರಾಯ ಅಕ್ಷಯ ನಗರ, ರಾಜೇಶ್ ಸಂಗಮ ಅಟೋ, ವೇದಾಂತ್, ರವಿ ಬಂಡಾಜೆ ಸಹಕರಿಸಿದರು‌. ಸುಂದರೇಶ್ ಎಂ.ಕೆ ಮತ್ತು ಕೃಷ್ಣಪ್ಪ ಎಂಕೆ ಕಾರ್ಯಕ್ರಮ ನಿರ್ವಹಿಸಿದರು. ಶ್ವೇತ ಕನ್ಯಾಡಿ ಎಸ್.ಡಿ.ಎಂ ಕಾಲೇಜು ಉಜಿರೆ, ಭವ್ಯ ಹೊಳ್ಳ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆ, ಜಾನಪದ ಕಲಾವಿದರಾದ ರಂಜಿನಿ ಮುಂಡಾಜೆ ತೀರ್ಪುಗಾರರಾಗಿ ಸಹಕರಿಸಿದರು. ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.

Related posts

ಹಿಂದೂ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ರವರಿಂದ “ದಿವ್ಯ ಜ್ಯೋತಿ” ಬಿರುದು ಪುರಸ್ಕೃತೆ ಕು.ಅದ್ವಿತಿ ರಾವ್ ರವರಿಗೆ ಸನ್ಮಾನ

Suddi Udaya

ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂಡಳಿಯ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಬೆಳ್ತಂಗಡಿ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಶಾಖೆಯಲ್ಲಿ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಲಾಯಿಲ: ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಿ.ಎಸ್. ಸೇವಾ ನಿವೃತ್ತಿ

Suddi Udaya

ನಾಲ್ಕೂರು: ರಸ್ತೆ ಬದಿಯ ಕಳೆಗಿಡಗಂಟಿಗಳನ್ನು ತೆರವುಗೊಳಿಸಿ ಮಾದರಿಯಾದ ಜಗದೀಶ್ ಬಳ್ಳಿದಡ್ಡ

Suddi Udaya

ಕೊಜಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!