30.2 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ನಾವೂರು ತೃಪ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಮಹಾಸಭೆ

ನಾವೂರು : ತೃಪ್ತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ನಾವೂರು ಇದರ ವಾರ್ಷಿಕ ಮಹಾಸಭೆಯನ್ನು ಪುಷ್ಪ ರವರ ಅಧ್ಯಕ್ಷತೆಯಲ್ಲಿ ನಾವೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು.

ಪಶು ಸಖಿ ತುಳಸಿ ಸ್ವಾಗತಿಸಿ ವಲಯ ಮೇಲ್ವಿಚಾರಕರಾದ ಜಯಾನಂದ ಪ್ರಾಸ್ತಾವಿಕವಾಗಿ ಸಂಜೀವಿನಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬನೆ ಜೀವನದ ಬಗ್ಗೆ ಒಕ್ಕೂಟ ರಚನೆಯ ಉದ್ದೇಶ ದ ಬಗ್ಗೆ ಸಂಜೀವಿನಿ ಯೋಜನೆಯ ದ್ಯೇಯೋದ್ದೇಶದ ಬಗ್ಗೆ ಮಾತುಗಳನ್ನಾಡಿದರು . ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

2025- 26ನೇ ಸಾಲಿನ ಒಕ್ಕೂಟದ ವಾರ್ಷಿಕ ವರದಿಯನ್ನು ಶ್ರೀಮತಿ ಸೇವಿತ ಸಭೆಯಲ್ಲಿ ಮಂಡಿಸಿದರು ವರದಿಯನ್ನು ಚರ್ಚಿಸಿ ಸಭೆಯಿಂದ ಅನುಮೋದನೆ ಪಡೆಯಲಾಯಿತು.


ನಂತರ ಪದಾಧಿಕಾರಿಗಳ ಆಯ್ಕೆ ಪಟ್ಟಿ ನೀಡಲಾಯಿತು. ನಂತರ ಪದಾಧಿಕಾರಿಗಳ ಬದಲಾವಣೆ ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರಾದ ನಡೆಸಿಕೊಟ್ಟರು. ನೂತನ ಪದಾಧಿಕಾರಿಗಳ ಹೂಗುಚ್ಚ ನೀಡಿ ಒಕ್ಕೂಟಕ್ಕೆ ಸ್ವಾಗತಿಸಲಾಯಿತು. ನಂತರ ಸಂಜೀವಿನಿ ಸದಸ್ಯರಿಂದ ಜಯಶ್ರೀ ಮತ್ತು ಪ್ರಸನ್ನ ಒಕ್ಕೂಟ ದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ವಿಜೇತರಿಗೆ ಬಹುಮಾನ ಲೀಲಾವತಿ ಓದಿ ಹೇಳಿದರು ನೀಡಲಾಯಿತು. ಒಕ್ಕೂಟದಲ್ಲಿ ಉತ್ತಮ ಸ್ವಉದ್ಯೋಗ ಮಾಡಿ ಮಾದರಿ ಮಹಿಳೆ ಗುರುತಿಸಿದ ಶ್ರೀಮತಿ ಮಲ್ಲಿಕಾರವರನ್ನು ಸನ್ಮಾನಿಸಲಾಯಿತು. ಸ್ವಚ್ಛತಾ ಸಿಬ್ಬಂದಿ ಇಂದಿರವರನ್ನು ಗೌರವಿಸಲಾಯಿತು. ನಂತರ ಸಭೆಯಲ್ಲಿ ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಮಾತನಾಡಿ ನೂತನ ಪದಾಧಿಕಾರಿಗಳು ಒಕ್ಕೂಟಕ್ಕೆ ನಿಮೆಲ್ಲರ ಸಹಕಾರ ಇದ್ದರೆ ಇನ್ನೂ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗಬಹುದು ಎಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷರು ಸಿಬ್ಬಂದಿಗಳಿಗೆ ಮತ್ತು ವಲಯ ಮೇಲ್ವಿಚಾರಕರಾದ ಜಯಾನಂದರವರಿಗೆ ಅವರಿಗೂ ಸ್ಮರಣಿಕೆ ನೀಡಿ ಗೌರವಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕಾರ ನೀಡಿರುತ್ತಾರೆ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು
ಕಾರ್ಯಕ್ರಮವನ್ನು ಜಯಂತಿ ನಿರೂಪಣೆ , ಸೇವಿತ ಧನ್ಯವಾದಗಳು ಸಮರ್ಪಿಸಿದರು.

Related posts

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ಮತ್ತು ಸುದ್ದಿ ಉದಯ ವಾರಪತ್ರಿಕೆಯಿಂದ “ಸ್ವಾತಂತ್ರೋತ್ಸವ” ಆಚರಣೆ

Suddi Udaya

ಕಡಿರುದ್ಯಾವರ : ಶಿರಿಬೈಲು ಪರಿಸರದಲ್ಲಿ ತೋಟಕ್ಕೆ ನುಗ್ಗಿದ್ದ ಕಾಡಾನೆ : ಅಪಾರ ಕೃಷಿ ಹಾನಿ

Suddi Udaya

ಉಜಿರೆ: ಧರ್ಮ ಸಂರಕ್ಷಣಾ ಪಾದಾಯಾತ್ರೆಯ ಪೋಸ್ಟರ್ ಬಿಡುಗಡೆ

Suddi Udaya

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ರವರಿಗೆ ಅಂತಾರಾಷ್ಟ್ರೀಯ “ಏಷಿಯಾ ಪೆಸಿಫಿಕ್ ಐಕಾನ್ ಅವಾರ್ಡ್ಸ್”

Suddi Udaya

ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ

Suddi Udaya

ಲಾಯಿಲ ಕುಂಟಿನಿ ಭಾಗದಲ್ಲಿ ವೋಲ್ಟೇಜ್ ಸಮಸ್ಯೆ ಪರಿಹರಿಸಲು ಎಸ್‌ಡಿಪಿಐ ಮನವಿ

Suddi Udaya
error: Content is protected !!