ಬೆಳ್ತಂಗಡಿ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. 12 ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಏಕತಾ ಸೌಧ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಮಹಾವೀರ ಆರಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಾಲಿನಲ್ಲಿ ರೂ.14 ಕೋಟಿ ವ್ಯವಹಾರ ಮಾಡಿ ರೂ.17 ಲಕ್ಷ ಲಾಭ ಗಳಿಸಿದೆ. ಶೇಕಡ 12 ಡಿವಿಡೆಂಟ್ ಘೋಷಿಸಿದರು. ಸದಸ್ಯರು ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಮರುಪಾವತಿ ಮಾಡಿದಲ್ಲಿ ಸಂಘವು ಇನ್ನಷ್ಟು ಲಾಭ ಗಳಿಸಲು ಸಾಧ್ಯ. ಸಂಘದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಶೇ.95ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಸನ್ಮಾನಿಸಲಾಯಿತು. ಪಿಗ್ಮಿ ಸಂಗ್ರಹಕರಣನ್ನು ಗೌರವಿಸಲಾಯಿತು.
ನಿರ್ದೇಶಕರಾದ ಕೆ ಗೋಪಾಲ್ ರಾವ್, ದಿನೇಶ್ ಶೆಟ್ಟಿ, ಸಚಿನ್ ಕುಮಾರ್ ಎನ್, ಶರತ್ ಕುಮಾರ್, ಪ್ರಸಾದ್. ಬಿ,
ಬಿ. ಕೃಷ್ಣಪ್ಪ ಗುಡಿಗಾರ, ಕೆ.ಏನ್ ಆನಂದ ಶೆಟ್ಟಿ, ಮಮತಾ ಎಮ್ ಶೆಟ್ಟಿ, ವೀಣಾ ವಿ ಕುಮಾರ್ ಉಪಸ್ಥಿತರಿದ್ದರು.
ನಿರ್ದೇಶಕರಾದ ಸಂತೋಷ್ ಕುಮಾರ್ ಸ್ವಾಗತಿಸಿ. ಉಪಾಧ್ಯಕ್ಷ ತುಕಾರಾಮ ಬಿ.ಧನ್ಯವಾದವಿತ್ತರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ವರದಿ ವಾಚಿಸಿದರು.












