September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ ಕುಂಟಿನಿ ಭಾಗದಲ್ಲಿ ವೋಲ್ಟೇಜ್ ಸಮಸ್ಯೆ ಪರಿಹರಿಸಲು ಎಸ್‌ಡಿಪಿಐ ಮನವಿ

ಬೆಳ್ತಂಗಡಿ : ಲಾಯಿಲ ಗ್ರಾಮದ ಕುಂಟಿನಿ ಎಂಬಲ್ಲಿ ಸುಮಾರು 300 ಮನೆಗಳಿದ್ದು ಪಂಚಾಯತ್ ವತಿಯಿಂದ ನಳ್ಳಿನೀರಿನ ವ್ಯವಸ್ಥೆ ಇತ್ತು. ಆದರೆ ಇದೀಗ ಒಂದು ವಾರಗಳಿಂದ ಈ ಕುಂಟಿನಿ ಪ್ರದೇಶ ಗ್ರಾಮಸ್ಥರಿಗೆ ವೋಲ್ಟೇಜ್ ಸಮಸ್ಯೆಯಿಂದಾಗಿ ನೀರಿಗಾಗಿ ಪರದಾಟ ನಡೆಯುತ್ತಿದೆ. ಇದರ ಕುರಿತಾಗಿ ಇಲಾಖೆಯಲ್ಲಿ ವಿಚಾರಿಸಲಾದಾಗ ಅಲ್ಲಿನ ವೋಲ್ಟೇಜ್ ಬೇರೆ ಕಡೆಗೆ ಬದಲಾವಣೆ ಮಾಡಿದ್ದು ಎಂದು ತಿಳಿದು ಬಂತು.
ಆದುದರಿಂದ ನಿಮ್ಮ ಇಲಾಖೆಯಿಂದ ಬದಲಾವಣೆ ಮಾಡಿದ್ದಲ್ಲಿ ತಾವುಗಳು ಈ ಕೂಡಲೆ ಆ ನೊಂದ ಗ್ರಾಮಸ್ಥರ ಸಂಕಷ್ಟಕ್ಕೆ ನೆರವಾಗಿ ಯತಾಸ್ಥಿತಿಯನ್ನು ಕಾಯ್ದುಕೊಳ್ಳಬೇಕಾಗಿ ಗ್ರಾಮಸ್ಥರ ಪರವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ ಲಾಯಿಲ ಗ್ರಾಮ ಸಮಿತಿಯ ನಿಯೋಗ ಉಜಿರೆ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರ್ಯನಿರ್ವಾಹಕ ಅಭಿಯಂತರರು ಈ ವಿಚಾರದಲ್ಲಿ ಮೇಲಿನ ಇಲಾಖೆಗೆ ಸೇರಿದಂತೆ ಸಂಬಂಧಪಟ್ಟವರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಲಾಯಿಲ ಪಂಚಾಯತ್ ಸದಸ್ಯರು ಸಲೀಂ ಕುಂಟಿನಿ ಹಾಗೂ ಬ್ಲಾಕ್ ಸಮಿತಿಯ ಸದಸ್ಯರಾದ ಸಾಹುಲ್ ಕ್ಯು.ಟಿ.ಎಫ್, ಮುಹಮ್ಮದ್ ಆಲಿ, ಸಲೀಂ ಕುಂಟಿನಿ, ಸಹಲ್ ನೀರ್ಸಾಲ್ ಉಪಸ್ಥಿತರಿದ್ದರು.

Related posts

ಉಜಿರೆ: ಕುಂಜರ್ಪದಲ್ಲಿ 4ನೇ ವರ್ಷದ ದುರ್ಗಾಪೂಜೆ

Suddi Udaya

ಉಜಿರೆ: ಎಸ್.ಡಿ.ಎಂ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಉಜಿರೆ:ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಕಲಾ ಸಿಂಧು ಸಾಂಸ್ಕೃತಿಕ ಸಂಘದ ವತಿಯಿಂದ ‘ವೃಕ್ಷಾಬಂಧನ’ ಕಾರ್ಯಕ್ರಮ

Suddi Udaya

ಜು.9: ಸೋಮಂತಡ್ಕ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ 22 ನೇ ಶಾಖೆ ಉದ್ಘಾಟನೆ

Suddi Udaya

ಪೆರಾಡಿ : ಪಾಡಿ ನಿವಾಸಿ ವಸಂತ್ ಪೂಜಾರಿ ನಿಧನ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏಕಾಹ ಭಜನಾ ಮಹೋತ್ಸವ

Suddi Udaya
error: Content is protected !!