September 13, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪುತ್ತೂರುಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಉಜಿರೆ: ಮನೋಜ್ ಕುಮಾರ್ ಗಡಿಪಾರು ಅರ್ಜಿ ತಿರಸ್ಕಾರ

ಬೆಳ್ತಂಗಡಿ; ಉಜಿರೆಯ ಮನೋಜ್ ಕುಮಾರ್ ಎಂಬಾತನನ್ನು ಗಡಿಪಾರು ಮಾಡಲು ಬೆಳ್ತಂಗಡಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪುತ್ತೂರು ಸಹಾಯಕ ಕಮಿಷನರ್ ಅವರ ನ್ಯಾಯಾಲಯ ತಿರಸ್ಕರಿಸಿದೆ.

ಮನೋಜ್ ಕುಮಾರ್ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಹತ್ತು ಪ್ರಕರಣಗಳು ದಾಖಲಾಗಿದ್ದು ಆತನ ವರ್ತನೆಯಿಂದ‌‌ ಸಾಮಾಜಿಕ‌ ಆಶಾಂತಿಗೆ ಹಾಗೂ ಗಲಭೆಗಳಿಗೆ ಕಾರಣವಾಗಲಿದೆ ಆದ್ದರಿಂದ‌ ಆತನನ್ನು ಬೆಳ್ತಂಗಡಿ ತಾಲೂಕಿನಿಂದ‌ ಗಡಿಪಾರು ಮಾಡುವಂತೆ ಬೆಳ್ತಂಗಡಿ ಪೊಲೀಸ್‌ ನಿರೀಕ್ಷಕರು ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಿದ್ದರು. ಪ್ರಕರಣದ‌ ವಿಚಾರಣೆಯ ವೇಳೆ ಆರೋಪಿ ಪರ ವಾದ‌ಮಂಡಿಸಿದ ವಕೀಲರು ಪೊಲೀಸರ ಆರೋಪಗಳನ್ನು ತಳ್ಳಿಹಾಕಿ ಹತ್ತರಲ್ಲಿ ಐದು ಪ್ರಕರಣಗಳು ಈಗಾಗಲೇ ಖುಲಾಸೆ ಗೊಂಡಿದ್ದು ಐದು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಇತ್ತೀಚೆಗಿನ ಮೂರು ಪ್ರಕರಣಗಳು ಗುರುತರವಾದ ಆರೋಪಗಳದ್ದಲ್ಲ ಎಂದು ವಾದ ಮಂಡಿಸಿದ್ದರು. ವಾದ ಆಲಿಸಿದ ಪುತ್ತೂರು ಸಹಾಯಕ ಕಮಿಷನರ್ ಅವರ ನ್ಯಾಯಾಲಯ ಗಡೀಪಾರು ಕೋರಿಕೆಯನ್ನು ತಿರಸ್ಕರಿಸಿದೆ.

ಸದ್ರಿ ಆರೋಪಿಯು ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗದೇ ಸಮಾಜದಲ್ಲಿ ಶಾಂತಿಯನ್ನು ಕದಡುವಂತಹ ಯಾವುದೇ‌ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಮತ್ತು ಅರೋಪಿಯ ಬಗ್ಗೆ ಯಾವುದೇ‌ ತರಹದ ದೂರುಗಳು ಬಂದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ಅವಕಾಶ ಕಾಯ್ದಿರಿಸುತ್ತಾ, ಸದ್ರಿ ಗಡಿಪಾರು ಪ್ರಸ್ತಾವನೆಯನ್ನು ಈ ಹಂತದಲ್ಲಿಯೇ ತಿರಸ್ಕರಿಸಿ ಆದೇಶ ನೀಡಿದೆ.

Related posts

ಆ. 7 -16: ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್ ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

Suddi Udaya

ಶಿಬಾಜೆ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಭಜನೋತ್ಸವ: ಶೌರ್ಯ ವಿಪತ್ತು ತಂಡದಿಂದ ಶ್ರಮದಾನ

Suddi Udaya

ಇತಿಹಾಸ ಪ್ರಸಿದ್ಧ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ 20ನೇ ವಷ೯ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಯೋಧರಿಗೆ ಗೌರವಾರ್ಪಣೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಮಂಗಲೋತ್ಸವ ಹಾಗೂ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಕುವೆಟ್ಟು: ಮದ್ದಡ್ಕ ನಿವಾಸಿ ಹೆನ್ರಿ ಡಿಸೋಜ ನಿಧನ

Suddi Udaya

ಉಜಿರೆ : ಶ್ರೀ ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಗಮಕ ಕಾರ್ಯಕ್ರಮ

Suddi Udaya
error: Content is protected !!