September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಇತಿಹಾಸ ಪ್ರಸಿದ್ಧ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ 20ನೇ ವಷ೯ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಯೋಧರಿಗೆ ಗೌರವಾರ್ಪಣೆ

ಅಳದಂಗಡಿ: ಇತಿಹಾಸ ಪ್ರಸಿದ್ಧ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಅಳದಂಗಡಿ ಇದರ ವತಿಯಿಂದ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಸಹಯೋಗದೊಂದಿಗೆ 20ನೇ ವಷ೯ದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಯೋಧರಿಗೆ ಗೌರವಾರ್ಪಣೆ ಕಾಯ೯ಕ್ರಮ ಜೂ.9ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ಜರುಗಿತು. ‌‌

ಕಾರ್ಯಕ್ರಮದ ಉದ್ಘಾಟನೆಯನ್ನು ಪೂಜ್ಯ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಗಳು ಶ್ರೀಕ್ಷೇತ್ರ ಧರ್ಮಸ್ಥಳ ನೆರವೇರಿಸಿದರು. ಉಚಿತ ಪುಸ್ತಕ ವಿತರಣೆಯನ್ನು ಖ್ಯಾತ ಚಲನಚಿತ್ರ ನಟರು ರಮೇಶ್ ಅರವಿಂದ್ ನೆರವೇರಿಸಿದರು.

ಅಧ್ಯಕ್ಷತೆಯನ್ನು ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು, ಅಳದಂಗಡಿ ಅರಮನೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ. ಹರೀಶ್ ಕುಮಾರ್, ಶಾಸಕರು ವಿಧಾನ ಪರಿಷತ್‌, ಪ್ರತಾಪ್ ಸಿಂಹ ನಾಯಕ್, ಶಾಸಕರು ವಿಧಾನ ಪರಿಷತ್‌ ಭಾಗವಹಿಸಿದ್ದರು . ವಿಶೇಷ ಅಭ್ಯಾಗತರಾಗಿ ಯೋಗೀಶ್ ನಡಕ್ಕರ, ಧಾರ್ಮಿಕ ಪರಿಷತ್ ಸದಸ್ಯರು, ದೇವೇಂದ್ರ ಹೆಗ್ಡೆ, ಕೊಕ್ರಾಡಿ ಆಡಳಿತ ಮೊಕ್ತೇಸರರು ಶ್ರೀ ಉಮಾಮಹೇಶ್ವರ ದೇವಸ್ಥಾನ ಮರೋಡಿ, ಅಳದಂಗಡಿ ಗ್ರಾಂ.ಪಂ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಉಪಸ್ಥಿತರಿದ್ದರು.

ಯೋಧರಿಗೆ ಸನ್ಮಾನ: ಭಾರತೀಯ ಸೇನೆಯಲ್ಲಿ ಯೋಧರಾಗಿರುವಗಣೇಶ್ ಲ್ಯಾಲ ನಿವೃತ್ತ ಯೋಧರು, ಸಂಜೀವ ಕುಲಾಲ್ ಮಂಗಳೂರು ನಿವೃತ್ತ ಯೋಧರು, ಸೂರಜ್ ಸುಲ್ಕೇರಿಮೊಗ್ರು. ಯೋಧರು ವಾಯುಸೇನೆ ಇವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ವಿಶೇಷ ಸಾಧಕಿ ಸಬಿತಾ ಮೋನಿಸ್, ಗರ್ಡಾಡಿ , ಮಾ। ಚಿನ್ಮಯ, ಎಸ್.ಎಸ್.ಎಲ್.ಸಿ ರ್ಯಾಂಕ್ ವಿಜೇತರು, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ಧನ್ವಿ ಭಟ್, ಅನುಪ್ರಿಯ ಪಿಯುಸಿ ರ್ಯಾಂಕ್ ವಿಜೇತರು ಎಕ್ಸೆಲ್ ಪಿಯು ಕಾಲೇಜು ಗುರುವಾಯನಕೆರೆ ಇವರನ್ನು ಸನ್ಮಾನಿಸಲಾಯಿತು.

ಸುಮಾರು ಆರು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಶ್ರೀಮತಿ ರಾಜೇಶ್ವರಿ ಅರುಣ್ ಜೈನ್ ಇವರ ಪ್ರಾಥ೯ನೆ ಬಳಿಕ ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಸ್ವಾಗತಿಸಿದರು. ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕುರಿತು ಮಾಹಿತಿ ನೀಡಿದರು.

ವಿಜಯಾ ಕುಮಾರ್ ಅಳದಂಗಡಿ ಶ್ರೀಮತಿ ಪ್ರಜ್ಞಾ ಕುಲಾಲ್, ಮೋಹನ್ ದಾಸ್ ಅಳದಂಗಡಿ ವಿವಿಧ ಕಾಯ೯ಕ್ರಮಗಳನ್ನು ನಿವ೯ಹಿಸಿದರು. ಶಿಕ್ಷಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಲ್ಕೇರಿಮೊಗ್ರು ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಹೆಚ್ ನಿತ್ಯಾನಂದ ಶೆಟ್ಟಿ ವಂದಿಸಿದರು.

Related posts

ಹಿರಿಯ ಹಿಮ್ಮೇಳ ವಾದಕ ಧರ್ಮಸ್ಥಳದ ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ ಪ್ರದಾನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂವಿಧಾನ ದಿನಾಚರಣೆ

Suddi Udaya

ಸೌಜನ್ಯ ಸಾವಿನ ಪ್ರಕರಣದ ತನಿಖೆ ನಡೆಸುವಂತೆ ಎಸ್‌.ಐ.ಟಿ ಅಧಿಕಾರಿಗಳಿಗೆ ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ

Suddi Udaya

ಎಲ್‌.ಪಿ.ಜಿ ಸಿಲಿಂಡರ್‌ ದರ 100ರೂ ಕಡಿತ

Suddi Udaya

ಮಂಗಳೂರು ವಿವಿ ಅಂತರ್ ಕಾಲೇಜು ನೆಟ್‌ಬಾಲ್ ಪಂದ್ಯಾಟ : ಉಜಿರೆಯ ಎಸ್‌.ಡಿ.ಎಂ ಚಾಂಪಿಯನ್ಸ್

Suddi Udaya

ಕಾಯರ್ತಡ್ಕ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಅಪರಿಚಿತ ಶವ ಪತ್ತೆ: ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂಬ ಶಂಕೆ

Suddi Udaya
error: Content is protected !!