32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸೆಂಟ್ ಅಲ್ಫೋನ್ಸ ಎಸ್ ಎಂ ವೈ ಎಂ ಪ್ರಾಯೋಜಿತ ಅಲ್ಫಾ ಪ್ರಿಮಿಯರ್ ಲೀಗ್

​ನೆಲ್ಯಾಡಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಸೆಂಟ್ ಅಲ್ಫೋನ್ಸಾ ಎಸ್.ಎಂ.ವೈ.ಎಮ್. (SMYM) ನೇತೃತ್ವದಲ್ಲಿ ನಡೆದ ‘ಅಲ್ಫಾ ಪ್ರಿಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಿಳಿನೆಲೆ ಬ್ಲಾಸ್ಟರ್ಸ್ ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

​ಒಟ್ಟು 11 ತಂಡಗಳು ಭಾಗವಹಿಸಿದ್ದ ಈ ಕೂಟದ ಫೈನಲ್ ಹಣಾಹಣಿಯಲ್ಲಿ ಮಂಗಳೂರು ಅದ್ವೈಕ್ ತಂಡದ ವಿರುದ್ಧ ಸೆಣಸಿದ ಬಿಳಿನೆಲೆ ಬ್ಲಾಸ್ಟರ್ಸ್, ಅತ್ಯಂತ ಕುತೂಹಲಕಾರಿಯಾಗಿ ನಡೆದ ಸೂಪರ್ ಓವರ್‌ನಲ್ಲಿ ಎದುರಾಳಿಯನ್ನು ಪರಾಭವಗೊಳಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.


​ಸಾಮಾಜಿಕ ಕಳಕಳಿ:
ಕೇವಲ ಪಂದ್ಯಾಟಕ್ಕಷ್ಟೇ ಸೀಮಿತವಾಗದೆ, ‘ಕ್ಯಾನ್ಸರ್ ಕೇರ್’ ಯೋಜನೆಯಡಿ ಅಸಹಾಯಕ ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ನೆರವು ನೀಡುವ ಸದುದ್ದೇಶದಿಂದ ಎಸ್.ಎಂ.ವೈ.ಎಮ್. ಈ ಸಮಾಜಮುಖಿ ಕ್ರಿಕೆಟ್ ಕೂಟವನ್ನು ಆಯೋಜಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಳ್ತಂಗಡಿಯ ‘ಕಲ್ಪತರು ಸ್ಕೂಲ್ ಆಫ್ ಎಜುಕೇಶನ್ ಟ್ರಸ್ಟ್ ಪಂದ್ಯಾವಳಿಯ ಪ್ರಥಮ ಬಹುಮಾನ ರೂ. 25,000/- ವನ್ನು ಕೊಟ್ಟು ಸಹಕರಿಸಿದರು. ಎಸ್ ಎಂ ವೈ ಎಂ ಯುವಕರ ಸಾಮಾಜಿಕ ಬದ್ಧತೆಯನ್ನು ವಂದನಿಯ ಫಾ. ಷಾಜಿ ಮಾತ್ಯು ಅಭಿನಂದಿಸಿದರು.

Related posts

ದ.ಕ. ಜಿಲ್ಲಾ ಹಾಲು ಉತ್ಪಾದಕರ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಶರೀಫ್ ನೆರಿಯ ಆಯ್ಕೆ

Suddi Udaya

ಬೆಳಾಲು ಪ್ರೌಢ ಶಾಲೆ ವಿದ್ಯಾರ್ಥಿ ಸಂಸತ್ ಉದ್ಘಾಟನೆ

Suddi Udaya

ನಾವೂರು 25ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ: ಧಾರ್ಮಿಕ ಸಭೆ

Suddi Udaya

ಸೂರ್ಯತ್ತಾವು ಶ್ರೀ ದುರ್ಗಾ ಜನರಲ್ ಸ್ಟೋರ್ ಹಾಗೂ ಚಿಕನ್ ಸೆಂಟರ್ ಶುಭಾರಂಭ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ತಾ| ಮಟ್ಟದ ಫುಟ್ ಬಾಲ್ ಪಂದ್ಯಾಟ

Suddi Udaya

ಚಾರ್ಮಾಡಿ : ನಾಗಬ್ರಹ್ಮ, ನಾಗಯಕ್ಷಿಣಿ ಹಾಗೂ ಶಿರಾಡಿ ದೈವ, ರುದ್ರಾಂಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ: ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya
error: Content is protected !!