ಕಳೆಂಜ : ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ 6 ತೆಂಗಿನಕಾಯಿ ಗಣಹೋಮ ಮತ್ತು ದೇವರಿಗೆ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ತೆನೆ ತುಂಬುವ ಕಾರ್ಯಕ್ರಮ ವಿವಿಧ ಧಾರ್ಮಿಕ ವಿಧಾನಗಳಿಂದ ನಡೆಯಿತು.

ಈ ಸಂದರ್ಭದಲ್ಲಿ ಹತ್ತಿರದ ದೇವಸ್ಥಾನ ದೈವಸ್ಥಾನಗಳಿಗೆ ಮತ್ತು ಊರಿನ ಭಕ್ತ ಜನರ ಮನೆಗಳಿಗೆ ತೆನೆಯನ್ನು ನೀಡಲಾಯಿತ್ತು. ಗಣೇಶ ಚತುರ್ಥಿಯ ಈ ವಿಶೇಷ ಸಂದರ್ಭದಲ್ಲಿ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿ ಕಳೆಂಜ ಇವರ ವತಿಯಿಂದ ದೇವಸ್ಥಾನದ ಆಡಳಿತ ಮಂಡಳಿಗೆ 100 ಪ್ಲಾಸ್ಟಿಕ್ ಕುರ್ಚಿಯನ್ನು ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ ಶ್ರೀಧರ್ ರಾವ್ ಕಾಯಡ ಕಾರ್ಯದರ್ಶಿ ಕುಸುಮಾಕರ ಕೊತ್ತೋಡಿ ಕೋಶಾಧಿಕಾರಿ ನಿರಂಜನ ಬದಿಮಾರು ಸದಸ್ಯರಾದ ಲೋಕಯ್ಯ ಗೌಡ ಬಡೆಕ್ಕಲ. ಭಜನಾ ಮಂಡಳಿ ಅಧ್ಯಕ್ಷರಾದ ಶೀನಪ್ಪ ಗೌಡ ಕೊತ್ತೋಡಿ, ರಂಜಿತ್ ಕೊತ್ತೋಡಿ, ಜಯರಾಜ್, ದಿನೇಶ್, ಶ್ರೀಮತಿ ಕುಸುಮ ಕಲ್ಲದಂಬೆ, ಶ್ರೀಮತಿ ಮಲ್ಲಿಕಾ, ಶ್ರೀಮತಿ ಗೀತಾಶ್ರೀ ಮತ್ತು ಭಜನಾ ಮಂಡಳಿ ಸದಸ್ಯರು ಹಾಗೂ ಊರ ಭಕ್ತರು ಭಾಗವಹಿಸಿದ್ದರು.











