September 16, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ತ್ರಿವರ್ಣ ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ಚಾರ್ಮಾಡಿ: ಇಲ್ಲಿಯ ತ್ರಿವರ್ಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಇದರ 2025 -26 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಜಯಂತಿ ಇವರ ಅಧ್ಯಕ್ಷತೆಯಲ್ಲಿ ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಮಹಾ ಸಭೆಯನ್ನು ನಡೆಸಲಾಯಿತು.

ಸಂಜೀವಿನಿ ಧ್ಯೇಯ ಗೀತೆಯೊಂದಿಗೆ ಪ್ರಾರಂಭಿಸಿ, ಎಲ್ ಸಿ ಆರ್ ಪಿ ರಮ್ಯಾ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಜೋಸೆಫ್. ಪಿ. ಎಸ್ ಕಾರ್ಯಕ್ರಮಕ್ಕೆ ದ್ವೀಪ ಪ್ರಜ್ವಲನೆಯ ಮೂಲಕ ಉದ್ಯುಕ್ತ ಚಾಲನೆಯನ್ನು ನೀಡಿ, ಪ್ರಾಸ್ತಾವಿಕ ನುಡಿಗಳ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಒಕ್ಕೂಟದ ಕಾರ್ಯದರ್ಶಿ ದಿವ್ಯ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಯಿತು . ಮುಖ್ಯಪುಸ್ತಕ ಬರಹಗಾರರಾದ ಭವ್ಯ 2025-26 ನೇ ಸಾಲಿನ ಲೆಕ್ಕಪರಿಶೋಧನ ವರದಿಯನ್ನು ಮಂಡಿಸಿ, ಅನುಮೋದನೆಯನ್ನು ಪಡೆಯಲಾಯಿತು. ವಲಯ ಮೇಲ್ವಿಚಾರಕಾರದ ಜಯಾನಂದ್ , ಒಕ್ಕೂಟದ ಜವಾಬ್ದಾರಿ, ಗುರಿ ಮತ್ತು ಉದ್ದೇಶಗಳ ಕುರಿತಾಗಿ ವಿವರವಾದ ಮಾಹಿತಿಯನ್ನು ನೀಡಿದರು. ನಂತರದಲ್ಲಿ ಪದಾಧಿಕಾರಿಗಳ ಪದಗ್ರಹಣವನ್ನು ನಡೆಸಲಾಯಿತು. ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣೆಕೆಯನ್ನು ನೀಡಿ ಗೌರವಿಸಲಾಯಿತು. ಮತ್ತು ನೂತನ ಪದಾಧಿಕಾರಿಗಳಿಗೆ ಅಭಿನಂದಿಸಲಾಯಿತು. ಒಕ್ಕೂಟದ ಎಲ್ಲಾ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ನಿರ್ಗಮಿತ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿ, ಜತೆ ಕಾರ್ಯದರ್ಶಿ ಕೋಶಾಧಿಕಾರಿ, ಆಯ್ಕೆಯಾದ ನೂತನ ಅಧ್ಯಕ್ಷರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಎಂಬಿಕೆ ಭವ್ಯ ಧನ್ಯವಾದವಿತ್ತರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸತತ 2ನೇ ಬಾರಿಗೆ ಸುರಕ್ಷಿತ ಹೆರಿಗೆಯನ್ನು ಖಾತ್ರಿಪಡಿಸುವ ಮಾನ್ಯತಾ ಪ್ರಮಾಣಪತ್ರ

Suddi Udaya

ಕೊಲ್ಲಿ ಬ್ರಹ್ಮಕಲಶಕ್ಕೆ ಲಾಯಿಲ ಗ್ರಾಮಸ್ಥರಿಂದ ಹೊರ ಕಾಣಿಕೆ ಸಮರ್ಪಣೆ

Suddi Udaya

‘ಮೃತ್ಯುಂಜಯ’ ಮೈರಲ್ಕೆ ಶ್ರೀ ಕಿರಾತಮೂರ್ತಿ ದೇವಸ್ಥಾನದ ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆ

Suddi Udaya

ಬೆಳಾಲು: ನಾಲ್ಕು ತಿಂಗಳ ಹೆಣ್ಣು ಮಗು ಕಾಡಿನಲ್ಲಿ ಪತ್ತೆ: ಸಾರ್ವಜನಿಕರಿಂದ ರಕ್ಷಣೆ

Suddi Udaya

ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಪಿಕೋತ್ಸವ ಹಾಗೂ ಪ್ರೌಢಶಾಲೆಯ ಬೆಳ್ಳಿ ಮಹೋತ್ಸವದ ಸಮಾರೋಪ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ

Suddi Udaya
error: Content is protected !!