ಬೆಳ್ತಂಗಡಿ; ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕರಿಯ ಮೊಗೇರ ಕುಟುಂಬದ ಸಂಕಷ್ಟ ಮನಗಂಡು
ದ.ಕ ಜಿಲ್ಲಾ ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿಯವರು ಅವರಿಗೆ ಮಾಸಿಕ ಅಕ್ಕಿ ನೀಡಲು ನಿರ್ಧರಿಸಿದ್ದು, ಆರಂಭಿಕ ಮಾಸದ 50 ಕೆ.ಜಿ ಅಕ್ಕಿಯನ್ನು ಸೆ.15 ರಂದು ಕುಟುಂಬಕ್ಕೆ ಹಸ್ತಾಂತರಿಸಿದರು.
ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ಅವರ ಮನವಿಗೆ ಸ್ಪಂದಿಸಿದ ಜಯಪ್ರಕಾಶ್ ಅವರು ಈ ಕೊಡುಗೆ ನೀಡಿದರು.
ಜಯಪ್ರಕಾಶ್ ಕನ್ಯಾಡಿಯವರು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಉದ್ಯೋಗಿಯಾಗಿದ್ದು, ಈಗಾಗಲೇ
ವಿವಿಧ ಸಂಘಟನೆಗಳ ಮೂಲಕ ಅನಾರೋಗ್ಯ ಪೀಡಿತರಿಗೆ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ, ಹಾಗೂ ಅಶಕ್ತರಿಗೆ ಆಶ್ರಯ ಕಲ್ಪಿಸುವಲ್ಲಿ ಮಾದರಿಯಾಗಿ ಶ್ರಮಿಸುತ್ತಿದ್ದಾರೆ. ತನ್ನ ಪುತ್ರ ಮಧ್ವೀರ್ ಅವರ ಹೆಸರಿನಲ್ಲಿ ಈ ಸೇವೆ ಮಾಡುತ್ತಿದ್ದಾರೆ. ಇದಕ್ಕೆ ಅವರ ಪತ್ನಿ ಕವಿತಾ ಜೈನ್‌ಪೇಟೆ ಬೆಂಬಲವಾಗಿದ್ದಾರೆ.











